Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು 7 ಮನೆಮದ್ದು
ಸ್ಟ್ರೆಚ್ ಮಾರ್ಕ್ಸ್ ಗರ್ಭಿಣಿಯಾದಾಗ ಬೀಳುತ್ತದೆ. ಅದಲ್ಲದೆ ಇದ್ದಕ್ಕಿದ್ದ ಹಾಗೇ ದಪ್ಪಗಾದಾಗ ಅಥವಾ ದಪ್ಪಗೆ ಇದ್ದವರು ಸಣ್ಣಗಾದಾಗ ಈ ರೀತಿಯ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ. ಹೀಗೆ ಸ್ಟ್ರೆಚ್ ಮಾರ್ಕ್ಸ್ ಬಿದ್ದರೆ ಕೆಲವರಿಗಷ್ಟೆ ಸ್ವಲ್ಪ ಸಮಯದ ಬಳಿಕ ಅದು ಕಡಿಮೆಯಾಗುತ್ತದೆ, ಮತ್ತೆ ಕೆಲವರಲ್ಲಿ ಅದು ಹಾಗೇಯೆ ಉಳಿದುಕೊಳ್ಳುತ್ತದೆ.
ಈ ರೀತಿಯ ಸ್ಟ್ರೆಚ್ ಮಾರ್ಕ್ಸ್ ಬಿದ್ದರೆ ಅದನ್ನು ಹೋಗಲಾಡಿಸಲು ಅನೇಕ ಕ್ರೀಮ್ ಗಳು ದೊರೆಯುತ್ತವೆ. ಆದರೆ ಈ ಕ್ರೀಮ್ ಗಳು ಕೆಲವೊಮ್ಮೆ ಪ್ರಯೋಜನಕ್ಕೆ ಬರುವುದಿಲ್ಲ, ಮತ್ತೆ ಕೆಲವರಿಗೆ ಅಂತಹ ಕ್ರೀಮ್ ಗಳನ್ನು ಹಚ್ಚಿದಾಗ ತ್ವಚೆಯಲ್ಲಿ ತುರಿತ, ಉರಿ ಕಂಡು ಬರಬಹುದು. ಹಾಗಂತ ಇದನ್ನು ಹೋಗಲಾಡಿಸದೇ ಇದ್ದರೆ ತ್ವಚೆಯ ಅಂದ ಹಾಳಾಗುವುದು.
ಆದ್ದರಿಂದ ಗರ್ಭಿಣಿಯಲ್ಲಿ ಬಿದ್ದಂತಹ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಹೆರಿಗೆಯಾಗಿ ಒಂದು 6 ತಿಂಗಳ ಬಳಿಕ ಕೆಳಗಿನಂತೆ ಮಾಡಿದರೆ ಸಾಕು, ಒಂದೇ ವರ್ಷದ ಒಳಗೆ ಸ್ಟ್ರೆಚ್ ಮಾರ್ಕ್ಸ್ ಸಂಪೂರ್ಣ ಮರೆಯಾಗುವುದು.

1.ವ್ಯಾಯಾಮ:
ವ್ಯಾಯಾಮ ಮಾಡಿದಾಗ ಸ್ವಾಯುಗಳು ಬಿಗಿಯಾಗುವುದರಿಂದ ಸ್ಟ್ರೆಚ್ ಕಡಿಮೆಯಾಗುವುದು, ಅಲ್ಲದೆ ವ್ಯಾಯಾಮದಿಂದ ಹೆರಿಗೆಯ ನಂತರ ಕೂಡ ಆಕರ್ಷಕ ಮೈಕಟ್ಟನ್ನು ಕಾಪಾಡಿಕೊಳ್ಳಬಹುದು.

ಆಹಾರ:
ವಿಟಮಿನ್ ಸಿ ಹಾಗೂ ಇ ಅಧಿಕವಿರುವ ಆಹಾರಗಳನ್ನು ತಿಂದರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು. ಹಾಲಿನ ಉತ್ಪನ್ನಗಳು, ಲಿವರ್, ಟೊಮೆಟೊ, ಸೊಪ್ಪು ಇವುಗಳು ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ತುಂಬಾ ಸಹಕಾರಿಯಾಗಿವೆ.

ಲೋಳೆಸರ:
ತಾಜಾ ಲೋಳೆಸರದಿಂದ ಪ್ರತಿದಿನ ಮಸಾಜ್ ಮಾಡಬೇಕು. ಲೋಳೆಸರ ತ್ವಚೆ ಹಾನಿಯನ್ನು ಸರಿಪಡಿಸಿ ಮೃದುವಾದ ಹಾಗೂ ಆಕರ್ಷಕವಾದ ತ್ವಚೆಯನ್ನುನೀಡುತ್ತದೆ.

4. ಲ್ಯಾವೆಂಡರ್ ಎಣ್ಣೆ:
ದಿನಕ್ಕೆ 3 ಬಾರಿ ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿದರೆ ತ್ವಚೆಯಲ್ಲಿ ಹೊಸ ಜೀವಕಣಗಳು ಹುಟ್ಟಿ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಇದರಿಂದಾಗಿ ನಿಧಾನಕ್ಕೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು.

ಆಪ್ರಿಕಾಟ್ ಸ್ಕ್ರಬ್:
ದಿನವೂ ಆಪ್ರಿಕಾಟ್ ನಿಂದ ಸ್ಕ್ರಬ್ ಅಥವಾ ಆಪ್ರಿಕಾಟ್ ಎಣ್ಣೆಯಿಂದ ಮಸಾಜ್ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ಮಾಯವಾಗುವುದು.

ಕೋಕಾ ಬಟರ್:
ಕೋಕಾ ಬಟರ್ ಅನ್ನು ಗರ್ಭಿಣಿಯಾಗಿರುವಾಗಲೇ ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚುತ್ತಾ ಬಂದರೆ ಸ್ಟ್ರೆಚ್ ಮಾರ್ಕ್ಸ್ ಕಲೆ ಬೇಗನೆ ಕಡಿಮೆಯಾಗುತ್ತದೆ.

ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ರೆಸಿಪಿ:
ಬೆಣ್ಣೆ ಹಣ್ಣು ಹಾಗೂ ಲ್ಯಾವೆಂಡರ್ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಅದಕ್ಕೆ ವಿಟಮಿನ್ ಎ ಮತ್ತು ವಿಟಮಿನ್ ಇ ಕಲೆಸಿ ನಂತರ ಸ್ಟ್ರೆಚ್ ಮಾರ್ಕ್ಸ್ ಇರುವ ಭಾಗಕ್ಕೆ ಹಚ್ಚುತ್ತಾ ಬಂದರೆ ಸ್ಟ್ರೆಚ್ ಮಾರ್ಕ್ಸ್ ಸಂಪೂರ್ಣ ಕಡಿಮೆಯಾಗುವುದು.



Click it and Unblock the Notifications
