Latest Updates
-
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ
ಸೌಂದರ್ಯ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಬ್ಲೀಚ್ ಮಾಡಿಸುತ್ತಿದ್ದವರು ನಂತರ ಬ್ಲೀಚ್ ಮಾಡಿಸುವುದನ್ನು ಬಿಟ್ಟರೆ ಮುಖದಲ್ಲಿ ಕಪ್ಪು ಕಲೆಗಳು ಉಂಟಾಗುವುದು, ಅಲ್ಲದೆ ಅಧಿಕ ಕೆಮಿಕಲ್ ಬಳಸಿದರೆ ಮುಖದಲ್ಲಿ ನೆರಿಗೆ ಬೇಗನೆ ಮೂಡುತ್ತದೆ. ಆದ್ದರಿಂದ ಸೌಂದರ್ಯ ವರ್ಧನೆಗೆ ಆದಷ್ಟು ನೈಸರ್ಗಿಕ ವಿಧಾನವನ್ನು ಬಳಸುವುದು ಒಳ್ಳೆಯದು. ಮನೆಯಲ್ಲಿಯೆ ದೊರೆಯುವ ವಸ್ತುಗಳಿಂದ ಸೌಂದರ್ಯ ಸಮಸ್ಯೆಯನ್ನು ಹೇಗೆ ಹೋಗಲಾಡಿಸಬಹುದು ಎಂದು ತಿಳಿಯಲು ಮುಂದೆ ಓದಿ.
1. ಲೋಳೆಸರ: ಮನೆಯಲ್ಲಿ ಒಂದು ಲೋಳೆಸರ ಗಿಡ ನೆಡುವುದು ಒಳ್ಳೆಯದು. ಏಕೆಂದರೆ ಇದನ್ನು ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕವಾಗಿ ಬಳಸಬಹುದು. ಇದನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು. ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ಕಲೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ. ಲೋಳೆಸರದ ಜೆಲ್ (Aloe Vera gel) ದೊರೆಯುವುದಾದರೂ ಉತ್ತಮ ಫಲ ಕಾಣಲು ನೈಸರ್ಗಿಕವಾದ ಜೆಲ್ ಬಳಸುವುದು ಒಳ್ಳೆಯದು.
2. ಕೋಕಾ ಬಟರ್: ಇದನ್ನು ಕೋಕಾ ಬೀನ್ಸ್ ನಿಂದ ತಯಾರಿಸಲಾಗುವುದು. ತುಂಬಾ ಒಣ ತ್ವಚೆ ಹೊಂದಿರುವವರು ಇದನ್ನು ಮುಖಕ್ಕೆ ಹಚ್ಚಿದರೆ ಪರಿಹಾರ ದೊರೆಯುವುದು. ಸೌಂದರ್ಯ ವರ್ಧಕ ಅಂಗಡಿಗಳಲ್ಲಿ ಕೇಳಿದರೆ ಇದರ ಕ್ರೀಮ್ ಕೂಡ ದೊರೆಯುವುದು.
3. ಬೆಣ್ಣೆ ಹಣ್ಣು: ಅವಕಾಡೊ ಎಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಾಗಿ ಇರುವುದಿಂದ ತ್ವಚೆಗೆ ತುಂಬಾ ಒಳ್ಳೆಯದು. ಆದ್ದರಿಂದ ಹಣ್ಣಿನ ಫೇಶಿಯಲ್ ನಲ್ಲಿ ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅವಕಾಡೊ ಹಣ್ಣನ್ನು ಚೆನ್ನಾಗಿ ಹಿಸುಕಿ ಅದನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ಮುಖ ತೊಳೆದರೆ ಮುಖಕ್ಕೆ ಯಾವ ಫೇಶಿಯಲ್ ಬೇಕಾಗಿಲ್ಲ.
4. ಟೂತ್ ಪೇಸ್ಟ್: ಟೂತ್ ಪೇಸ್ಟ್ ಹಲ್ಲುಗಳ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಮೊಡವೆ ಸಮಸ್ಯೆಗೆ ಇದನ್ನು ಬಳಸಬಹುದು. ಮೊಡವೆ ಮೇಲೆ ಟೂತ್ ಪೇಸ್ಟ್ ಹಾಕಿದಾಗ ಒಂಥರಾ ತ್ವಚೆ ಬಿಗಿದುಕೊಳ್ಳುವ ಅನುಭವವಾಗುತ್ತದೆ. ಆದರೆ ಟೂತ್ ಪೇಸ್ಟ್ ಹಚ್ಚಿದ ಅರ್ಧ ಗಂಟೆ ಬಳಿಕ ಮುಖ ತೊಳೆದುಬಿಡಿ. ತುಂಬಾ ಹೊತ್ತು ಇಟ್ಟರೆ ತ್ವಚೆ ಆ ಭಾಗದಲ್ಲಿ ಸುಟ್ಟ ರೀತಿಯಾಗುವುದು.
