Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಕಾಂತಿಯುತ ತ್ವಚೆಯನ್ನು ಪಡೆಯುವುದು ಹೇಗೆ?
ಹೊಳೆಯುವ ತ್ವಚೆ ಯಾರಿಗೆ ತಾನೇ ಬೇಡ ಹೇಳಿ.ಗುಂಪಿನಲ್ಲಿ ಎದ್ದು ಕಾಣಲು, ಆತ್ಮವಿಶ್ವಾಸದಿಂದ ಮುನ್ನುಗ್ಗಲು ನಮ್ಮ ಬಾಹ್ಯ ರೂಪು ಅದರಲ್ಲೂ ಆಕರ್ಷಕ ತ್ವಚೆ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಮಾಲಿನ್ಯಯುಕ್ತ ಯುಗದಲ್ಲಿ ಚರ್ಮ ತನ್ನ ತಾಜಾತನವನ್ನು ಕಳೆದು ಕೊಂಡು ಸೊರಗಿದಂತೆ ಕಾಣುತ್ತದೆ.ಇದನ್ನು ಮರೆಮಾಚಲು ನಾವು ಮಾರುಕಟ್ಟೆಯಲ್ಲಿ ಸಿಗುವ ನಾನಾಬಗೆಯ ಸೌಂದರ್ಯ ಪ್ರಸಾಧನಗಳನ್ನು ಬಳಸುತ್ತೇವೆ. ಆದರೆ ಈ ಪ್ರಸಾಧನಗಳ ಸರಿಯಾದ ಬಳಕೆಯ ಪ್ರಾರ್ಥಮಿಕ ತಿಳುವಳಿಕೆ ಇಲ್ಲದಿದ್ದರೆ ಅವುಗಳ ಸಕಾರಾತ್ಮಕ ಪರಿಣಾಮ ನಮಗೆ ದೊರೆಯಲಾರದು.
ಹೊಳೆಯುವ ತ್ವಚೆಯನ್ನು ಸೌಂದರ್ಯ ಪ್ರಸಾಧನಗಳಿಂದಲೂ ಹಾಗು ಕೆಲವು ಮನೆ ಔಷಧಿಗಳಿಂದಲೂ ಪಡೆಯಬಹುದು.ಆದರೆ ಮನೆ ಔಷಧಿಗಳು ಹೆಚ್ಚು ಸುರಕ್ಷಿತ ಹೊಳೆಯುವ ತ್ವಚೆಗಾಗಿ ಇಲ್ಲಿ ಕೆಲವು ಸುಲಭೊಪಾಯಗಳನ್ನು ನಮೂದಿಸಲಾಗಿದೆ. ಇವುಗಳನ್ನು ಅಳವಡಿಸಿಕೊಂಡಲ್ಲಿ ಖಂಡಿತ ನಿಮಗೆ ನಿರಾಶೆಯಾಗುವದಿಲ್ಲ.

1. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮುಖ ತೊಳೆಯಬೇಕು.ನೀವು ಬಳಸುವ ಸೋಪು ಮೃದುವಾಗಿರತಕ್ಕದ್ದು. ಸೋಪನ್ನು ಹಚ್ಚಿ ತೊಳೆದ ಮೇಲೂ ನಿಮ್ಮ ತ್ವಚೆ ಒರಟಾಗುವುದು,ಬಿಗಿಯುವುದು ಆದಲ್ಲಿ ನಿಮ್ಮ ಸೋಪು ತ್ವಚೆಯ ಮೇಲೆ ಕೆಟ್ಟಪರಿಣಾಮ ಬೀರುತ್ತಿದ್ದು ನೀವು ಅದನ್ನು ಬದಲಿಸಿದರೆ ಒಳ್ಳೆಯದು.
2. ತ್ವಚೆಯನ್ನು ತೊಳೆದ ಮೇಲೆ ಒರಟಾದ ವಸ್ತ್ರದಿಂದ ಗಟ್ಟಿಯಾಗಿ ಉಜ್ಜದೇ ಮೃದುವಾದ ಬಟ್ಟೆಯಿಂದ ಮೆಲ್ಲನೆ ತಟ್ಟಬೇಕು.
3. ಯಾವಾಗಲೂ ನಿಮ್ಮ ಮೇಕಪ್ ನ್ನು ತೆಗೆದು ತ್ವಚೆಯನ್ನು ಶುಭ್ರಗೊಳಿಸಿಕೊಂಡು ಮಲಗಿರಿ.ಹಾಗೂ ನಿಮ್ಮ ಹಾಸಿಗೆ ಹೊದಿಕೆ ಮತ್ತು ದಿಂಬಿನ ಕವರುಗಳನ್ನು ಆಗಾಗ ಬದಲಾಯಿಸುತ್ತಿರಿ.ಇದರಿಂದ ಬಾಕ್ಟೇರಿಯ ಸೋಂಕು, ದೂಳಿನ ಅಲರ್ಜಿ ಹಾಗೂ ಮೊಡವೆಗಳನ್ನು ಕಡಿಮೆ ಮಾಡಬಹುದು.
4. ಸಾದ್ಯವಾದಲ್ಲಿ ಸ್ಕಿನ್ ಟೋನರ್ ಬಳಸಿರಿ. ಇದು ನಿಮ್ಮ ತ್ವಚೆಯಲ್ಲಿನ ಹೆಚ್ಚಿನ ಎಣ್ಣೆಯಂಶವನ್ನು ಕಡಿಮೆ ಮಾದುವದಲ್ಲದೇ ದೂಳನ್ನು ತೆಗೆದುಹಾಕಿ, ರೋಮಕೂಪಗಳನ್ನು ತುಂಬುತ್ತದೆ.



Click it and Unblock the Notifications
