Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಬೆಣ್ಣೆಯಂತಹ ಮೈಗಾಗಿ ಬೆಣ್ಣೆಯಿಂದ ಆರೈಕೆ
ನಮ್ಮಲ್ಲಿ ಹೆಚ್ಚಿನವರು ಮುಖಕ್ಕೆ ಮಾಡುವ ಆರೈಕೆಯನ್ನು ಮೈಗೆ ಮಾಡುವುದಿಲ್ಲ. ಮುಖ ಮಾತ್ರ ನೋಡಲು ಸುಂದರ ಮತ್ತು ಹೊಳಪಿನಿಂದ ಕೂಡಿದ್ದು ಮೈ ಮಾತ್ರ ಒರಟಾಗಿ ಕಂಡರೆ ನೋಡಿದವರಿಗೆ ನೀವು ಮುಖಕ್ಕೆ ಮೇಕಪ್ ಮಾಡಿ ಆ ರೀತಿ ಕಾಣುತ್ತಿದ್ದೀರ ಅಂತ ಅನಿಸುವುದು. ಆದ್ದರಿಂದ ನೈಸರ್ಗಿಕ ಚೆಲುವಿನಿಂದ ಮಿಂಚಲು ಮೈ ಆರೈಕೆ ಕಡೆ ಕೂಡ ಗಮನ ಕೊಡುವುದು ಒಳ್ಳೆಯದು.

ಈ ರೀತಿ ಮೈ ತ್ವಚೆ ಆರೈಕೆ ಮಾಡಲು ಎಣ್ಣೆ ಅಥವಾ ಬೆಣ್ಣೆ ಬಳಸಿದರೆ ಒಳ್ಳೆಯದು. ತ್ವಚೆ ಕಾಂತಿ ಹೆಚ್ಚಿಸುವಲ್ಲಿ ಈ ಕೆಳಗಿನ ಬೆಣ್ಣೆಗಳು ತುಂಬಾ ಸಹಕಾರಿಯಾಗಿದೆ.
ಶೀಯಾ ಬಟರ್: ಶೀಯಾ ಬಟರ್ ಅಂಗಡಿಗಳಲ್ಲಿ ದೊರೆಯುತ್ತದೆ. ಇದನ್ನು ಈ ಕೆಳಗಿನಂತೆ ಬಳಸಿದರೆ ತ್ವಚೆ ಕಾಂತಿ ಹೆಚ್ಚುವುದು.
* ಅರ್ಧ ಕಪ್ ಶೀಯಾ ಬಟರ್ ಗೆ 2 ಚಮಚ ಆಲೀವ್ ಎಣ್ಣೆ ಹಾಕಿ ಮಿಶ್ರ ಮಾಡಿ ದೇಹಕ್ಕೆ ಹಚ್ಚಬೇಕು. ಇದು ಒರಟು ತ್ವಚೆಯನ್ನು ಮೃದು ಮಾಡಲು ಸಹಕಾರಿಯಾಗಿದೆ.
* ಶೀಯಾ ಬಟರ್ ಗೆ 10 ಹನಿ ದ್ರಾಕ್ಷಿ ಎಣ್ಣೆ ಮತ್ತು 10 ಹನಿ ಆಪ್ರಿಕಾಟ್ ಎಣ್ಣೆ ಮಿಶ್ರ ಮಾಡಿ ಈ ಮಿಶ್ರಣವನ್ನು ಮೈಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮೈ ತೊಳೆದರೆ ತ್ವಚೆ ಕಾಂತಿ ಹೆಚ್ಚುವುದು.
ಕೋಕಾ ಬಟರ್ ಗೆ 10-12 ಹನಿ ರೋಸ್ ವಾಟರ್ ಮತ್ತು 1 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮೈಗೆ ಹಚ್ಚಿದರೆ ಮೈ ಕಾಂತಿ ಹೆಚ್ಚಾಗುತ್ತದೆ.
ಮ್ಯಾಂಗೊ ಬಟರ್ (ಮಾವಿನ ಹಣ್ಣಿನಿಂದ ತಯಾರಿಸಿದ ಬೆಣ್ಣೆ) : ಇದು ಕೂಡ ಫುಡ್ ಸೆಂಟರ್ ಗಳಲ್ಲಿ ಸಿಗುತ್ತದೆ.
* ಮ್ಯಾಂಗೊ ಬಟರ್ ಗೆ 7-8 ಹನಿ ಆಪ್ರಿಕಾಟ್ ಮತ್ತು ಸ್ವಲ್ಪ ತೆಂಗಿನೆಣ್ಣೆ ಮಿಶ್ರ ಮಾಡಿ ಮೈಗೆ ಹಚ್ಚಬಹುದು.
* ಅರ್ಧ ಕಪ್ ಮ್ಯಾಂಗೊ ಬಟರ್ ಗೆ 7-8 ಹನಿ ಲ್ಯಾವೆಂಡರ್ ಎಣ್ಣೆ ಮತ್ತು ಸ್ವಲ್ಪ ನಿಂಬೆ ರಸ ಬೆರೆಸಿ ಕೂಡ ಮೈಗೆ ಹಚ್ಚಬಹುದು.
* ಮಾಯಿಶ್ಚರೈಸರ್ ಮಾಡಲು ಮ್ಯಾಂಗೊ ಬಟರ್ , ಲೋಳೆ ಸರ, ಬೆಣ್ಣೆ ಹಣ್ಣಿನ (ಅವಕಾಡೊ) ಎಣ್ಣೆ ಮಿಶ್ರ ಮಾಡಿ ತ್ವಚೆಗೆ ಹಚ್ಚಿದರೆ ತ್ವಚೆಯನ್ನು ಅತ್ಯುತ್ತಮ ರೀತಿಯಲ್ಲಿ ಮಾಯಿಶ್ಚರೈಸರ್ ಮಾಡುವುದು.
ಇವುಗಳನ್ನು ಬಳಸಿದರೆ ತ್ವಚೆ ಮೃದುವಾಗುವುದು ಮತ್ತು ತ್ವಚೆ ಕಾಂತಿ ಹೆಚ್ಚಾಗುವುದು. ಈ ಮಾಯಿಶ್ಚರೈಸರ್ ಗಳನ್ನು ಒಣ ಅಥವಾ ತಂಪಾದ ಸ್ಥಳದಲ್ಲಿ ಸಂಗ್ರಹಿಸಬಹುದು. ಈ ಮೇಲಿನ ವಿಧಾನಗಳನ್ನು ಮಾಡಿ ನೋಡಿ, ಹೊಳಪಿನ ತ್ವಚೆ ನಿಮ್ಮದಾಗುವುದು.



Click it and Unblock the Notifications
