Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸುಂದರವಾದ ಪಾದಗಳಿಗಾಗಿ ಮಾಡಬೇಕು ಸ್ಪಾ!

ಮೊದಲು ನೇಲ್ ಪಾಲಿಷ್ ತೆಗೆಯಬೇಕು: ಅಸಿಟೋನ್ ಇಲ್ಲದ ರಿಮೋವರ್ ಬಳಸುವುದು ಒಳ್ಳೆಯದು. ಏಕೆಂದರೆ ಅಸಿಟೋನ್ ಬಳಸಿದರೆ ಉಗುರುಗಳು ಒಣಗಿದಂತೆಯಾಗುತ್ತದೆ.
ಉಗುರುಗಳನ್ನು ಕತ್ತರಿಸಬೇಕು: ನೇಪ್ ಪಾಲಿಷ್ ತೆಗೆದ ನಂತರ ಉಗುರುಗಳನ್ನು ಕತ್ತರಿಸಬೇಕು. ಉದ್ದದ ಉಗುರು ಬಿಡಲು ಇಷ್ಟ ಪಡುವವರು ಉಗುರುಗಳ ಶುದ್ಧತೆ ಕಡೆ ಹೆಚ್ಚಿನ ಗಮನ ಕೊಡಬೇಕು. ಪ್ರತಿದಿನ ದೂಳಿನಲ್ಲಿ ಓಡಾಡುವುದರಿಂದ ತ್ವಚೆ ತನ್ನ ಸೌಂದರ್ಯವನ್ನು ಕಳೆದುಕೊಂಡಿರುತ್ತದೆ. ಉಗುರಿನಲ್ಲಿ ಕೊಳೆ ತುಂಬಿ ಇರುತ್ತದೆ. ಆದ್ದರಿಂದ ಚಿಕ್ಕ ಹಲ್ಲುಜ್ಜುವ ಬ್ರೆಷ್ ನಿಂದ ತಿಕ್ಕಿ ಉಗುರಿನಲ್ಲಿರು ಕೊಳೆಯನ್ನು ತೆಗೆಯಬೇಕು.
ಪಾದಗಳ ಆರೈಕೆ:
1. ಒಂದು ಬೇಸನ್ ನಲ್ಲಿ ಹದಬಿಸಿ ನೀರು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಕಾಲುಗಳನ್ನು ಇಟ್ಟು 10 ನಿಮಿಷ ಕೂರಬೇಕು.
2. ನಂತರ ಪ್ಯೂಮಿಕ್ ಸ್ಟೋನ್ ನಿಂದ ಕಾಲುಗಳನ್ನು ಉಜ್ಜಬೇಕು. ನಂತರ ಬ್ರಷ್ ಹಾಕಿ ತಿಕ್ಕಿದರೆ ಕಾಲುಗಳು ಶುಚಿಯಾಗುತ್ತದೆ.
3. ನಂತರ ನಿಂಬೆ ಹಣ್ಣಿನಿಂದ ಈ ಕೆಳಗಿನ ವಿಧಾನದಲ್ಲಿ ಕಾಲು ಬೆರಳುಗಳನ್ನು ಶುಚಿಗೊಳಿಸಬಹುದು.
* ನಿಂಬೆ ಹಣ್ಣು ಮತ್ತು ಉಪ್ಪು: ನಿಂಬೆ ಹಣ್ಣನ್ನು ಕತ್ತರಿಸಿ ಅದರಲ್ಲಿ ಸ್ವಲ್ಪ ಉಪ್ಪು ಪುಡಿ ಹಾಕಿ ಮೇಲೆ ಮಾಡಿದಂತೆ ಬಿಸಿ ನೀರಿನಲ್ಲಿ ಉಗುರುಗಳನ್ನು ನೆನೆಸಿ 5-6 ನಿಮಿಷ ಇಟ್ಟು ನಿಂಬೆಹಣ್ಣನ್ನು ಮೆಲ್ಲನೆ ಉಜ್ಜಬೇಕು ನಂತರ ಮೃದುವಾದ ಬ್ರಷ್ ಬಳಸಿ ತಿಕ್ಕಬೇಕು.
* ನಿಂಬೆಹಣ್ಣು ಮತ್ತು ಗ್ಲಿಸರಿನ್: ಒಣ ತ್ವಚೆ ಇರುವವರು ನಿಂಬೆ ಹೋಳಿಗೆ ಸ್ವಲ್ಪ ಗ್ಲಿಸರಿನ್ ಹಾಕಿ ಬೆರಳುಗಳನ್ನು ತಿಕ್ಕಬೇಕು. ಈ ರೀತಿ ಮಾಡಿದರೆ ಬೆರಳುಗಳು ಮಾಯಿಶ್ಚರೈಸರ್ ಅಗಿ ಇರುತ್ತದೆ.
*ನಿಂಬೆ ಹಣ್ಣು ಮತ್ತು ಸಕ್ಕರೆ : ನೈಸರ್ಗಿಕ ಸ್ಕ್ರಬ್ಬರ್ ಅಗಿ ಸಕ್ಕರೆ ಬಳಸಬಹುದು. ನಿಂಬೆರಸ ಮತ್ತು ಸಕ್ಕರೆ ಜಿತೆ ಸ್ವಲ್ಪ ನೀರು ಬೆರೆಸಿ ಅದರಲ್ಲಿ ಬೆರಳುಗಳನ್ನು ನೆನೆಸಿ ನಂತರ ಮೃದು ಬ್ರಷ್ ಬಳಸಿ ತಿಕ್ಕಿ ತಣ್ಣಿರಿನಿಂದ ಕೈ ತೊಳೆಯಬೇಕು. ಹೀಗೆ ಮಾಡಿದರೆ ಕೈಬೆರಳುಗಳಿಗೆ ಹೊಳಪು ಬರುತ್ತದೆ.
4. ಸ್ಕ್ರಬ್ ಮಾಡಿದ ನಂತರ ಬೇಸನ್ ಗೆ ಪುನಃ ಸ್ವಲ್ಪ ಹದ ಬಿಸಿ ನೀರು ಹಾಕಿ ಅದರಲ್ಲಿ ಒಂದು ಚಮಚ ಅಡುಗೆ ಸೋಡಾ ಹಾಕಿ 5 ನಿಮಿಷ ಕಾಲ ಇಡಬೇಕು. ನಂತರ ಪುನಃ ಕಾಲುಗಳನ್ನು ಉಜ್ಜಬೇಕು.
5. ನಂತರ ಕಾಲುಗಳನ್ನು ಚೆನ್ನಾಗಿ ತೊಳೆದು ಮಾಯಿಶ್ಚರೈಸರ್ ಕ್ರೀಮ್ ಹಚ್ಚಿದರೆ ಕಾಲುಗಳ ಸುಂದರವಾಗಿ ಕಣುತ್ತದೆ. ಅಲ್ಲದೆ ಕಾಲು ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ.



Click it and Unblock the Notifications
