Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಳಿಯಲ್ಲಿ ಕಾಂತಿ ಕಳೆದುಕೊಳ್ಳದಿರು ಸುಂದರಿಯೇ..

1. ಕೆಮಿಕಲ್ ಇರುವ ಕ್ರೀಮ್ ಬದಲು ದೇಹಕ್ಕೆ ಆಲೀವ್, ಬಾದಾಮಿ ಅಥವಾ ಸಾಸಿವೆ ಎಣ್ಣೆಯನ್ನು ಸ್ನಾನಕ್ಕೆ ಒಂದು ಗಂಟೆ ಮೊದಲು ಹಚ್ಚಿ. ಈ ರೀತಿ ಮಾಡಿದರೆ ಮೈಯಲ್ಲಿ ಸ್ನಾನದ ನಂತರ ಕೂಡ ಮಾಯಿಶ್ಚರೈಸರ್ ಹಾಗೆ ಇರುತ್ತದೆ.
2. ಕ್ರೀಮ್ ಗೆ ಹೋಲಿಸಿದರೆ ಬಾಡಿಲೋಷನ್ ಹಚ್ಚಿಕೊಳ್ಳುವುದು ಒಳ್ಳೆಯದು. ಕ್ರೀಮ್ ಗಿಂತ ಬಾಡಿಲೋಷನ್ ಲಿಕ್ವಿಡ್ ಜಾಸ್ತಿ ಇರುವುದರಿಂದ ಬೇಗನೆ ತ್ವಚೆಯಲ್ಲಿ ಸವರಬಹುದು. ಬಾಡಿಲೋಷನ್ ತ್ವಚೆಯನ್ನು ರಕ್ಷಣೆ ಮಾಡುತ್ತದೆ.
3. ಮನೆಯಲ್ಲಿ ತಯಾರಿಸಿದ ಫೇಸ್ ಮಾಸ್ಕ್ ಬಳಸುವುದು ಸೂಕ್ತ. ಹಾಲಿನ ಕೆನೆ ಮತ್ತು ಜೇನನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುತ್ತದೆ.
4. ರಾತ್ರಿ ಮತ್ತು ಬೆಳಗ್ಗೆ ಹಚ್ಚಲು ಬೇರೆ-ಬೇರೆ ಕ್ರೀಮ್ ಹಚ್ಚ ಬೇಕು. ದಪ್ಪವಿರುವ ಕ್ರೀಮ್ ರಾತ್ರಿಯಲ್ಲಿ ಹಚ್ಚಿ ತ್ವಚೆ ಪೋಷಣೆ ಮಾಡಬಹುದು.
5. ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ತ್ವಚೆಯನ್ನು ಗಡಸಾಗಿ ಮಾಡುತ್ತದೆ. ತುಂಬಾ ಕೋಲ್ಡ್ ಕ್ರೀಮ್ ಹಚ್ಚುವುದರಿಂದ ಕೂಡ ತ್ವಚೆ ಕಪ್ಪಾಗಿ ಕಾಣುತ್ತದೆ. ಹಗಲಿನಲ್ಲಿ ತೆಳುವಾದ ಮುಖ ಮತ್ತು ಸುಲಭವಾಗಿ ಹೀರಿಕೊಳ್ಳುವ ಕ್ರೀಮ್ ಬಳಸಬೇಕು.
6. ಮಾಯಿಶ್ಚರೈಸರ ಹಚ್ಚಿದ್ದಷ್ಟು ತ್ವಚೆಗೆ ಒಳ್ಳೆಯದು.
7. ಪ್ರಯಾಣ ಮಾಡುವಾಗ ವೆಟ್ ವೈಪ್ ಜೊತೆಗೆ ಕೊಂಡೊಯ್ಯಬೇಕು. ಇದರಿಂದ ಮುಖವನ್ನು ಗಂಟೆಗೊಮ್ಮೆ ಒರೆಸಿಕೊಳ್ಳುವುದರಿಂದ ಮುಖದಲ್ಲಿ ದೂಳು ಅಷ್ಟಾಗಿ ಕೂರುವುದಿಲ್ಲ.
ಈ ರೀತಿ ಮಾಡಿ ಚಳಿಗಾಲದಲ್ಲಿ ತ್ವಚೆ ಕಾಂತಿಯನ್ನು ಉಳಿಸಿಕೊಳ್ಳಿ.



Click it and Unblock the Notifications
