Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಪುರುಷರು ಆಕರ್ಷಕವಾಗಿ ಕಾಣಬಯಸುವುದು ತಪ್ಪೇ?

ನೀವು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ತಾಜಾ ತ್ವಚೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈ ಕೆಳಗೆ ಕೆಲ ಸರಳ ಸಲಹೆಗಳಿವೆ, ಇವುಗಳನ್ನು ಪಾಲಿಸಿದ್ದೇ ಆದರೆ ಆಕರ್ಷಕ ತ್ವಚೆ ನಿಮ್ಮದಾಗುವುದು.
ಬೆಳಗ್ಗೆ ಎದ್ದ ತಕ್ಷಣ ಶೇವ್ ಮಾಡಬೇಡಿ: ಸಾಧ್ಯವಾದಷ್ಟು ಬೆಳಗ್ಗೆ ಎದ್ದ ತಕ್ಷಣ ಶೇವ್ ಮಾಡಬೇಡಿ. ಎದ್ದು ಸ್ವಲ್ಪ ಹೊತ್ತು ಬಿಟ್ಟ ನಂತರ ಶೇವ್ ಮಾಡಿ. ಏಕೆಂದರೆ ಬೆಳಗ್ಗೆ ಎದ್ದ ತಕ್ಷಣ ಶೇವ್ ಮಾಡಿದರೆ ಶೇವ್ ಕ್ರೀಮ್ ಮುಖದಲ್ಲಿರುವ ತೇವಾಂಶವನ್ನು ಹೋಗಲಾಡಿಸುತ್ತದೆ. ಇದರಿಂದ ತ್ವಚೆ ತುಂಬಾ ಡ್ರೈ ಆಗುವುದು. ಈ ರೀತಿ ಮಾಡಿದರೆ ತ್ವಚೆಯ ತಾಜಾತನ ಹೆಚ್ಚುವುದು. ಅಲ್ಲದೆ ಶೇವ್ ಮಾಡಿದ ತಕ್ಷಣ ಮಾಯಿಶ್ಚರೈಸರ್ ಮಾಡಲು ಮರೆಯಬೇಡಿ.
ಮೃದು ತ್ವಚೆಗಾಗಿ ಈ ವಿಧಾನವನ್ನುಅನುಸರಿಸಬಹುದು:
* ಬಾಳೆ ಹಣ್ಣನ್ನು ಮುಖದ ಮೇಲೆ ತಿಕ್ಕಿ ನಂತರ 10 ನಿಮಿಷ ಬಿಟ್ಟು ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಲು ತುಂಬಾ ಹಣ್ಣಾದ ಬಾಳೆ ಹಣ್ಣ್ನು ಬಳಸಿ.
* ಮುಖದ ಬಿಳುಪು ಹೆಚ್ಚಿಸಲು ಬಾದಾಮಿ, ಕಹಿಬೇವಿನ ಎಲೆ, ಚಂದನ, ಮತ್ತು ಸವಲ್ಪ ಗಸೆಗಸೆ ಇವೆಷ್ಟನ್ನೂ ಚೆನ್ನಾಗಿ ಅರೆದು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಬೇಕು. ನಂತರ ಒಣಗಿದ ಮೇಲೆ ಈ ಫೇಸ್ ಮಾಸ್ಕ್ ಅನ್ನು ಕೈಯಿಂದ ಮುಖವನ್ನು ವೃತ್ತಾಕಾರವಾಗಿ ಉಜ್ಜುತ್ತಾ ತೆಗೆಯಬೇಕು. ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.
* ವಾರಕ್ಕೊಮ್ಮೆ ಸೌತೆಕಾಯಿಯನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖ ಮತ್ತು ಮೈಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಬೇಕು. ಈ ರೀತಿ ಮಾಡಿ ನಿಮ್ಮ ತ್ವಚೆ ಕಾಂತಿ ಹೆಚ್ಚುವುದು.



Click it and Unblock the Notifications
