Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮೊಡವೆಯನ್ನು ಮಾಯವಾಗಿಸುತ್ತೆ ಈ ವಿಧಾನ

ಮೊನ್ನೆ ಒಬ್ಬ ಸ್ನೇಹಿತರ ಸಿಕ್ಕಿದ, ಅವನು ನೋಡಲು ತುಂಬಾ ಆಕರ್ಷಕವಾಗಿದ್ದಾನೆ, ಆದರೆ ಮುಖ ತುಂಬಾ ಮೊಡವೆ, "ಏಕೋ ಇದ್ದಕಿದ್ದ ಹಾಗೆ ಮೊಡವೆ ಬಂದಿದೆ" ಎಂದು ಕೇಳಿದಾಗ, "ಈ ದರಿದ್ರ ಮೊಡವೆ ನಾನು ಟಿವಿಯಲ್ಲಿ ನಿರೂಪಕ ಆಗಬೇಕೆಂಬ ನನ್ನ ಆಸೆಗೆ ಮಣ್ಣೆರಚಿತು. ಸೆಲೆಕ್ಷನ್ ಗೆ ಹೋಗಿದ್ದಾಗ ಚಾನಲ್ ರವರಿಗೆ ನನ್ನ ವಾಯ್ಸ್ ಇಷ್ಟವಾಯಿತು, ಆದರೆ ಪಿಂಪಲ್ ಹೋದ ಮೇಲೆ ಬಾ ಚಾನ್ಸ್ ಕೊಡುತ್ತೇವೆ ಅಂದರು" ಅಂದರು ಎಂದನು. ತುಂಬಾ ಮೊಡವೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಅಂದರೆ ತಪ್ಪಾಗಲಾರದು.
ಆದ್ದರಿಂದ ಮೊಡವೆಯನ್ನು ಈ ಕೆಳಗಿನ ಸರಳ ನೈಸರ್ಗಿಕ ವಿಧಾನದಿಂದ ಹೋಗಲಾಡಿಸಬಹುದು.
1. ಮುಖವನ್ನು ದಿನದಲ್ಲಿ 4-5 ಬಾರಿ ತೊಳೆಯಬೇಕು. 2 ಬಾರಿ ಸೋಪು ಹಾಕಿ , 3 ಬಾರಿ ಬರೀ ನೀರಿನಿಂದ ತೊಳೆಯಬೇಕು. ಉಗುರನ್ನು ಮೊಡವೆ ಇರುವ ಜಾಗಕ್ಕೆ ತಾಗಿಸಬಾರದು.
2. ತಾಜಾ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಬೇಕು. ಸಾಕಷ್ಟು ನೀರು ಕುಡಿಯಬೇಕು.
3. ಪುದೀನಾ ರಸವನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಬೇಕು.
4. ಅರಿಶಿಣ ಪುಡಿ ಅರ್ಧ ಚಮಚ, ಹೆಸರು ಕಾಳಿನ ಪುಡಿ ಅರ್ಧ ಚಮಚ ಮತ್ತು ಸ್ವಲ್ಪ ಕಹಿ ಬೇವಿನ ಎಲೆಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ 3 ದಿನಕ್ಕೊಮ್ಮೆ ಮಾಡಬೇಕು.
5. ಒಂದು ಚಮಚ ಜೇನಿಗೆ ಚಕ್ಕೆಯನ್ನು ಪುಡಿ ಹಾಕಿ ಒಂದು ದಿನ ಇಟ್ಟು ಮಾರನೆ ದಿನ ರಾತ್ರಿ ಮುಖಕ್ಕೆ ಹಚ್ಚಿದರೆ ಮೊಡವೆ ಬೇಗನೆ ಕಡಿಮೆಯಾಗುತ್ತದೆ.
6. ಮೆಂತೆಯನ್ನು ನೆನೆಸಿಟ್ಟು ಪೇಸ್ಟ್ ಮಾಡಿ ರಾತ್ರಿ ಮುಖಕ್ಕೆ ಹಚ್ಚಿ ಒಂದು ಗಟೆಯ ಬಳಿಕ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುತ್ತದೆ.
7. ಪ್ರತಿದಿನ ವ್ಯಾಯಾಮ ಮಾಡಿದರೆ ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಬಹುದು. ಇದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ.



Click it and Unblock the Notifications
