Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೌಂದರ್ಯವರ್ಧಕ ಹಣ್ಣುಗಳಿವು!

ಈ ಹಣ್ಣುಗಳನ್ನು ಪ್ರತಿನಿತ್ಯ ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದು, ಯಾವುದೇ ರೀತಿಯ ತ್ವಚೆ ಸಮಸ್ಯೆಯಾಗಲಿ, ಅಕಾಲಿಕ ನೆರಿಗೆಯಾಗಲಿ ಉಂಟಾಗುವುದಿಲ್ಲ.
ಆದ್ದರಿಂದ ಸೌಂದರ್ಯ ವರ್ಧಕ ಕ್ರೀಮ್ ಗಳಲ್ಲಿ ಯಾವುದು ಬಳಸಿದರೆ ಒಳ್ಳೆಯದು ಎಂದು ತಲೆಕೆಡಿಸುವ ಬದಲು ಈ ಕೆಳಗಿನ ಸೌಂದರ್ಯ ವರ್ಧಕ ಹಣ್ಣುಗಳನ್ನು ತಿಂದರೆ ಸಾಕು ಕಾಂತಿಯುತ ತ್ವಚೆ ನಿಮ್ಮದಾಗುವುದು.
1. ಕರ್ಬೂಜದ ಹಣ್ಣು (ಮಸ್ಕ್ ಮೆಲನ್): ಇದರಲ್ಲಿ antioxidant ಅಂಶ ಅಧಿಕವಿದ್ದು, ಇವುಗಳು ತ್ವಚೆಯನ್ನು ಒತ್ತಡ ಮತ್ತು ಬಿಸಿಲಿನಿಂದ ಹಾಳಾಗದಂತೆ ಕಾಪಾಡುತ್ತದೆ. ಇದರಲ್ಲಿರುವ enzymes ತ್ವಚೆಯಲ್ಲಿ ನೆರಿಗೆ ಬರದಂತೆ ತಡೆಯುತ್ತದೆ. ಈ ಹಣ್ಣಿನಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಇದನ್ನು ಅಧಿಕ ತಿಂದು, ಕಡಿಮೆ ಕ್ಯಾಲೋರಿ ಇರುವ ಆಹಾರ ತಿನ್ನುತ್ತಾ ಬಂದರೆ ಅಧಿಕ ತೂಕವನ್ನು ಕಡಿಮೆ ಮಾಡಬಹುದು. ತ್ವಚೆ ಹೊಳಪು ಕೂಡ ಹೆಚ್ಚಾಗುವುದು.
2. ದಾಳಿಂಬೆ: ದಾಳಿಂಬೆಯಲ್ಲಿ ವಿಟಮಿನ್ ಬಿ5 ಮತ್ತು ಸಿ , ಪೊಟಾಷ್ಯಿಯಂ ಅಂಶಗಳು ಅಧಿಕವಿದ್ದು ಇವುಗಳು ತ್ವಚೆ ಸಂರಕ್ಷಣೆಯನ್ನು ಮಾಡುತ್ತದೆ. ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯುತ್ತಾ ಬಂದರೆ ತ್ವಚೆಯ ಕಾಂತಿ ಹೆಚ್ಚಾಗುವುದು. ದೇಹದಲ್ಲಿ ರಕ್ತ ಸಂಚಲನ ಉತ್ತಮವಾಗಿ ನಡೆಯುತ್ತದೆ. ಮೊಡವೆ ಕಲೆಗಳಿದ್ದರೆ ದಾಳಿಂಬೆ ರಸವನ್ನು ಆ ಭಾಗಕ್ಕೆ ಹಚ್ಚುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು, ಮೊಡವೆ ಕಲೆಗಳು ಮಾಯವಾಗುತ್ತದೆ.
ಮೊಡವೆ ಮುಖ್ಯವಾಗಿ ಅಜೀರ್ಣ ಸಮಸ್ಯೆ, ಹಾರ್ಮೋನ್ ಗಳ ಅಸಮತೋಲನದಿಂದ ಉಂಟಾಗುತ್ತದೆ. ದಾಳಿಂಬೆಯನ್ನು ಸೇವಿಸಿದರೆ ಈ ಸಮಸ್ಯೆಗಳು ನಿವಾರಣೆಯಾಗಿ ಮೊಡವೆ ಸಮಸ್ಯೆ ನಿವಾರಣೆಯಾಗುವುದು. ಮೃದು ಮತ್ತು ಕಾಂತಿಯುತ ತ್ವಚೆ ಬೇಕೆಂದು ಬಯಸುವವರು ಪ್ರತಿದಿನ ದಾಳಿಂಬೆ ರಸವನ್ನು ಪ್ರತಿದಿನ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುತ್ತಾ ಬಂದರೆ ನೀವು ಬಯಸಿದಂತಹ ತ್ವಚೆ ಸೌಂದರ್ಯ ನಿಮ್ಮದಾಗುವುದು.
