Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲು ದಪ್ಪವಾಗಿ ಕಾಣಲು ಈ ಕೇಶ ಆರೈಕೆ
ತುಂಬಾ ತೆಳುವಾದ ಕೂದಲಿದ್ದರೆ ಎಷ್ಟೇ ಅಲಂಕಾರ ಮಾಡಲಿ ಮುಖ ಡಲ್ಲಾಗಿ ಕಾಣುತ್ತದೆ. ಕೆಲವರಿಗೆ ನೈಸರ್ಗಿಕವಾಗಿ ದಪ್ಪವಾದ ಕೂದಲು ಇರುತ್ತದೆ. ಅಂತಹವರಿಗೆ ಕೂದಲು ಉದುರಿದರೆ ಮಾತ್ರ ಕೂದಲು ತೆಳ್ಳಗಾಗಿ ಕೂದಲಿನ ಸಮಸ್ಯೆ ಕಂಡು ಬರುವುದು. ಆದರೆ ಮತ್ತೆ ಕೆಲವರು ನೈಸರ್ಗಿಕವಾಗಿ ತುಂಬಾ ತೆಳು ಕೂದಲು ಹೊಂದಿರುತ್ತಾರೆ. ಅಂತಹ ಕೂದಲಿದ್ದರೆ ಮುಖದ ಲಕ್ಷಣ ಕೂಡ ಕಡಿಮೆಯಾಗುವುದು. ಇಂತಹ ಕೂದಲನ್ನು ಸ್ವಲ್ಪ ಆರೈಕೆ ಮಾಡಿದರೆ ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಒಂದು ವೇಳೆ ನಿಮ್ಮ ಕೂದಲು ತುಂಬಾ ತೆಳ್ಳಗಿದ್ದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಕೂದಲು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ಎಣ್ಣೆ ಮಸಾಜ್: 2ಚಮಚ ಹರಳೆಣ್ಣೆ, ಒಂದು ಚಮಚ ತೆಂಗಿನೆಣ್ಣೆ, ಒಂದು ಚಮಚ ಬಾದಾಮಿ ಎಣ್ಣೆ ಇವುಗಳನ್ನು ಮಿಶ್ರ ಮಾಡಿ ಎಣ್ಣೆ ಬಿಸಿ ಮಾಡಿ ಆ ಎಣ್ಣೆಯಿಂದ ಮಸಾಜ್ ಮಾಡಬೇಕು. ಈ ರೀತಿ ವಾರಕ್ಕೆ ಎರಡು ಬಾರಿ ಮಾಡಬೇಕು. ಈ ರೀತಿ ಮಾಡುತ್ತಾ ಬಂದರೆ ಹೊಸ ಕೂದಲು ಬಂದು ಕೂದಲು ಸೊಂಪಾಗಿ ಬೆಳೆಯಲಾರಂಭಿಸುತ್ತದೆ.
ಕೂದಲು ಕತ್ತರಿಸುವುದು: ಕೂದಲು ಕತ್ತರಿಸಿದರೆ ಕೂದಲು ಸ್ವಲ್ಪ ದಪ್ಪವಾಗಿ ಕಾಣುತ್ತದೆ. ತಲೆಯನ್ನು ತುಂಬಾ ಬಾರಿ ಬಾಚಬೇಡಿ, ಒದ್ದೆ ಕೂದಲನ್ನು ಬಾಚಬೇಡಿ.
ಈ ರೀತಿಯ ಕೂದಲಿಗೆ ಈ ಕೆಳಗಿನಂತೆ ನೈಸರ್ಗಿಕವಾದ ಹೇರ್ ಪ್ಯಾಕ್ ಮಾಡಿದರೆ ಕೂದಲು ಆಕರ್ಷಕವಾಗಿ ಕಾಣುವುದು.
ಬಾಳೆಹಣ್ಣಿನಿಂದ ಹೇರ್ ಪ್ಯಾಕ್: ಹಣ್ಣಾದ ಬಾಳೆಹಣ್ಣು ಮತ್ತು ಒಂದು ಚಮಚ ಜೇನು ಮಿಶ್ರ ಮಾಡಿ ತಲೆಗೆ ಹಚ್ಚಿ 20-25 ನಿಮಿಷ ಬಿಟ್ಟು ತಲೆ ತೊಳೆಬೇಕು. ಈ ರೀತಿ ಮಾಡಿದರೆ ಕೂದಲು ದಪ್ಪವಾಗಿ ಕಾಣುವುದು ಮತ್ತು ಹೊಳಪನ್ನು ಹೊಂದುತ್ತದೆ.
ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣು ತ್ವಚೆ ಆರೈಕೆ, ಕೂದಲಿನ ಆರೈಕೆಯಲ್ಲಿ ಬಳಸಿದರೆ ತುಂಬಾ ಒಳ್ಳೆಯದು. ಒಂದು ಅವಕಾಡೊ ಅಥವಾ ಬೆಣ್ಣೆ ಹಣ್ಣಿಗೆ ಒಂದು ಚಮಚ ಆಲೀವ್ ಎಣ್ಣೆ, ಒಂದು ಚಮಚ ಹರಳೆಣ್ಣೆ ಮಿಶ್ರ ಮಾಡಿ ಈ ಮಿಶ್ರಣವನ್ನು ತಲೆಗೆ ಹಚ್ಚಿ 20-25 ನಿಮಿಷ ಬಿಟ್ಟು ತಲೆ ತೊಳೆದರೆ ಕೂದಲು ದಪ್ಪವಾಗಿ ಕಾಣುತ್ತದೆ.
ಮೊಟ್ಟೆ: ಮೊಟ್ಟೆಯ ಬಿಳಿ ಬಳಸಿದರೆ ಕೂದಲಿನ ಆರೋಗ್ಯ ಹೆಚ್ಚಾಗುವುದು. ಮೊಟ್ಟೆಯ ಬಿಳಿ ಹಚ್ಚಿ 15 ನಿಮಿಷದ ನಂತರ ತಲೆ ತೊಳೆಯಬೇಕು. ಈ ರೀತಿ ವಾರದಲ್ಲಿ 2 ಬಾರಿ ಮಾಡಿದರೆ ಕೂದಲು ದಪ್ಪವಾಗಿ ಆಕರ್ಷಕವಾಗಿ ಕಾಣುವುದು.



Click it and Unblock the Notifications
