Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸುಂದರ ತ್ವಚೆ ನೀಡುತ್ತೆ ಸಕ್ಕರೆ ಸ್ಕ್ರಬ್!

ಸಕ್ಕರೆ ಬೇರೆ -ಬೇರೆ ಮಿಶ್ರಣದ ಜೊತೆ ಮಿಶ್ರ ಮಾಡಿ ಹಚ್ಚುವುದರಿಂದ ವಿಭಿನ್ನ ರೀತಿಯ ಪ್ರಯೋಜಗಳು ದೊರೆಯುತ್ತದೆ. ಆದ್ದರಿಂದ ಎಲ್ಲಾ ರೀತಿಯ ತ್ವಚೆಯವರು ಸುಂದರವಾದ ತ್ವಚೆಗಾಗಿ ಸಕ್ಕರೆಯನ್ನು ಬಳಸಬಹುದು.
ಸಕ್ಕರೆ ಸ್ಕ್ರಬ್:
1. ಸಕ್ಕರೆ ಮತ್ತು ನಿಂಬೆ ರಸ: ಮುಖ ತುಂಬಾ ಮೊಡವೆಯಿದ್ದು ಯಾವುದೇ ಔಷಧಿ ಪರಿಣಾಮಕಾರಿಯಾಗಿಲ್ಲವೆ? ಅದಕ್ಕಾಗಿ ನಿರಾಶೆ ಬೇಡ ಈ ಸಮಸ್ಯೆಗೆ ಮುಕ್ತಿಯನ್ನು ಸಕ್ಕರೆಯಿಂದ ಪಡೆಯಬಹುದು! ಸಕ್ಕರೆ ಮತ್ತು ನಿಂಬೆ ರಸ ಮಿಶ್ರ ಮಾಡಿ, ನಿಂಬೆ ರಸದಲ್ಲಿ ಸಕ್ಕರೆ ಕರಗಿದ ಬಳಿಕ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆಯಾಗುವುದು.
2. ಸಕ್ಕರೆ ಮತ್ತು ಆಲೀವ್ ಎಣ್ಣೆ: ಒಣ ತ್ವಚೆಯವರಿಗೆ ಸಕ್ಕರೆ ಮತ್ತು ನಿಂಬೆರಸ ಬಳಸುವುದರಿಂದ ಅಷ್ಟು ಪ್ರಯೋಜನವಿಲ್ಲ. ಆದ್ದರಿಂದ ಒಣ ತ್ವಚೆಯವರು ಸಕ್ಕರೆ ಮತ್ತು ಆಲೀವ್ ಎಣ್ಣೆ ಮತ್ತು ಸ್ವಲ್ಪ ಜೇನು ಮಿಶ್ರ ಮಾಡಿ ಮುಖಕ್ಕೆ ಹಚ್ಚುವುದು ಒಳ್ಳೆಯದು. ಈ ಮಿಶ್ರಣವನ್ನು ಉಜ್ಜುವಾಗ ವೃತ್ತಾಕಾರವಾಗಿ ಉಜ್ಜಿ.
3. ಸಕ್ಕರೆ, ರೋಸ್ ಮೆರಿ ಎಣ್ಣೆ ಮತ್ತು ಪುದೀನಾ : ಬೇಸಿಗೆಯಲ್ಲಿ ಹೋದರು ಕೂಡ ತ್ವಚೆ ತನ್ನ ತಾಜಾತನ ಹೊಳೆಯುವಂತೆ ಮಾಡಲು ಸಕ್ಕರೆ ರೋಸ್ ಮೆರಿ ಎಣ್ಣೆ ( ರೋಸ್ ಮೆರಿ ಸಿಗದಿದ್ದರೆ ಬಾದಾಮಿ ಅಥವಾ ತೆಂಗಿನೆಣ್ಣೆ ಬಳಸಬಹುದು) ಮತ್ತು ಪುದೀನಾ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ತೊಳೆದರೆ ಮುಖ ತನ್ನ ತಾಜಾತನ ಉಳಿಸಿಕೊಳ್ಳುತ್ತದೆ.
5. ಸಕ್ಕರೆ ಮತ್ತು ಕಾಫಿ: ಎರಡು ಚಮಚ ಕಾಫಿ ಪುಡಿಗೆ ಒಂದು ಚಮಚ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ತ್ವಚೆ ಅಂದ ಹೆಚ್ಚುವುದು.
6. ಸಕ್ಕರೆ, ಜೇನು ಮತ್ತು ಮೊಸರು: ಬಿಸಿಲಿನಿಂದ ತ್ವಚೆ ಕಪ್ಪಾಗಿದ್ದರೆ (ಸನ್ ಟ್ಯಾನ್) ಈ ಮಿಶ್ರಣಗಳನ್ನು ಮಿಶ್ರ ಮಡಿ ಹಚ್ಚಿದರೆ ತ್ವಚೆ ಮತ್ತೆ ಹೊಳಪನ್ನು ಪಡೆಯುವುದು.



Click it and Unblock the Notifications
