Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೂಕ್ಷ್ಮ ತ್ವಚೆಯವರೇ ಫೇಶಿಯಲ್ ಮಾಡಿಸುವ ಮುನ್ನ ಎಚ್ಚರ!

ಸೂಕ್ಷ್ಮ (ಸೆನ್ಸಿಟಿವ್) ತ್ವಚೆ ಆರೈಕೆಗೆ ಈ ಕೆಳಗಿನ ವಿಧಾನದ ಫೇಶಿಯಲ್ ಮಾಡಬಹುದಾಗಿದೆ.
1. ಫ್ರೂಟ್ ಫೇಶಿಯಲ್ (ಹಣ್ಣುಗಳ ಫೇಶಿಯಲ್): ತಾಜಾ ಹಣ್ಣುಗಳನ್ನು ಬಳಸಿ ಫೇಶಿಯಲ್ ಮಾಡುವುದರಿಂದ ಈ ಫೇಶಿಯಲ್ ಮುಖಕ್ಕೆ ತುಂಬಾ ಒಳ್ಳೆಯದು. ಈ ಫೇಶಿಯಲ್ ಕೇವಲ ಸೂಕ್ಷ್ಮ ತ್ವಚೆಯವರಿಗೆ ಮಾತ್ರವಲ್ಲ ಎಲ್ಲಾ ರೀತಿಯ ತ್ವಚೆಯರು ಮಾಡಿಸಿಕೊಂಡರೂ ಉತ್ತಮ ಪ್ರಯೋಜನವನ್ನು ಕಾಣಬಹುದು. ಸೂಕ್ಷ್ಮ ತ್ವಚೆಯವರು ಮಿಶ್ರ ಹಣ್ಣುಗಳಿಂದ ತಯಾರಿಸಿದ ಫೇಶಿಯಲ್ ಬಳಸುವ ಬದಲು ಯಾವ ಹಣ್ಣು ತುಂಬಾ ಸೂಕ್ತ ಅನಿಸುತ್ತದೆಯೋ ಅದನ್ನು ಬಳಸುವುದು ಒಳ್ಳೆಯದು. ಪಪ್ಪಾಯಿ, ಬಾಳೆ ಹಣ್ಣಿನ ಫೇಶಿಯಲ್ ಬಳಸುವುದು ಒಳ್ಳೆಯದು.
2. ಚಾಕಲೇಟ್ ಫೇಶಿಯಲ್: ಸೂಕ್ಷ್ಮ ತ್ವಚೆಯವರಿಗೆ ತುಂಬಾ ಸೂಕ್ತವಾದ ಫೇಶಿಯಲ್ ಅಂದರೆ ಅದು ಚಾಕಲೇಟ್ ಫೇಶಿಯಲ್. ಇದರಲ್ಲಿ ಕೋಕಾ ಅಂಶವಿರುವುದರಿಂದ ಅಲರ್ಜಿ ಉಂಟಾಗುವುದಿಲ್ಲ.
3. ಅಕೈ ಬೆರಿ ಫೇಶಿಯಲ್: ಅಕೈ ಬೆರಿ ಹಣ್ಣುಗಳಿಂದ ಕೂಡ ಫೇಶಿಯಲ್ ಮಾಡಬಹುದು. ಇದರಲ್ಲಿ anti oxidants ಪ್ರಮಾಣ ಹೆಚ್ಚಾಗಿದ್ದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ಬಳಸಿದರೆ ತ್ವಚೆ ಬೇಗನೆ ನೆರಿಗೆ ಮೂಡುವುದನ್ನು ತಡೆಗಟ್ಟಬಹುದು.
4. ಗಂಧದ ಫೇಶಿಯಲ್: ಗಂಧ ಆಕರ್ಷಕವಾದ ತ್ವಚೆಯನ್ನು ನೀಡುತ್ತದೆ. ಗಂಧ ಅಥವಾ ಚಂದನ ದಿನಾ ಹಚ್ಚಿದರೆ ಮುಖದಲ್ಲಿರುವ ಮೊಡವೆ ಮತ್ತು ಕಲೆಗಳು ಕಡಿಮೆಯಾಗುತ್ತದೆ.
ಸೂಕ್ಷ್ಮ (ಸೆನ್ಸಿಟಿವ್) ತ್ವಚೆ ಆರೈಕೆಗೆ ಈ ಕೆಳಗಿನ ಫೇಶಿಯಲ್ ಮಾಡಲೇಬಾರದು:
1.ಕ್ಲೀನ್ ಅಪ್: ಕ್ಲೀನ್ ಅಪ್ ಮಾಡುವ ಮೊದಲು ಮುಖಕ್ಕೆ ಸ್ಟೀಮ್ ಕೊಟ್ಟು ನಂತರ ಮಾಡಲಾಗುವುದು. ಈ ರೀತಿ ಮಾಡಿ ಬ್ಲ್ಯಾಕ್ ಹೆಡ್ಸ್ ತೆಗೆಯಲಾಗುವುದು. ಆದರೆ ಸೂಕ್ಷ್ಮ ತ್ವಚೆಯವರು ಕ್ಲೀನ್ ಅಪ್ ಮಾಡಿಸದಿರುವುದು ಒಳ್ಳೆಯದು. ಏಕೆಂದರೆ ಈ ರೀತಿ ಮಾಡಿಸಿದಾಗ ಮುಖ ಕೆಂಪಾಗುವುದು. ಆದ್ದರಿಂದ ಬ್ಲ್ಯಾಕ್ ಹೆಡ್ಸ್ ತೆಗೆಯಲು ಸ್ಕ್ರಬ್ಬರ್ ಬಳಸುವುದು ಸೂಕ್ತ.
2. ಪರ್ಲ್ ಫೇಶಿಯಲ್ (ಮುತ್ತಿನ ಫೇಶಿಯಲ್): ಇದನ್ನು ಯಾವುದೇ ಕಾರಣಕ್ಕೂ ಸೂಕ್ಷ್ಮ ತ್ವಚೆಯವರು ಮಾಡಿಸಲು ಹೋಗಬಾರದು. ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ.
3. ಪಾರಾಫಿನ್ ಫೇಶಿಯಲ್: ಇದನ್ನು ಕೂಡ ಸೂಕ್ಷ್ಮ ತ್ವಚೆಯವರು ಬಳಸದಿರುವುದು ಒಳ್ಳೆಯದು.
4. ಡೈಮೆಂಡ್ ಫೇಶಿಯಲ್: ಡೈಮೆಂಡ್ ಫೇಶಿಯಲ್ ಹೆಚ್ಚಿನವರಿಗೆ ಅಲರ್ಜಿ ಉಂಟು ಮಾಡುತ್ತದೆ. ಆದ್ದರಿಂದ ಇದನ್ನು ಬಳಸುವ ಮೊದಲು ಅಲರ್ಜಿ ಉಂಟಾಗುತ್ತದೆಯೇ ಎಂದು ಕೈಯಲ್ಲಿ ಪರೀಕ್ಷಿಸಿ ನಂತರ ಬಳಸಬಹುದು. ಸೂಕ್ಷ್ಮ ತ್ವಚೆಯವರು ಇದನ್ನು ಬಳಸುವ ಪ್ರಯತ್ನಕ್ಕೆ ಹೋಗದಿರುವುದೇ ಒಳ್ಳೆಯದು.



Click it and Unblock the Notifications
