Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮುಖದ ಆರೈಕೆಗೆ ಸಹಾಯ ಮಾಡುತ್ತೆ ಕನ್ನಡಿ ಪರೀಕ್ಷೆ

ಹೆಚ್ಚಿವರಿಗೆ ತಮ್ಮ ತ್ವಚೆ ಯಾವ ಬಗೆಯದು ಅನ್ನುವುದು ಗೊತ್ತಿರುವುದಿಲ್ಲ. ನಿಮ್ಮ ತ್ವಚೆ ಯಾವ ಗುಣ ಹೊಂದಿದೆ ಅನ್ನುವುದನ್ನು ಕನ್ನಡಿ ಪರೀಕ್ಷೆಯಿಂದ ತಿಳಿದುಕೊಳ್ಳಬಹುದು.
ಕನ್ನಡಿ ಪರೀಕ್ಷೆಯಿಂದ ತ್ವಚೆ ಬಗೆ ತಿಳಿದುಕೊಳ್ಳುವ ಮುನ್ನ ಈ ಕೆಳಗಿನ ಅಂಶಗಳನ್ನು ತಪ್ಪದೇ ಪಾಲಿಸಿ.
1. ಈ ಪರೀಕ್ಷೆಗೆ ತೊಡಗುವ ಮುನ್ನ ಹವಾನಿಯಂತ್ರಣ ಕೊಠಡಿಯಲ್ಲಿದ್ದರೆ ಎಸಿ ಆಫ್ ಮಾಡಿ. ಏಕೆಂದರೆ ಹವಾನಿಯಂತ್ರಣ ಕೊಠಡಿಯಲ್ಲಿದ್ದರೆ ತ್ವಚೆ ಒಣಗುವುದು, ಆದ್ದರಿಂದ ತ್ವಚೆ ಯಾವ ಬಗೆಯದು ಎಂದು ತಿಳಿಯಲು ಸಾಧ್ಯವಾಗುವುದಿಲ್ಲ.
2. ಪರೀಕ್ಷೆ ಮಾಡುವ 1 ಗಂಟೆ ಮೊದಲು ಮುಖ ತೊಳೆದಿರಬಾರದು.
3. ಪರೀಕ್ಷೆಗೆ ಅರ್ಧಗಂಟೆ ಮೊದಲು ಬಿಸಿಲಿಗೆ ಹೋಗಬಾರದು. ಬೆವರು ಬರುವಂತಹ ಯಾವುದೇ ಕೆಲಸ ಮಾಡಬಾರದು.
ಈಗ ಕನ್ನಡಿ ಪರೀಕ್ಷೆ ಮಾಡುವ ವಿಧಾನ:
ಕನ್ನಡಿಯನ್ನು ಹಿಡಿದು ಮುಖವನ್ನು ಕೂಲಂಕಷವಾಗಿ ಪರೀಕ್ಷಿಸಬೇಕು. ಹೀಗೆ ಪರೀಕ್ಷಿಸುವಾಗ ಹಣೆ, ಮೂಗು, ಗಲ್ಲವನ್ನು ಪರೀಕ್ಷಿಸಿ ನಂತರ ಕೆನ್ನೆಯನ್ನು ಕೈಯಿಂದ ಒತ್ತಿ ಹಿಡಿದು ಗಮನಿಸಬೇಕು. ಈ ಕೆಳಗಿನ ಲಕ್ಷಣಗಳ ಅಧಾರದ ಮೇಲೆ ನಿಮ್ಮ ತ್ವಚೆ ಯಾವ ಬಗೆಯದು ಎಂದು ಕಂಡುಹಿಡಿಯಬಹುದು.
ಎಣ್ಣೆ ತ್ವಚೆ: ಹಣೆ, ಮೂಗು, ಮೂಗಿನ ಬದಿಗಳಲ್ಲಿ, ಕೆಲವರಿಗೆ ಕೆನ್ನೆಯಲ್ಲಿ ಎಣ್ಣೆ ಗೋಚಸಿದರೆ ಅದು ಎಣ್ಣೆ ತ್ವಚೆ ಆಗಿದೆ. ಎಣ್ಣೆ ತ್ವಚೆ ಎಣ್ಣೆ ಅಂಶದಿಂದ ಹೊಳೆಯುತ್ತಿರುತ್ತದೆ.
ಒಣ ತ್ವಚೆ: ಮುಖದಲ್ಲಿ ಯಾವುದೇ ಎಣ್ಣೆ ಅಂಶ ಕಾಣಿಸದೆ ಮುಖದಲ್ಲಿರುವ ಕೂದಲುಗಳು ನೇರವಾಗಿ ನಿಂತಂತೆ ಕಂಡರೆ ಆ ಬಗೆಯ ತ್ವಚೆ ಒಣ ತ್ವಚೆ ಆಗಿದೆ.
ಸಾಮಾನ್ಯ ತ್ವಚೆ: ಹಣೆ ಮತ್ತು ಮೂಗಿನ ಭಾಗದಲ್ಲಿ ಎಣ್ಣೆ ಅಂಶ ಕಂಡು ಬಂದು, ಉಳಿದ ಭಾಗ ಒಣಗಿದ ತ್ವಚೆ ಹೊಂದಿದ್ದರೆ ಅದು ಸಾಮಾನ್ಯ ತ್ವಚೆ ಆಗಿದೆ.
ಸೂಕ್ಷ್ಮವಾದ ತ್ವಚೆ: ಈ ಬಗೆಯ ತ್ವಚೆ ಇರುವವರು ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಈ ರಿತಿಯ ತ್ವಚೆಗೆ ಮೊಡವೆ, ತುರಿಕೆ, ಮುಂತಾದ ಸಮಸ್ಯೆಗಳು ಬೇಗನೆ ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮ ತ್ವಚೆಯನ್ನು ಕಂಡು ಹಿಡಿಯಬೇಕಾದರೆ ಮುಖವನ್ನು ಕನ್ನಡಿಗೆ ಒತ್ತಿ ಸ್ವಲ್ಪ ಹೊತ್ತು ಹಿಡಿಯಬೇಕು. ಆಗ ಮುಖ ಕೆಂಪಾಗುವುದು ಅಥವಾ ತುರಿಕೆ ಕಂಡು ಬಂದರೆ ಅದು ಸೂಕ್ಷ್ಮವಾದ ತ್ವಚೆ ಆಗಿದೆ.
ಹೀಗೆ ತ್ವಚೆಯ ಬಗೆಯನ್ನು ತಿಳಿದುಕೊಂಡು ತ್ವಚೆ ರಕ್ಷಣೆ ಮಾಡಿದರೆ, ಹೊಳಪಿನ ತ್ವಚೆ ನಿಮ್ಮದಾಗುವುದು.



Click it and Unblock the Notifications
