Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತ್ವಚೆ ರಕ್ಷಣೆಗೆ ನೀವು ಕಲಿಯಲೇಬಾರದ ಅಭ್ಯಾಸಗಳು

1. ಕಣ್ಣಿನ ತ್ವಚೆ ಎಳೆದು ಮೇಕಪ್ ಮಾಡುವುದು: ಮಸ್ಕರಾಅಥವಾ ಕಾಜಲ್ ಹಾಕುವಾಗ ಕಣ್ಣಿನ ತ್ವಚೆಯನ್ನು ಎಳೆದು ಹಾಕುವುದು, ನಂತರ ಮುಖ ತೊಳೆಯುವಾಗ ಆ ರೀತಿ ಮಾಡುವ ಅಭ್ಯಾಸವನ್ನು ಹೊಂದಿದ್ದರೆ ಕಣ್ಣಿನ ಕೆಳಭಾಗದಲ್ಲಿ ಬೇಗನೆ ನೆರಿಗೆ ಬೀಳುವುದು. ಆದ್ದರಿಂದ ಕಣ್ಣಿಗೆ ಅಲಂಕಾರ ಮಾಡುವಾಗ ಸ್ವಲ್ಪ ಜಾಗೃತಿವಹಿಸಿ ಮಾಡಬೇಕು.
2. ಮೇಕಪ್ ಟೋನರ್: ಮೇಕಪ್ ಟೋನರ್ ಅನ್ನು ಹಾಗೇ ಹಾಕಿ ಬಿಡುತ್ತೇವೆ, ಟೋನರ್ ಅನ್ನು ಮುಖದಿಂದ ಉಜ್ಜಿ ತೆಗೆಯಲು ಹೋಗುವುದಿಲ್ಲ.ಟೋನರ್ ಬಳಸಿ ಮೇಕಪ್ ಅನ್ನು ಕ್ಲೆನ್ಸ್ ಮಾಡಲು (ತೆಗೆಯಲು) ಉಪಯೋಗಿಸುತ್ತೇವೆ. ಆದರೆ ಅದನ್ನು ಮುಖದಿಂದ ಉಜ್ಜಿ ತೆಗೆಯದಿದ್ದರೆ ಮುಖದಲ್ಲಿರುವ ಮೇಕಪ್ ಸಂಪೂರ್ಣವಾಗಿ ಹೋಗುವುದಿಲ್ಲ. ಇದರಿಂದ ಕೆಮಿಕಲ್ ಹಾಗೇ ನಿಂತು ತ್ವಚೆಯ ಹೊಳಪು ಹಾಳಾಗುವುದು.
3. ದಿನಾ ಸ್ಕ್ರಬ್ಬಿಂಗ್ ಮಾಡುವುದು: ಕಂಪನಿಗಳು ದಿನಕ್ಕೆ 2 ಬಾರಿ ಸ್ಕ್ರಬ್ ಮಾಡುವಂತೆ ಜಾಹೀರಾತು ನೀಡಬಹುದು. ಆದರೆ ತ್ವಚೆಗೆ ಆ ರೀತಿ ಬಳಕೆ ಮಾಡುವುದು ಅಷ್ಟು ಒಳ್ಳೆಯದಲ್ಲ. ತ್ವಚೆ ಪೋಷಣೆ ಮತ್ತು ಮುಖದ ಕಾಂತಿಗೆ ವಾರಕ್ಕೆ 2 ಬಾರಿ ಸ್ಕ್ರಬ್ ಮಾಡುವುದು ಒಳ್ಳೆಯದು.
4. ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯುವುದು: ಹೆಚ್ಚಿನ ಜನರು ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯುವ ಅಭ್ಯಾಸ ಹೊಂದಿರುವುದಿಲ್ಲ. ಆದರೆ ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯುವುದರಿಂದ ತ್ವಚೆಯ ರಂಧ್ರಗಳು ಬೇಗನೆ ತೇವಾಂಶವನ್ನು ಹೀರಿಕೊಳ್ಳುತ್ತದೆ.
5. ಕಾಲಾವಧಿ ಮುಗಿದ ಮೇಕಪ್ ಬಳಸುವುದು: ಹೆಚ್ಚಿನ ಜನರು ಮೇಕಪ್ ಸಾಧನಗಳು ಖಾಲಿಯಾಗಿಲ್ಲ ಅಂತ ಅದರ ಕಾಲಾವಧಿ ಮುಗಿದು ಹೋಗಿದ್ದರೂ ಅದನ್ನೇ ಬಳಸುತ್ತಿರುತ್ತಾರೆ. ಈ ರೀತಿ ಮಾಡಿದರೆ ತ್ವಚೆಗೆ ಹಾನಿ ಉಂಟಾಗುವುದು.
6. ಕೈಯಿಂದ ಆಗಾಗ ಮುಖ ಮುಟ್ಟುತ್ತಾ ಇರುವುದು: ಇದೊಂದು ಅಭ್ಯಾಸ ಹೆಚ್ಚಿನ ಜನರಿಗೆ ಇರುತ್ತದೆ. ಮುಖದಲ್ಲಿ ಚಿಕ್ಕದಾಗಿ ಗುಳ್ಳೆಗಳು ಬಂದರೆ ಸಾಕು ಅದನ್ನು ಕಿತ್ತು ದೊಡ್ಡದಾಗಿ ಮಾಡುತ್ತಾರೆ. ಈ ಅಭ್ಯಾಸವಿದ್ದರೆ ಕೂಡಲೇ ನಿಲ್ಲಸಬೇಕು, ಇಲ್ಲದಿದ್ದರೆ ಮುಖದ ತುಂಬಾ ಕಲೆಗಳು ಉಂಟಾಗುವುದು.



Click it and Unblock the Notifications
