Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಸುಂದರ ತ್ವಚೆಗಾಗಿ 5 ಸರಳ ಸಲಹೆಗಳು
ನಾವು ನೋಡಲು ಸುಂದರವಾಗಿ ಕಾಣಬೇಕೆಂದು ಬಯಸುವುದು ಸಹಜ. ಈ ರೀತಿ ಸುಂದರವಾಗಿ ಕಾಣಬೇಕೆಂದರೆ ತ್ವಚೆ ಸುಂದರವಾಗಿರಬೇಕು. ಸುಂದರವಾದ ತ್ವಚೆ ಪಡೆಯ ಬಯಸುವವರು ಈ ಕೆಳಗಿನ 5 ಸರಳ ಸಲಹೆಯನ್ನು ಪಾಲಿಸಿದರೆ ಸಾಕು ಅಕಾಲಿಕ ಮುಪ್ಪಿನ ಸಮಸ್ಯೆ ಬರುವುದಿಲ್ಲ, ತ್ವಚೆ ಕಾಂತಿ ಕೂಡ ಹೆಚ್ಚಾಗುವುದು.

1. ಕ್ರೀಮ್ ಗಳನ್ನು ರಾತ್ರಿ ಹೊತ್ತು ಹಚ್ಚುವುದು ತುಂಬಾ ಪರಿಣಾಮಕಾರಿ ಅದರಲ್ಲೂ ನೈಸರ್ಗಿಕವಾದ ಕ್ರೀಮ್ ಬಳಸುವುದು ಒಳ್ಳೆಯದು. ಇದರಿಂದ ತ್ವಚೆಗೆ ಸಂರಕ್ಷಣೆಗೆ ಒಳ್ಳೆಯದು. ಏಕೆಂದರೆ ಮಲಗಿದ್ದಾಗ ನಾವು ವಿಶ್ರಾಂತಿ ಅನುಭವಿಸುತ್ತಿರುವಾಗ ತ್ವಚೆ ಕಣಗಳು ಹೆಚ್ಚು ಕೆಲಸ ಮಾಡುತ್ತದೆ, ಆದ್ದರಿಂದ ಕ್ರೀಮ್ ಗಳನ್ನು ರಾತ್ರಿ ಹೊತ್ತಿನಲ್ಲಿ ಹಚ್ಚಿ. ಮುಖ ಕಾಂತಿಯುತವಾಗಿ, ಯೌವನಭರಿತವಾಗಿ ಕಾಣಲು ದೇಹದಲ್ಲಿ ಕೊಲೆಜಿನ್ ಅಂಶ ಅವಶ್ಯಕ. ಕ್ರೀಮ್ ಗಳನ್ನು ರಾತ್ರಿ ಹಚ್ಚಿದರೆ ತ್ವಚೆ ಕಾಂತಿ ಹೆಚ್ಚಿಸುವ ಕೊಲೆಜಿನ್ (collagen ) ಮತ್ತು ಇಲಾಸ್ಟಿನ್ (elastin) ಉತ್ಪತ್ತಿಗೆ ಸಹಕಾರಿಯಾಗಿದೆ.
2. ಸಿಟ್ರಿಕ್ ಆಸಿಡ್ ಮತ್ತು ಗ್ಲೈಸೋಲಿಕ್ ಆಸಿಡ್ ನಿರ್ಜೀವ ತ್ವಚೆಯನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ವಿಟಮಿನ್ ಸಿ ಕೊಲೆಜಿನ್ ಅಂಶ ಹೆಚ್ಚು ಮಾಡಿ ತ್ವಚೆ ಕಾಂತಿ ಹೆಚ್ಚಿಸುವುದಲ್ಲದೆ ಅಕಾಲಿಕ ಮುಪ್ಪನ್ನು ತಡೆಗಟ್ಟುತ್ತದೆ.
3. ರೆಟಿನೋಲ್ ಕ್ರೀಮ್ ಬಳಸುವುದು ತ್ವಚೆಗೆ ತುಂಬಾ ಒಳ್ಳೆಯದು. ಇದು ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ ಕೊಲೆಜಿನ್ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ. ಮುಖದಲ್ಲಿ ಅಕಾಲಿಕ ನೆರಿಗೆ ಮೂಡುವುದನ್ನು ತಡೆಗಟ್ಟುತ್ತದೆ.
4. ಹೊಳೆಯುವ ತ್ವಚೆ ಬೇಕೆಂದು ಬಯಸುವುದಾದರೆ antioxidants ಅಧಿಕವಿರುವ ಆಹಾರವನ್ನು ಮತ್ತು ಹಣ್ಣುಗಳನ್ನು ತಿನ್ನಬೇಕು. ಬೆರ್ರಿ, ದಾಳಿಂಬೆ, ಗ್ರೀನ್ ಟೀ, ನಟ್ಸ್, ಬೀನ್ಸ್, ದವಸ ಧಾನ್ಯಗಳನ್ನು ಆಹಾರ ಕ್ರಮದಲ್ಲಿ ಸೇರಿಸಿದರೆ ತ್ವಚೆಗೆ ತುಂಬಾ ಒಳ್ಳೆಯದು.
5. ಮುಖಕ್ಕೆ ಸ್ಟೀಮ್ ಕೊಡಲು ನೀರನ್ನು ಕುದಿಸಿ ಕೊಡುವ ಬದಲು ಹಾಲನ್ನು ಕುದಿಸಿ ಸ್ಟೀಮ್ ಕೊಟ್ಟರೆ ಹೆಚ್ಚಿನ ಪ್ರಯೋಜನವನ್ನು ಪಡೆಯುಬಹುದು. ಮುಖವನ್ನು ಪ್ರತಿ ದಿನ ಕ್ಲೆನ್ಸ್ ಮಾಡಿ ಮಾಯಿಶ್ಚರೈಸರ್ ಮಾಡಿದರೆ ತ್ವಚೆ ಬೇಗನೆ ಮುಪ್ಪಾಗುವುದಿಲ್ಲ, ಸದಾ ಕಾಂತಿಯಿಂದ ಕೂಡಿರುತ್ತದೆ.



Click it and Unblock the Notifications