Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬ್ಲ್ಯಾಕ್ ಹೆಡ್ಸ್ ನಿವಾರಿಸುತ್ತೆ ಈ ಸ್ಕ್ರಬ್ಬಿಂಗ್

ಮುಖ ಸ್ಕ್ರಬ್ ಮಾಡುವುದರಿಂದ ಬ್ಲ್ಯಾಕ್ ಹೆಡ್ಸ್ ನಿವಾರಿಸಬಹುದು. ಆದರೆ ಸ್ಕ್ರಬ್ ಮಾಡುವ ಮೊದಲು ಸ್ಟೀಮಿಂಗ್ ಕೊಡಿ. ನಂತರ ತಣ್ಣಿರಿನಿಂದ ಮುಖ ತೊಳೆದು ನಂತರ ಸ್ಕ್ರಬ್ ಮಾಡಿ. ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಈ ಕೆಳಗಿನ ವಸ್ತುಗಳನ್ನು ಬಳಸಿ ಸ್ಕ್ರಬ್ ಮಾಡಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ.
1. ಅಡುಗೆ ಸೋಡಾ: 2 ಚಮಚ ಅಡುಗೆ ಸೋಡಾ, 1/2 ಚಮಚ ಪುಡಿ ಉಪ್ಪು ಮತ್ತು 1 ಚಮಚ ನೀರು ಮಿಶ್ರ ಮಾಡಿ ಅದರಿಂದ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಬಹುದು.
2. ಅಕ್ಕಿ ಮತ್ತು ಹಾಲು: ಅಕ್ಕಿಯನ್ನು 1/2 ಲೋಟ ನೀರಿನಲ್ಲಿ 5 ಗಂಟೆ ಮುಳುಗಿಸಬೇಕು. ನಂತರ ಅದನ್ನು ಪೇಸ್ಟ್ ರೀತಿ ಮಾಡಿ ಸ್ಕ್ರಬ್ ಮಾಡಬಹುದು.
3. ನಿಂಬೆ ಹಣ್ಣು: ನಿಂಬೆ ಹಣ್ಣಿನ ತುಂಡಿನಿಂದ ಮುಖವನ್ನು ಉಜ್ಜಿದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುತ್ತದೆ.
4. ಓಟ್ ಮೀಲ್ಸ್: ಒಂದು ಕಪ್ ಓಟ್ ಮೀಲ್ಸ್ ಗೆ ಒಂದು ಚಮಚ ಅಡುಗೆ ಸೋಡಾ ಮತ್ತು ಲೋಳೆಸರ ರಸ ಹಾಕಿ ಪೇಸ್ಟ್ ರೀತಿ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ಬಿಸಿ ನೀರಿನಿಂದ ಮುಖ ತೊಳೆಯಬೇಕು.
5. ಟೊಮೆಟೊ: ಕತ್ತರಿಸಿದ ಟೊಮೆಟೊ ತುಂಡನ್ನು ಮುಖಕ್ಕೆ ಹಚ್ಚಬೇಕು. ನಂತರ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ದಿನವೂ ಮಾಡಿದರೆ ತ್ವಚೆ ಸುಂದರವಾಗುತ್ತದೆ.
6. ಮೊಟ್ಟೆಯ ಬಿಳಿ: ಮೊಟ್ಟೆಯ ಬಿಳಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ ನಂತರ ಬಿಸಿನೀರಿನಿಂದ ತೊಳೆಯಬೇಕು. ಈ ರೀತಿ ವಾರಕ್ಕೆ 2-3 ಬಾರಿ ಮಾಡಿದರೆ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುವುದರ ಜೊತೆಗೆ ತ್ವಚೆ ಮೃದುವಾಗುತ್ತದೆ.
7. ಆಸ್ಟ್ರಿನ್ ಜೆಂಟ್ : ಇದು ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತದೆ. ರಾತ್ರಿ ಮಲಗುವ ಮುನ್ನ ಆಸ್ಟ್ರಿನ್ ಜೆಂಟ್ ಅನ್ನು ಸ್ವಲ್ಪ ಹತ್ತಿಗೆ ಹಾಕಿ ಮುಖವನ್ನು ಒರೆಸಬೇಕು. ಈ ರೀತಿ ಮಾಡಿದರೆ ಮೊಡವೆ ನಿವಾರಣೆಯಾಗುತ್ತದೆ.
8. ಜೇನು: ಜೇನು ತುಪ್ಪವನ್ನು ಮುಖಕ್ಕೆ ಹಚ್ಚಿ 1/2 ಗಂಟೆ ಬಿಟ್ಟು ಹದ ಬಿಸಿ ನೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.



Click it and Unblock the Notifications
