Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಬ್ಲಾಕ್ ಹೆಡ್ಸ್ ನಿವಾರಿಸುತ್ತೆ ಈ ಫೇಸ್ ಮಾಸ್ಕ್

ಇನ್ನು ಮುಂದೆ ಬ್ಲಾಕ್ ಹೆಡ್ಸ್ ಚಿಂತೆ ಬಿಡಿ, ಈ ಕೆಳಗಿನ ಫೇಸ್ ಮಾಸ್ಕ್ ನಲ್ಲಿ ಯಾವುದಾದರು ಒಂದನ್ನು ಮಾಡಿ ನೋಡಿ ಸ್ವಚ್ಛ ಮತ್ತು ಸುಂದರ ತ್ವಚೆಯ ಒಡೆಯರು ನೀವಾಗುವಿರಿ.
ಫೇಸ್ ಮಾಸ್ಕ್:
ಮೊಟ್ಟೆಯ ಮಾಸ್ಕ್: ಮುಖದಲ್ಲಿ ಬ್ಲಾಕ್ ಹೆಡ್ಸ್ ಸಮಸ್ಯೆ ನಿವಾರಿಸಲು ಮಾತ್ರವಲ್ಲ, ಮುಖದಲ್ಲಿ ಚಿಕ್ಕ ರಂಧ್ರಗಳಿದ್ದರೆ ಅದು ಎದ್ದು ಕಾಣದಂತೆ ಮಾಡುವಲ್ಲಿ ಈ ಮಾಸ್ಕ್ ತುಂಬಾ ಪ್ರಯೋಜನಕಾರಿಯಾಗಿದೆ. ಒಂದು ಮೊಟ್ಟೆಯ ಬಿಳಿಗೆ 1 ಚಮಚ ಜೆಲಾಟಿನ್ ಮತ್ತು 2 ಚಮಚ ಹಾಲು ಮಿಶ್ರ ಮಾಡಿ ಕಡಿಮೆ ಉರಿಯಲ್ಲಿ ಒಂದು ನಿಮಿಷ ಬಿಸಿ ಮಾಡಬೇಕು. ನಂತರ ಅದನ್ನು ಚೆನ್ನಾಗಿ ತಿರುಗಿಸಿ ಪೇಸ್ಟ್ ರೀತಿ ಮಾಡಿ ಆರಲು ಬಿಡಬೇಕು. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 5-10 ನಿಮಿಷ ಬಿಡಬೇಕು. ಮಾಸ್ಕ್ ಒಣಗಿದ ನಂತರ ಕಿತ್ತು ತೆಗೆಯಬೇಕು. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದರೆ ಬ್ಲಾಕ್ ಹೆಡ್ಸ್ ಕಡಿಮೆಯಾಗುವುದು.
ನಿಂಬೆರಸ ಮತ್ತು ಮೊಟ್ಟೆಯ ಬಿಳಿಯಿಂದ ಮಾಸ್ಕ್: ನಿಂಬೆರಸದಲ್ಲಿರುವ ಆಲ್ಫಾ ಹೈಡ್ರೋಕ್ಸಿ ಆಸಿಡ್ ಅಂಶವು ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದರ ಜೊತೆಗೆ ತ್ವಚೆಯನ್ನು ಬಿಗಿಗೊಳಿಸುತ್ತದೆ. ಆದ್ದರಿಂದ ಮೊಟ್ಟೆಯ ಬಿಳಿಗೆ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೆಗೆಯಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬನ್ನಿ.
ಕಿತ್ತಳೆಯ ಸಿಪ್ಪೆಯಿಂದ ಮಾಸ್ಕ್: ಬ್ಲಾಕ್ ಹೆಡ್ಸ್ ನಿವಾರಣೆಗೆ ಈ ಫೇಸ್ ಮಾಸ್ಕ್ ಅನ್ನು ಹೆಚ್ಚಾಗಿ ಮಾಡಲಾಗುವುದು. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಬಿಸಾಡದೆ ಒಣಗಿಸಿ ಇಡಬೇಕು. ನಂತರ ಇದನ್ನು ಹಾಲಿನ ಜೊತೆ ಅರೆದು ಪೇಸ್ಟ್ ಮಾಡಿ ಅದನ್ನು ಪ್ರತಿದಿನ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಾ ಬಂದರೆ ಬ್ಲಾಕ್ ಹೆಡ್ಸ್ ಸಮಸ್ಯೆ ಇರುವುದಿಲ್ಲ, ಮುಖ ತುಂಬಾ ಕ್ಲಿಯರ್ ಆಗಿ ಕಾಣಿಸುವುದು.



Click it and Unblock the Notifications
