Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮುಖದಲ್ಲಿ ಕಾಡುವ ಕಪ್ಪು ಕಲೆಗಳಿಗೆ ಇಲ್ಲಿದೆ ಪರಿಹಾರ
ಹದಿಹರೆಯದಲ್ಲಿ ಮುಖದಲ್ಲಿ ಮೊಡವೆ ಸಮಸ್ಯೆ ಕಂಡು ಬಂದರೆ ನಂತರ ವಯಸ್ಸು 30 ದಾಟುತ್ತಿದ್ದಂತೆ ಹೆಚ್ಚಿನವರ ಮುಖದಲ್ಲಿ ಕಪ್ಪು ಕಲೆಗಳು ಕಂಡು ಬರುತ್ತದೆ, ಇದನ್ನು Hyperpigmentation ಎಂದು ಕರೆಯಲಾಗುವುದು. ತುಂಬಾ ಬಿಸಿಲಿಗೆ ಹೋದಾಗ ಅಥವಾ ಮಾನಸಿಕ ಒತ್ತಡ, ಸರಿಯಾಗಿ ತ್ವಚೆ ಆರೈಕೆ ಮಾಡದಿರುವುದು ಈ ಎಲ್ಲಾ ಕಾರಣಗಳಿಂದ ಈ ರೀತಿಯ ಕಪ್ಪು ಕಲೆಗಳು ಕಂಡು ಬರುವುದು.

ಇವುಗಳ ನಿವಾರಣೆಗೆ ಕೆಮಿಕಲ್ ಹೆಚ್ಚಾಗಿರುವ ಕ್ರೀಮ್ ಗಳನ್ನು ಬಳಸುವ ಬದಲು ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಕಪ್ಪು ಕಲೆ ಹೋಗಲಾಡಿಸಿ ಸ್ವಚ್ಛವಾದ ತ್ವಚೆ ಪಡೆಯಬಹುದು. ಕಲೆ ರಹಿತ ತ್ವಚೆ ಬೇಕೆಂದು ಬಯಸುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
ಬೆಣ್ಣೆ ಹಣ್ಣು ಮತ್ತು ಹಾಲು: ಇದರಲ್ಲಿ ವಿಟಮಿನ್ ಇ ಇರುವುದರಿಂದ 2 ಚಮಚ ಬೆಣ್ಣೆ ಹಣ್ಣಿಗೆ ಒಂದು ಚಮಚ ಹಾಲು ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಹದಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಒಂದು ತಿಂಗಳ ಕಾಲ ಮಾಡಿದರೆ ಸಾಕು ಕಪ್ಪು ಕಲೆಗಳು ಸಂಪೂರ್ಣವಾಗಿ ನಿವಾರಣೆಯಾಗುವುದು.
ಬಾದಾಮಿ, ಹಾಲು ಮತ್ತು ಜೇನು: 2-3 ಬಾದಾಮಿಯನ್ನು ಚೆನ್ನಾಗಿ ಪುಡಿ ಮಾಡಿ ಒಂದು ಚಮಚ ಹಾಲು, ಒಂದು ಚಮಚ ಜೇನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಕಲೆ ರಹಿತ ತ್ವಚೆ ನಿಮ್ಮದಾಗುವುದು ಅಲ್ಲದೆ ಮುಖದಲ್ಲಿ ಯೌವನದ ಕಲೆ ಎದ್ದು ಕಾಣುವುದು.
ಹಾಲು ಮತ್ತು ಜೇನು: ಒಂದು ಚಮಚ ಹಾಲು ಮತ್ತು ಒಂದು ಚಮಚ ಜೇನು ಮಿಶ್ರ ಮಾಡಿ ಸ್ನಾನ ಮಾಡುವ 15 ನಿಮಿಷದ ಮೊದಲು ಮುಖಕ್ಕೆ ಹಚ್ಚಬೇಕು. ಈ ರೀತಿ ಪ್ರತಿನಿತ್ಯ ಮಾಡಿದರೆ ತ್ವಚೆ ಸಮಸ್ಯೆ ಕಂಡು ಬರುವುದಿಲ್ಲ.
ಗಂಧದ ಪುಡಿ: ಗಂಧ ಮುಖಕ್ಕೆ ತುಂಬಾ ಒಳ್ಳೆಯದು. ಗಂಧದ ಪುಡಿಯನ್ನು ನೀರಿನಲ್ಲಿ ಅಥವಾ ರೋಸ್ ವಾಟರ್ ನಲ್ಲಿ ಕಲೆಸಿ ಪ್ರತಿದಿನ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖದ ಕಲೆಗಳು ಮಾಯವಾಗಿ, ಮುಖದ ಕಾಂತಿ ಹೆಚ್ಚುವುದು.
ಕೋಕಾ ಬಟರ್: ಕೋಕಾ ಬಟರ್ ನಿಂದ ಪ್ರತಿದಿನ 10 ನಿಮಿಷದವರೆಗೆ ಮಾಯಿಶ್ಚರೈಸರ್ ಮಾಡಿ ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ 1-2 ತಿಂಗಳವರೆಗೆ ಮಾಡುತ್ತಾ ಬಂದರೆ ಮುಖದಲ್ಲಿರುವ ಕಲೆಗಳು, ಕಪ್ಪು ಕಲೆಗಳು ಮಾಯವಾಗಿ ತ್ವಚೆ ಕಾಂತಿಯುತವಾಗಿ ಕಾಣುತ್ತದೆ.



Click it and Unblock the Notifications