3. ಟೊಮೆಟೊ: ಟೊಮೆಟೊ ತಿಂದರೆ ದೇಹದ ತೂಕ ಕಡಿಮೆಯಾಗುವುದು ಮಾತ್ರವಲ್ಲ, ಮುಖದ ಕಾಂತಿ ಕೂಡ ಹೆಚ್ಚುವುದು. ಟೊಮೆಟೊ ಫೇಶಿಯಲ್ ಅನ್ನು ಈ ಕೆಳಗಿನ ವಿಧಾನದಲ್ಲಿ ಮಾಡಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
* ಹಣ್ಣಾದ ಟೊಮೆಟೊ 1
* 1 ಚಮಚ ನಿಂಬೆ ರಸ
* ಒಂದು ಚಮಚ ಓಟ್ ಮೀಲ್ಸ್
ಮಾಡುವ ವಿಧಾನ: ಈ ಮಿಶ್ರಣವನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಬಿಸಿ ನೀರಿನಿಂದ ಮುಖ ತೊಳೆಯಬೇಕು.
4. ಕಿವಿ ಹಣ್ಣು: ಇದರಲ್ಲಿ ವಿಟಮಿನ್ ಸಿ, ಪೊಟಾಷಿಯ್ಯಂ, ಫಾಲಿಕ್ ಆಸಿಡ್ ವಿಟಮಿನ್ ಇ , ನಾರಿನಂಶ, ಸತು ಈ ಅಂಶಗಳು ಹೆಚ್ಚಾಗಿ ಇದ್ದು ಇದನ್ನು ತಿಂದರೆ ದೇಹದ ಮತ್ತು ಸೌಂದರ್ಯದ ಆರೋಗ್ಯ ಹೆಚ್ಚುವುದು. ಇದನ್ನು ತಿಂದರೆ ಬೇಗನೆ ಹೊಟ್ಟೆ ತುಂಬುವುದರಿಂದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಸಾಕು. ಇದರಿಂದಾಗಿ ತೂಕ ಇಳಿಕೆಗೆ ಸಹಕಾರಿಯಾಗುವುದು. ಇದು ಕೂದಲು ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
5. ಗ್ರೀನ್ ಟೀ: ಗ್ರೀನ್ ಟೀ ಕುಡಿಯುವುದಿಂದ ದೇಹ ತೂಕ ಕಡಿಮೆ ಆಗುವುದರೊಂದಿಗೆ ದೇಹದ ಕಾಂತಿ ಹೆಚ್ಚುಸುತ್ತದೆ, ಅಲ್ಲದೆ ಮೊಡವೆ ಸಮಸ್ಯೆ ಇರುವವರು ಈ ಕೆಳಗಿನಂತೆ ಇದನ್ನು ಬಳಸಿದರೆ ತ್ವಚೆಯ ಸಮಸ್ಯೆಗೆ ನಿವಾರಣೆಯಾಗುವುದು.
1. ಸ್ವಲ್ಪ ಗ್ರೀನ್ ಟೀ ಸೊಪ್ಪನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಅದರ ಪೇಸ್ಟ್ ಅನ್ನು ಮೊಡವೆಯ ಕಲೆಗಳ ಮೇಲೆ ಹಚ್ಚುತ್ತಾ ಬಂದರೆ ಮುಖದ ಕಲೆಗಳು ಮಾಯವಾಗಿ ಮುಖವು ಕಾಂತಿ ಹೆಚ್ಚಾಗುವುದು.
2. ದಿನಾಲೂ ಗ್ರೀನ್ ಟೀಯ ಸೇವನೆಯು ಸಹ ಮೊಡವೆಯನ್ನು ಹೋಗಲಾಡಿಸುತ್ತದೆ.



Click it and Unblock the Notifications
