Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎಲೆಕ್ಟ್ರಾಲಿಸಿಸ್ ನಂತರ ತ್ವಚೆ ಆರೈಕೆ

ಸ್ವಲ್ಪ ದುಬಾರಿಯಾಗಿರುವ ಈ ವಿಧಾನದಲ್ಲಿ ಬೇಡದ ಕೂದಲನ್ನು ಬುಡದಿಂದಲೆ ಕೀಳುವುದರಿಂದ ಬೇಡದ ಕೂದಲನ್ನು ಪದೇಪದೆ ತೆಗೆಯುವ ಕಿರಿಕಿರಿ ಇರುವುದಿಲ್ಲ. ಆದ್ದರಿಂದ ಈ ವಿಧಾನ ತುಂಬಾ ಜನಪ್ರಿಯವಾಗುತ್ತಿದೆ. ಆದರೆ ಈ ರೀತಿ ಮಾಡಿಸಿದ ಮೇಲೆ ಸ್ವಲ್ಪ ಮುನ್ನಚ್ಚರಿಕೆವಹಿಸದಿದ್ದರೆ ಕಪ್ಪು ಕಲೆಗಳು ಉಂಟಾಗುವುದು, ತ್ವಚೆ ಕೆಂಪಾಗುವುದು, ತುರಿತ ಮುಂತಾದ ಅಡ್ಡಪರಿಣಾಮ ಉಂಟಾಗುವುದು.
ಆದ್ದರಿಂದ ಎಲೆಕ್ಟ್ರಾಲಿಸಿಸ್ ಮಾಡಿಸಿದ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ತ್ವಚೆಗೆ ಯಾವುದೆ ಹಾನಿ ಉಂಟಾಗುವುದಿಲ್ಲ.
1. ತುಂಬಾ ಕೆಮಿಕಲ್ ಇರುವ ಸೋಪ್ ಗಳನ್ನು ಬಳಸಬಾರದು. ಕೂದಲು ತೆಗೆದ ಜಾಗದಲ್ಲಿ ತುಂಬಾ ಹೊತ್ತು ಸೋಪಿನಿಂದ ಉಜ್ಜಬಾರದು.
2. ವೈದ್ಯರನ್ನು ಸಂಪರ್ಕಿಸಿ ಆಂಟಿಬೈಯೊಟಿಕ್ ಮಾತ್ರೆಯನ್ನು ಎಲೆಕ್ಟ್ರಾಲಿಸಿಸ್ ಮಾಡಿಸಿದ ದಿನ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದರೆ ಯಾವುದೇ ರೀತಿಯ ತುರಿಕೆ, ಸೋಂಕು ಉಂಟಾಗುವುದಿಲ್ಲ.
3. ಚಿಕಿತ್ಸೆ ಮಾಡಿಸಿದ ದಿನ ಯಾವುದೇ ಕ್ರೀಮ್ ಅಥವಾ ಲೋಷನ್ ಹಚ್ಚಿಕೊಳ್ಳಬಾರದು.
4. ಚಿಕಿತ್ಸೆ ಮಾಡಿಸಿದ 24 ಗಂಟೆವರೆಗೆ ಮುಖಕ್ಕೆ ಮೇಕಪ್ ಮಾಡಬಾರದು.
5. ಆ ದಿನ ಈಜಲು ಹೋಗಬಾರದು (ಎರಡು ದಿನಗಳವರೆಗೆ ಕ್ಲೊರೀನ್ ನೀರು ಮುಟ್ಟದಿರುವುದು ಒಳ್ಳೆಯದು).
6. ಚಿಕಿತ್ಸೆ ಮಾಡಿಸಿದ ಜಾಗಕ್ಕೆ ಉಗುರು ತಾಗಿಸಬಾರದು.



Click it and Unblock the Notifications
