Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೊಡವೆಯಿಂದ ಕಲೆ ಉಟಾಗದಿರಲು ಕೆಲ ಸಲಹೆಗಳು
ಮೊಡವೆ ಬಂದರೆ ಸ್ವಲ್ಪ ದಿನದಲ್ಲಿ ಅದು ಕಡಿಮೆಯಾಗುತ್ತದೆ, ಆದರೆ ಅದರ ಕಲೆ ಹಾಗೇ ಉಳಿದುಕೊಳ್ಳುತ್ತದೆ. ಆದ್ದರಿಂದ ಯುವಕ-ಯುವತಿಯರು ಮೊಡವೆಯೆಂದರೆ ದುಃಸ್ವಪ್ನ ಕಂಡಂತೆ ಬೆಚ್ಚಿ ಬೀಳುತ್ತಾರೆ. ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಅಥವಾ ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದು, ಟೆನ್ಷನ್, ದೂಳಿನಲ್ಲಿ ಓಡಾಟ ಈ ಕಾರಣಗಳಿಂದ ಮೊಡವೆಗಳು ಉಂಟಾಗುತ್ತದೆ. ಇದರಿಂದಾಗಿ ಮುಖದಲ್ಲಿ ಕಲೆಗಳು ಉಂಟಾಗುತ್ತವೆ. ಮೊಡವೆ ಬಂದಾಗ ಕಲೆಗಳು ಉಳಿಯದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಸ್ವಚ್ಛ ತ್ವಚೆಯನ್ನು ಪಡೆಯಿರಿ.
1. ಮೊಡವೆಯನ್ನು ಕಿವುಚಬೇಡಿ: ಮೊಡವೆ ಬಂದರೆ ಹೆಚ್ಚಿನವರು ಅದನ್ನು ಕಿವುಚುವ ಅಭ್ಯಾಸವಿರುತ್ತದೆ. ಈ ರೀತಿ ಮಾಡಿದರೆ ಮೊಡವೆ ಬೇಗನೆ ಒಣಗುತ್ತದೆ ಎಂದು ಭಾವಿಸಿ ಆ ರೀತಿ ಮಾಡುತ್ತಾರೆ. ಆದರೆ ಈ ರೀತಿ ಮಾಡಿದರೆ ಅದರಿಂದ ಮುಖದಲ್ಲಿ ಕಲೆ ಹಾಗೂ ಚಿಕ್ಕ-ಚಿಕ್ಕ ರಂಧ್ರಗಳು ಬೀಳುತ್ತದೆ.

2. ಆಗಾಗ ಮುಖ ತೊಳೆಯಬೇಕು: ಮೊಡವೆ ಇರುವವರು ದಿನದಲ್ಲಿ 6-7 ಬಾರಿ ಮುಖ ತೊಳೆಯಬೇಕು. ದಿನದಲ್ಲಿ 2 ಬಾರಿ ಮೊಡವೆ ಕಡಿಮೆಯಾಗಲು ಬಳಸುವ ಸೋಪು ಬಳಸಿ ಮುಖ ತೊಳೆಯಿರಿ, ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಮೇಕಪ್ ಸಾಧನಗಳನ್ನು ಬಳಸಲು ಹೋಗಬೇಡಿ. ಈ ರೀತಿ ಮಾಡಿದರೆ ಕೆಲವೇ ದಿನದಲ್ಲಿ ಮೊಡವೆ ಕಡಿಮೆಯಾಗುವುದು, ಅಲ್ಲದೆ ಕಲೆ ಸಮಸ್ಯೆ ಕೂಡ ಕಂಡು ಬರುವುದಿಲ್ಲ.
3. ಬಿಸಿಲಿಗೆ ಹೋಗಬೇಡಿ: ಮೊಡವೆಯ ಸೂರ್ಯನ ಕಿರಣಗಳು ತಾಗಿದಾಗ ಕಲೆ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಬಿಸಿಲಿಗೆ ಹೋಗಬಾರದು. ಒಂದು ವೇಳೆ ಹೋಗವುದಾದರೆ ಕೊಡೆ ಹಿಡಿದು ಹೋಗಿ.
4. ಫೇಸ್ ಪ್ಯಾಕ್: ಪ್ರತಿದಿನ ಸ್ವಲ್ಪ ರೋಸ್ ವಾಟರ್ ಗೆ ಗಂಧವನ್ನು ಅರೆದು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು ಹಾಗೂ ಮೊಡವೆಯ ಕಲೆಗಳಿದ್ದರೆ ಅವುಗಳು ಮಾಯವಾಗಿ ಮೃದುವಾದ, ಸುಂದರವಾದ ತ್ವಚೆ ನಿಮ್ಮದಾಗುವುದು.
ಸಲಹೆ: ಬೆಳ್ಳುಳ್ಳಿಯನ್ನು ಹಚ್ಚಿ ಸುಲಭವಾಗಿ ಮೊಡವೆಯನ್ನು ಹೋಗಲಾಡಿಸಬಹುದು, ಈ ವಿಧಾನದಿಂದ ಮೊಡವೆ ಕಡಿಮೆಯಾಗುವುದು ಆದರೆ ಕಲೆಗಳು ಉಂಟಾಗುತ್ತವೆ. ಆದ್ದರಿಂದ ಬೆಳ್ಳುಳ್ಳಿ ಬದಲು ಗಂಧ ಅಥವಾ ಚಂದನ ಬಳಸುವುದು ಒಳ್ಳೆಯದು.



Click it and Unblock the Notifications
