Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಡವೆ ಮುಕ್ತ ತ್ವಚೆಗಾಗಿ ಸುಲಭದ ವಿಧಾನ

ಕೆಲವರ ಮುಖದಲ್ಲಿ ಮೊಡವೆಯಿಂದಾಗಿ ರಂಧ್ರಗಳು ಉಂಟಾಗುವುದು. ಈ ಮೊಡವೆ ಸಮಸ್ಯೆಗೆ ಕೆಮಿಕಲ್ (ರಾಸಾಯನಿಕ) ಕ್ರೀಮ್‌ಗಳನ್ನು ಬಳಸುವ ಬದಲು ಈ ಕೆಳಗಿನ ಮನೆ ಮದ್ದು ಮಾಡಿದರೆ ಮೊಡವೆರಹಿತ ಮತ್ತು ಕಲೆ ರಹಿತ ತ್ವಚೆ ಪಡೆಯಬಹುದಾಗಿದೆ.
ಮೊಡವೆಗೆ ಮನೆಮದ್ದು:
1. ಪ್ರತಿದಿನ ಅರಿಶಿಣ ಅದರಲ್ಲೂ ಕಸ್ತೂರಿ ಅರಿಶಿಣ ತೇಯ್ದು ಹಚ್ಚಿದರೆ ಮೊಡವೆ ಕಡಿಮೆಯಾಗುವುದು, ಕೆಲವರಿಗೆ ಅರಿಶಿಣ ಅಲರ್ಜಿ ಉಂಟು ಮಾಡಬಹುದು, ಅಂತಹವರು ಚಂದನವನ್ನು ಬಳಸಬಹುದು.
2. ಮುಖವನ್ನು ರೋಸ್ ವಾಟರ್ ನಿಂದ ಕ್ಲೆನ್ಸ್ ಮಾಡುವುದು ಒಳ್ಳೆಯದು. ನಿಂಬೆರಸ, ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಂದೆರಡು ಗಂಟೆ ಕಾಲ ಬಿಟ್ಟು ತೊಳೆದರೆ ಮೊಡವೆ ಕಡಿಮೆಯಾಗುತ್ತದೆ.
3. ನಿಂಬೆರಸವನ್ನು ದಿನವೂ ಆಗಾಗ ಹಚ್ಚುತ್ತಲೇ ಬಂದರೆ ಮೊಡವೆ ಕಡಿಮೆಯಾಗುತ್ತದೆ.
4. ಮೂರು-ನಾಲ್ಕು ಎಸಳು ಹಸಿ ಬೆಳ್ಳುಳ್ಳಿಯನ್ನು ದಿನವೂ ತಿನ್ನುತ್ತಾ ಬಂದರೂ ಚರ್ಮಕ್ಕೆ ಒಳ್ಳೆಯದು. ಅದು ರಕ್ತವನ್ನು ಶುದ್ಧೀಕರಿಸುವ ಮೂಲಕ ಚರ್ಮವನ್ನು ನಯವಾಗಿಸುತ್ತದೆ.
5. ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪುಗಳನ್ನು ಪೇಸ್ಟ್ ಮಾಡಿ ಅದಕ್ಕೆ ಚಿಟಿಕೆಯಷ್ಟು ಅರಿಶಿಣ ಸೇರಿಸಿ ಮುಖಕ್ಕೆ ದಿನವೂ ರಾತ್ರಿ ಹಚ್ಚುತ್ತಾ ಬಂದಲ್ಲಿ ಮೊಡವೆಯ ತೊಂದರೆಯಿರುವವರಿಗೆ ಉತ್ತಮ ಪರಿಹಾರ ಸಿಗುತ್ತದೆ.
6. ಮೆಂತ್ಯ ಸೊಪ್ಪನ್ನು ಪೇಸ್ಟ್ ಮಾಡಿ ಪ್ರತಿ ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳ್ಗಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಮೊಡವೆ, ಬ್ಲ್ಯಾಕ್‌ಹೆಡ್ಸ್ ನಿವಾರಣೆಯಾಗುವುದು.
7. ಸೌತೆಕಾಯಿ ರಸವನ್ನು ಮುಖ, ಕತ್ತು, ಕುತ್ತಿಗೆ, ಕಣ್ಣಿನ ಸುತ್ತಲೂ ಹಚ್ಚುವುದರಿಂದ ಮುಖಕ್ಕೆ ಕಾಂತಿ ಬರುತ್ತದೆ.
8. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಮಾಡಿ ಪೇಸ್ಟ್ ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಎಣ್ಣೆ ತ್ವಚೆ ಸಮಸ್ಯೆಯನ್ನು ನಿವಾರಿಸಬಹುದು.
9. ಮೊಟ್ಟೆಯ ಬಿಳಿಗೆ ಹತ್ತಿಯನ್ನು ಅದ್ದಿ ಅದರಿಂದ ಮುಖವ್ನು ಉಜ್ಜಿ 5 ನಿಮಿಷದ ಬಳಿಕ ಮುಖ ತೊಳೆಯುವುದು ಒಳ್ಳೆಯದು. ಈ ರೀತಿ ಮಾಡಿ ಮೊಡವೆ ರಂಧ್ರಗಳನ್ನು ಮರೆಮಾಚಬಹುದು.
10. ಬಾದಾಮಿಯನ್ನು ಜೇನಿನೊಂದಿಗೆ ಅರೆದು ಮುಖಕ್ಕೆ ಹಚ್ಚಿ ಮಸಾಜ್ ಮಾಡಿದರೆ ಮೊಡವೆ ಕಡಿಮೆಯಾಗುವುದು, ತ್ವಚೆ ಕಾಂತಿ ಹೆಚ್ಚುವುದು. ಕಡಲೆ ಹಿಟ್ಟು ಬಳಸಿ ಮುಖ ತೊಳೆದರೆ ಮೃದುವಾದ ತ್ವಚೆ ಪಡೆಯಬಹುದು.



Click it and Unblock the Notifications
