Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಫೇಶಿಯಲ್ ಮಾಡಿಸುವಾಗ ಗಮನಿಸಬೇಕಾದ ಅಂಶಗಳು

ಫೇಶಿಯಲ್ ಮಾಡಿಸುವ ಮುನ್ನ ಗಮನಿಸಬೇಕಾದ ಅಂಶಗಳು:
1. ಫೇಶಿಯಲ್ ಮಾಡಿಸುವ ಮುನ್ನ ನಿಮ್ಮ ತ್ವಚೆಗೆ ಫೇಶಿಯಲ್ ಮಾಡಿಸಬಹುದೇ, ಇಲ್ಲವೇ ಎಂದು ಬ್ಯೂಟಿಷಿಯನ್ ಹತ್ತಿರ ಕೇಳಿ ಖಚಿತಪಡಿಸಿಕೊಳ್ಳಿ. ಏಕೆಂದರೆ ತುಂಬಾ ಸೂಕ್ಷ್ಮ ತ್ವಚೆ ಹೊಂದಿರುವವರೆಗೆ ಫೇಶಿಯಲ್ ಮಾಡಿಸಿದಾಗ ಮುಖ ಕೆಂಪಾಗಿ ಗುಳ್ಳೆ ಅಥವಾ ಅಲರ್ಜಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಮೊದಲ ಬಾರಿಗೆ ಫೇಶಿಯಲ್ ಮಾಡಿಸುವುದಾದರೆ ಬ್ಯೂಟಿಷಿಯನ್ ಹತ್ತಿರ ಸಲಹೆ ಕೇಳುವುದು ಒಳ್ಳೆಯದು.
2. ಮುಖದಲ್ಲಿ ಮೊಡವೆ ಇರುವವರು ತುಂಬಾ ಎಚ್ಚರಿಕೆವಹಿಸಬೇಕು. ಕೆಲವೊಮ್ಮೆ ಫೇಶಿಯಲ್ ಮಾಡಿಸಿದ ನಂತರ ಮುಖದಲ್ಲಿ ಚಿಕ್ಕ-ಚಿಕ್ಕ ಮೊಡವೆಗಳು ಕಂಡು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಯಾವುದಕ್ಕೂ ಬ್ಯೂಟಿಷಿಯನ್ ರವರ ಸಲಹೆ ಪಡೆಯುವುದು ಒಳ್ಳೆಯದು.
3. ಮುಖದಲ್ಲಿ ಸುಟ್ಟ ಗಾಯಗಳಾಗಿದ್ದು ಅದು ಸಂಪೂರ್ಣವಾಗಿ ಗುಣಮುಖವಾಗದಿದ್ದರೆ ಫೇಶಿಯಲ್ ಮಾಡಿಸಲು ಹೋಗಬಾರದು. ಸನ್ ಟ್ಯಾನ್ ಆಗಿದ್ದರೂ ಫೇಶಿಯಲ್ ಮಾಡಿಸಲು ಹೋಗಬಾರದು.
ಫೇಶಿಯಲ್ ಮಾಡಿಸಿದ ನಂತರ ಈ ಕೆಳಗಿನಂತೆ ಮಾಡಿದರೆ ಒಳ್ಳೆಯದು:
1. ಫೇಶಿಯಲ್ ಮಾಡಿಸಿದ ತಕ್ಷಣ ಮುಖವನ್ನು ಮುಟ್ಟಲು ಹೋಗಬಾರದು. ಮುಖಕ್ಕೆ ಉಗುರು ತಾಗಿದದರೆ ಅಲರ್ಜಿ ಉಂಟಾಗಬಹುದು.
2. ಫೇಶಿಯಲ್ ಮಾಡಿಸಿದ ನಂತರ ಕನಿಷ್ಠ ಎರಡು ಗಂಟೆಗಳ ಕಾಲ ಮುಖ ತೊಳೆಯಬಾರದು. ಮುಖ ತೊಳೆಯುವಾಗ ಸೋಪು ಹಚ್ಚದೆ ತಣ್ಣೀರಿನಿಂದ ಮುಖ ತೊಳೆಯಬೇಕು.
3. ಫೇಶಿಯಲ್ ಮಾಡಿಸಿ ಸ್ವಲ್ಪ ದಿನಗಳವರೆಗೆ ಐಬ್ರೋ ಮಾಡಿಸಲು ಹೋಗಬಾರದು. ಫೇಶಿಯಲ್ ಮಾಡಿಸಿ ಒಂದು ವಾರವರೆಗೆ ಮುಖಕ್ಕೆ ಸ್ಟೀಮ್ ಕೊಡದಿದ್ದರೆ ಒಳ್ಳೆಯದು.
4. ಫೇಶಿಯಲ್ ಮಾಡಿಸಿದ ಮಾರನೆ ದಿನ ಫೇಸ್ ವಾಸ್ ಮತ್ತು ನಿಂಬೆರಸವನ್ನು ಮುಖಕ್ಕೆ ಹಚ್ಚದಿದ್ದರೆ ಒಳ್ಳೆಯದು. ಫೇಶಿಯಲ್ ಮಾಡಿಸಿದ ನಂತರ ಸೌತೆಕಾಯಿಂದ ಸ್ಕ್ರಬ್ ಮಾಡಿದರೆ ಒಳ್ಳೆಯದು.
ಈ ಅಂಶಗಳನ್ನು ಗಮನದಲ್ಲಿಟ್ಟರೆ ಫೇಶಿಯಲ್ ಮಾಡಿಸಿದ ಸಂಪೂರ್ಣ ಪ್ರಯೋಜನ ಪಡೆಯಬಹುದು.



Click it and Unblock the Notifications
