Latest Updates
-
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ!
ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಬೇಕೆ?

ದೇಹದಲ್ಲಿ ಹಾರ್ಮೋನ್ ಗಳ ಏರುಪೇರಿನಿಂದಾಗಿ ಈ ರೀತಿ ಉಂಟಾಗುತ್ತದೆ. ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಲು ಶೇವ್ ಮಾತ್ರ ಮಾಡಬೇಡಿ. ಈ ರೀತಿ ಮಾಡಿದರೆ ಕೂದಲು ಮತ್ತೆ ಬರುವಾಗ ಮತ್ತಷ್ಟು ಒರಟಾಗಿ ಬರುವುದು ಅಲ್ಲದೆ ಮುಖದಲ್ಲಿ ಹೆಣ್ಣಿನ ಕಳೆ ಇರುವುದಿಲ್ಲ.
ಆದ್ದರಿಂದ ಬೇಡದ ಕೂದಲನ್ನು ತೆಗೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
1. ಕಡಲೆ ಹಿಟ್ಟನ್ನು ಸ್ವಲ್ಪ ಹಾಲಿನಲ್ಲಿ ಮಿಶ್ರ ಮಾಡಿ ಅದಕ್ಕೆ ಸ್ವಲ್ಪ ಅರಿಶಿಣ ಹಾಕಿ ನಂತರ ಒಂದು ಚಮಚ ತಾಜಾ ಕೆನೆ ಹಾಕಿ ಮಿಶ್ರ ಮಾಡಿ ಅದನ್ನು ಮುಖದಲ್ಲಿ ಬೇಡದ ಕೂದಲಿರುವ ಜಾಗಕ್ಕೆ ಹಚ್ಚಬೇಕು. ನಂತರ 20 ನಿಮಿಷ ಬಿಟ್ಟು ಮುಖವನ್ನು ಕೈಯಿಂದ ಸ್ಕ್ರಬ್ ಮಾಡಬೇಕು. ಈ ರೀತಿ ಮಾಡುವಾಗ ಸ್ವಲ್ಪ ಕಿರಿಕಿರಿ ಅನಿಸಬಹುದು. ಆದರೆ ಈ ರೀತಿ ಮಾಡಿದ್ದೇ ಆದರೆ ಗಲ್ಲ ಮತ್ತು ಮೂಗಿನ ಕೆಳ ಭಾಗದಲ್ಲಿ ಇರುವ ಬೇಡದ ಕೂದಲು ತೆಗೆಯಲು ಸಹಕಾರಿಯಾಗಿದೆ.
2. ಸಕ್ಕರೆ, ನಿಂಬೆ ರಸ ಮತ್ತು ನೀರು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ಒಂದು ತಿಂಗಳಿನವರೆಗೆ ಮಾಡಿದರೆ ಬೇಡದ ಕೂದಲಿನಿಂದ ಮುಕ್ತಿ ಪಡೆಯಬಹುದು.
3. ಒಂದೂವರೆ ಚಮಚ ಜೋಳದ ಹಿಟ್ಟು, ಒಂದು ಚಮಚ ಸಕ್ಕರೆ, ಒಂದು ಮೊಟ್ಟೆ ಇವುಗಳಿಂದ ಸ್ವಲ್ಪ ಗಟ್ಟಿಯಾದ ಪೇಸ್ಟ್ ಮಾಡಬೇಕು. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಬೇಕು. ನಂತರ ಇದು ಒಣಗಿದ ನಂತರ ಆ ಪದರವನ್ನು ಫೇಸ್ ಮಾಸ್ಕ್ ಕೀಳುವ ರೀತಿಯಲ್ಲಿ ಕಿತ್ತು ತೆಗೆಯಬೇಕು. ಈ ರೀತಿ ಮಾಡಿ ಬೇಡದ ಕೂದಲನ್ನು ಮುಖದಿಂದ ತೆಗೆಯಬಹುದು.
4. ವ್ಯಾಕ್ಸಿಂಗ್‌ನಿಂದ ಈ ರೀತಿಯ ಬೇಡದ ಕೂದಲನನ್ನು ತೆಗೆಯಬಹುದು. ಆದರೆ ತುಂಬಾ ಸೂಕ್ಷ್ಮ ತ್ವಚೆ ಇರುವವರೆಗೆ ಈ ರೀತಿ ವ್ಯಾಕ್ಸಿಂಗ್ ಮಾಡಿದರೆ ಅಲರ್ಜಿ ಕಂಡ ಬರುತ್ತದೆ. ಅಂತಹವರು ಥ್ರೆಡ್ಡಿಂಗ್ ಮಾಡುತ್ತಿರಬೇಕು. ಥ್ರೆಡ್ಡಿಂಗ್ ತಿಂಗಳಿಗೆ ಒಮ್ಮೆ ಮಾಡಿಸಬೇಡಿ. ತಿಂಗಳಿನಲ್ಲಿ ಒಮ್ಮೆ ಮಾಡಿಸಿದರೆ ಶೇವಿಂಗ್ ಮಾಡಿದ ರೀತಿ ಕಾಣುವುದು. ಆದ್ದರಿಂದ 2 ದಿನಕ್ಕೆ ಒಮ್ಮೆ ನೀವೆ ಮಾಡಿ, ಇದರಿಂದ ಬೇಡದ ಕೂದಲು ಬೆಳೆಯುವುದಿಲ್ಲ. ಮುಖ ಕೂಡ ನೀಟಾಗಿ ಕಾಣುವುದು.



Click it and Unblock the Notifications