5. ಮೊಟ್ಟೆ: ಮೊಟ್ಡೆಯ ಬಿಳಿಯನ್ನು ಕೂದಲಿಗೆ ಹಚ್ಚಿ ತೊಳೆದರೆ ಅದು ಉತ್ತಮ ಕಂಡೀಷನರ್ ರೀತಿ ವರ್ತಿಸುತ್ತದೆ. ಮೊಟ್ಟೆಯನ್ನು ತೆಂಗಿನೆಣ್ಣೆ ಅಥವಾ ಸಾಸಿವೆಯೆಣ್ಣೆ ಜೊತೆ ಮಿಶ್ರ ಮಾಡಿ ಹಚ್ಚಿದರೆ ಉತ್ತಮ ಪ್ರಯೋಜನ ಸಿಗುವುದು.
6. ಬೂದಿ: ಕೆಲವರಿಗೆ ಚರ್ಮದ ಮೇಲೆ ಸಣ್ಣಗಂಟು ಕಂಡುಬರುತ್ತದೆ.ಇದನ್ನು ನರೂಲಿ, ನರಹುಲಿ, ನರವುಲಿ ಅಂತಲೂ ಕರೆಯುತ್ತಾರೆ. ಇದು ಬಂದರೆ ತಣ್ಣನೆಯ ಬೂದಿಯನ್ನು ತೆಗೆದುಕೊಂಡು ಅದರ ಮೇಲೆ ಹಚ್ಚುತ್ತಾ ಬಂದರೆ ಆ ಸಮಸ್ಯೆ ನಿವಾರಣೆಯಾಗುವುದು.
7. ಬಾಳೆ ಹಣ್ಣಿನ ಸಿಪ್ಪೆ: ಬಾಳೆ ಹಣ್ಣಿನ ಸಿಪ್ಪೆಯನ್ನು ಅರೆದು ನರೂಲಿ ಬಂದ ಜಾಗಕ್ಕೆ ಹಚ್ಚುತ್ತಾ ಬಂದರೆ ಗುಣಮುಖವಾಗುವುದು. ಆದರೆ ಹೀಗೆ ಗುಣಮುಖವಾಗಲು ಒಂದು ತಿಂಗಳಾದರೂ ತೆಗೆದುಕೊಳ್ಳುತ್ತದೆ.
8. ಮಯೋನೈಸ್: ವಾರಕ್ಕೊಮ್ಮೆ ತಲೆಗೆ ಮಯೋನೈಸ್ ಹಚ್ಚುವುದು ಒಳ್ಳೆಯದು, ಆದರೆ ಎಣ್ಣೆ ಮತ್ತು ಮೊಟ್ಟೆ ಬಳಸಿ ತಯಾರಿಸಿದ ಮಯೋನೈಸ್ ಹಚ್ಚಬೇಕು.
9. ಹರಳೆಣ್ಣೆ: ಕೂದಲು ಉದುರುವ ಸಮಸ್ಯೆ ನಿವಾರಣೆಗೆ, ಕೂದಲು ಸೊಂಪಾಗಿ ಬೆಳೆಯಲು ಹರಳೆಣ್ಣೆಯನ್ನು ಬಳಸುವುದು ಒಳ್ಳೆಯದು.
10. ಓಟ್ಸ್: ಓಟ್ಸ್ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಒಳ್ಳೆಯದು. ಓಟ್ಸ್ ಅನ್ನು ಪುಡಿ ಮಾಡಿ ಅದನ್ನು ಹಾಲಿಗೆ ಹಾಕಿ ಅದರಿಂದ ಮುಖಕ್ಕೆ ಸ್ಕ್ರಬ್ ಮಾಡಿದರೆ ಮುಖದ ಕಾಂತಿ ಹೆಚ್ಚಾಗುವುದು.



Click it and Unblock the Notifications










