Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೈಸರ್ಗಿಕವಾಗಿ ವ್ಯಾಕ್ಸ್ ತಯಾರಿಸುವ ವಿಧಾನ

ಚರ್ಮದ ಸಮಸ್ಯೆ ಉಂಟಾಗುವುದಿಲ್ಲ, ಚರ್ಮವೂ ನುಣಪಾಗಿ ಕಾಣುತ್ತದೆ. ಈ ರೀತಿಯ ನೈಸರ್ಗಿಕ ವ್ಯಾಕ್ಸ್ ಕ್ರೀಮ್ ಮಾಡುವ ವಿಧಾನ ನೋಡಿ ಇಲ್ಲಿದೆ.
1. ಸಕ್ಕರೆ ಮತ್ತು ನಿಂಬೆ ಹಣ್ಣು: ಸಕ್ಕರೆ ದ್ರಾವಣ ಮತ್ತು ನಿಂಬೆರಸವನ್ನು ಸಮಪ್ರಮಾಣದಲ್ಲಿ ಹಾಕಿ 4-5 ನಿಮಿಷ ಬಿಸಿ ಮಾಡಬೇಕು. ಆಗ ಗಟ್ಟಿಯಾದ ಮಿಶ್ರಣ ಸಿದ್ಧವಾಗುತ್ತದೆ. ಇದನ್ನು ಚರ್ಮಕ್ಕೆ ಹಚ್ಚಿ ವ್ಯಾಕ್ಸಿಂಗ್ ಸ್ಟ್ರಿಪ್ ಬಳಸಿ ಬೇಡದ ಕೂದಲನ್ನು ತೆಗೆಯಬಹುದು. ಈ ರೀತಿ ಮಾಡುವುದರಿಂದ ಯಾವುದೇ ರೀತಿಯಲ್ಲಿ ಚರ್ಮಕ್ಕೆ ಹಾನಿ ಉಂಟಾಗುವುದಿಲ್ಲ.
2. ಸಕ್ಕರೆ ಮತ್ತು ಕಬ್ಬಿನ ಜ್ಯೂಸ್: ಕಬ್ಬಿನ ರಸದ ಪ್ರಮಾಣದ ಅರ್ಧದಷ್ಟು ನಿಂಬೆರಸ ಸೇರಿಸಬೇಕು. ಈ ಮಿಶ್ರಣಕ್ಕೆ ಜೇನು ಮತ್ತು ಕಡಲೆ ಹಿಟ್ಟು ಹಾಕಿ ಮೈಗೆ ಹಚ್ಚಿ ವ್ಯಾಕ್ಸಿಂಗ್ ಸ್ಟ್ರಿಪ್ ಬಳಸಿ ವ್ಯಾಕ್ಸ್ ಮಾಡಬಹುದು.
3. ಹೆಸರು ಕಾಳಿನ ಹಿಟ್ಟು ಮತ್ತು ಮುಲ್ತಾನಿಮಿಟ್ಟಿ: ಇದನ್ನು ಮಕ್ಕಳ ಮೈಯಲ್ಲಿ ಅಧಿಕ ಕೂದಲಿದ್ದರೆ ತೆಗೆಯಲು ಬಳಸುತ್ತಾರೆ, ಆದರೆ ಇದನ್ನು ಬಳಸಿ ಡೊಡ್ಡವರು ಮುಖದಲ್ಲಿನ ಬೇಡದ ಕೂದಲನ್ನು ತೆಗೆಯ ಬಹುದು. ಹೆಸರಿನ ಕಾಳಿನ ಹಿಟ್ಟು , ಮುಲ್ತಾನಿ ಮಿಟ್ಟಿ, ಹಾಲು ಮತ್ತು ನಿಂಬೆರಸ ಹಾಕಿ ಗಟ್ಟಿಯಾದ ಮಿಶ್ರಣ ಮಾಡಿ ಅದನ್ನು ಉಂಡೆ ಕಟ್ಟಿ ಆ ಉಂಡೆಯಿಂದ ಉಜ್ಜಿ ಬೇಡದ ಕೂದಲನ್ನು ತೆಗೆಯಬಹುದು.
4. ಜೇನು ಮತ್ತು ಅಕ್ಕಿ ಪುಡಿ: ಜೇನು ಮತ್ತು ಹೆಸರು ಕಾಳಿನ ತೆಳುವಾದ ಪುಡಿಯನ್ನು ಮಿಶ್ರ ಮಾಡಬೇಕು, ಅದಕ್ಕೆ ಅಕ್ಕಿ ಪುಡಿಯನ್ನು ಸಹ ಬೆರೆಸಬೇಕು, ಈ ಅಂಟಾದ ಮಿಶ್ರಣವನ್ನು 10 ನಿಮಿಷ ಕಾಲ ಇಟ್ಟು ನಂತರ ಮೈಗೆ ಹಾಕಿ ಉಜ್ಜಿ ಬೇಡದ ಕೂದಲನ್ನು ತೆಗೆಯಬಹುದು, ಈ ರೀತಿ ಮಾಡಿದ ನಂತರ ಚರ್ಮದಲ್ಲಿ ಉರಿ ಕಂಡು ಬಂದರೆ ರೋಸ್ ವಾಟರ್ ಬಳಸಬಹುದು.



Click it and Unblock the Notifications
