Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ಚಳಿಗೆ ಒಣಗಿದೆಯೇ ಮೈ, ಈ ಜೆಲ್ ಹಚ್ಚಿಕೊಳ್ಳಿ

ಪೆಟ್ರೋಲಿಯಂ ಜೆಲ್ಲಿ ಮುಖಕ್ಕೆ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ಕೆಳಗಿನ ಉಪಯುಕ್ತ ಗುಣದಿಂದಾಗಿ ಪೆಟ್ರೋಲಿಯಂ ಜೆಲ್ಲಿ ಅತ್ಯುತ್ತಮವಾದ ಸೌಂದರ್ಯವರ್ಧಕ ಸಾಧನವಾಗಿದೆ.
ಸೌಂದರ್ಯವರ್ಧಕವಾಗಿ ಪೆಟ್ರೋಲಿಯಂ ಜೆಲ್ಲಿ:
1. ಚಳಿಯಿಂದ ಮುಖ ಒಡೆಯುವುದನ್ನು ತಡೆಯಲು ಮಲಗುವ ಮುಂಚೆ ಪೆಟ್ರೋಲಿಯಂ ಜೆಲ್ಲಿ ಹಚ್ಚಬೇಕು.
2. ಹಿಮ್ಮಡಿ ಒಡೆದರೆ ಕಾಲು ಅಸಹ್ಯವಾಗಿ ಕಾಣಿಸುತ್ತದೆ, ಅಲ್ಲದೆ ಕಾಲಿನಲ್ಲಿ ಬಿರುಕು ಬಿಟ್ಟ ಜಾಗದಲ್ಲಿ ರಕ್ತ ಬಂದು ಕಾಲು ನೋವು ಉಂಟಾಗುವುದು. ಹಿಮ್ಮಡಿ ಒಡೆದಿದ್ದರೆ ರಾತ್ರಿ ಮಲುಗುವಾಗ ಪೆಟ್ರೋಲಿಯಂ ಜೆಲ್ಲಿ ಹಚ್ಚಿ ಸಾಕ್ಸ್ ಹಾಕಿ ಮಲಗಬೆಕು. ಇದರಿಂದ ಹಿಮ್ಮಡಿ ಒಡೆಯುವುದು ಮಾಯವಾಗುತ್ತದೆ.
3. ಉಗುರುಗಳು ಆಕರ್ಷಕವಾಗಿ ಕಾಣಲು ಪೆಟ್ರೋಲಿಯಂ ಜೆಲ್ಲಿ ಹಚ್ಚಿ ಒಂದು ನಿಮಿಷ ಮಸಾಜ್ ಮಾಡಬೇಕು.
4. ಕಣ್ ರೆಪ್ಪೆ ಆಕರ್ಷಕವಾಗಿ ಕಾಣಲು ಮಸ್ಕಾರಾ ಹಚ್ಚುವ ಮೊದಲು ಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಬೇಕು.
5. ಕಣ್ಣಿನ ಮೇಕಪ್ ಮಾಡುವಾಗ ಕಣ್ ರೆಪ್ಪೆ ಮೇಲ್ಭಾಗದಲ್ಲಿ ಹಚ್ಚಿದರೆ ತುಂಬಾ ಹೊತ್ತಿನವರೆಗೆ ಹೊಳೆಯುತ್ತಿರುತ್ತದೆ.
6. ಮೊಣಕೈ ಕಪ್ಪಾಗುವುದು ಸಾಮಾನ್ಯವಾಗಿ ಕಂಡುಬರುವ ತ್ವಚೆ ಸಮಸ್ಯೆ. ದಿನವೂ ಮಲಗುವ ಮೊದಲು ಮೊಣಕೈಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ 2 ನಿಮಿಷ ಮಸಾಜ್ ಮಾಡಿದರೆ ಕಪ್ಪು ಬಣ್ಣ ಕಡಿಮೆಯಾಗುವುದು.
7. ಸುಗಂಧ ದ್ರವ್ಯಗಳನ್ನು ಹಾಕಿದಾಗ ಅದರ ಸುವಾಸನೆ ತುಂಬಾ ಹೊತ್ತು ನಿಲ್ಲಲು ಪೆಟ್ರೋಲಿಯಂ ಜೆಲ್ಲಿ ಹಚ್ಚಿ ನಂತರ ಸುಗಂಧ ದ್ರವ್ಯ ಹಾಕಬೇಕು.
ಈ ರೀತಿ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಿ ಸೌಂದರ್ಯವನ್ನು ಕಾಪಾಡಿಕೊಳ್ಳಿ.



Click it and Unblock the Notifications
