Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿ ತ್ವಚೆ ಪೋಷಣೆಗೆ ನೈಸರ್ಗಿಕ ಕ್ರೀಮ್

1.ಹಾಲಿನ ಕೆನೆ ಮತ್ತು ಜೇನು: ಜೇನು ಮತ್ತು ಹಾಲಿನ ಕೆನೆಯನ್ನು ಮಿಶ್ರ ಮಾಡಿ, ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ಹಾಲು ಹಾಕಿ ನಂತರ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ನಂತರ ಒದ್ದೆ ಬಟ್ಟೆಯಿಂದ ಮುಖವನ್ನು ಒರೆಸಬೇಕು. ಈ ರೀತಿ ಮಾಡಿದರೆ ಮುಖ ಒಣಗುವುದಿಲ್ಲ.
2. ಹಾಲಿನ ಕೆನೆ, ಅರಿಶಿಣ ಮತ್ತು ನಿಂಬೆರಸ: ಚಳಿಗಾಲದಲ್ಲಿ ಹಚ್ಚುವ ಕ್ರೀಮ್ ಗಳು ತೇವವಾಗಿರುವುದರಿಂದ ಮುಖದಲ್ಲಿ ದೂಳು ಬೇಗನೆ ಕೂರುತ್ತದೆ. ಇದರಿಂದ ಮುಖ ಕಪ್ಪಾಗುತ್ತದೆ. ಅದರ ಬದಲು ಹಾಲಿನ ಕೆನೆ, ಅರಿಶಿಣ ಮತ್ತು ನಿಂಬೆರಸ ಮಿಶ್ರಣವನ್ನು ಮುಖಕ್ಕೆ ಹಚ್ಚುವುದು ಒಳ್ಳೆಯದು. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಡಬೇಕು. ದಿನವೂ ಹೀಗೆ ಮಾಡುವುದರಿಂದ, ಮುಖ ಹೊಳಪಿನ ಜೊತೆಗೆ ಬಿಳುಪನ್ನೂ ಹೊಂದುವುದು.
3. ಕಿತ್ತಳೆ ಸಿಪ್ಪೆ, ಹಾಲಿನ ಕೆನೆ ಮತ್ತು ಸ್ಟ್ರಾಬರಿ: ಒಣಗಿದ ಕಿತ್ತಳೆ ಸಿಪ್ಪೆ, ಹಾಲಿನ ಕೆನೆ ಮತ್ತು ನಿಂಬೆರಸವನ್ನು ಮಿಕ್ಸಿಯಲ್ಲಿ ಅರೆದು ಪೇಸ್ಟ್ ಮಾಡಬೇಕು. ಈ ಪೇಸ್ಟ್ ಚಳಿಗಾಲದಲ್ಲಿ ತ್ವಚೆ ರಕ್ಷಣೆಗೆ ಹೇಳಿ ಮಾಡಿಸಿದ್ದಂತಹ ಫೇಶಿಯಲ್ ಮಾಸ್ಕ್ ಆಗಿದೆ. ಈ ರೀತಿ ಮಾಡಿದರೆ ತ್ವಚೆ ಒಣಗುವುದು, ತ್ವಚೆಯಲ್ಲಿ ಬಿರುಕು ಮುಂತಾದ ಸಮಸ್ಯೆಗಳು ಕಂಡು ಬರುವುದಿಲ್ಲ.
4. ಬಾದಾಮಿ, ಬೆಣ್ಣೆ, ಅಕ್ಕಿ ಪುಡಿ ಮತ್ತು ಹಾಲಿನ ಕೆನೆ: ಬಾದಾಮಿ ತ್ವಚೆಯನ್ನು ಮಾಯಿಶ್ಚರೈಸರ್ ಮಾಡುತ್ತಾರೆ. ಈ ಬಾದಾಮಿ ಫೇಶ್ ಮಾಸ್ಕ್ ಮಾಡಬೇಕೆಂದರೆ ಬಾದಾಮಿಯನ್ನು ರಾತ್ರಿಯಲ್ಲಿ ನೆನೆ ಹಾಕಿ ಅದರ ಸಿಪ್ಪೆಯನ್ನು ತೆಗೆಯದೆ ಹಾಲಿನ ಕೆನೆ ಜೊತೆ ಸೇರಿಸಿ ಅರೆಯಬೇಕು. ನಂತರ ಸ್ವಲ್ಪ ಬೆಣ್ಣೆಯನ್ನು ಮತ್ತು ಅಕ್ಕಿ ಪುಡಿಯನ್ನು ಬೆರೆಸಿ ಈ ಮಿಶ್ರಣದಿಂದ ಮುಖವನ್ನು 10 ನಿಮಿಷ ಸ್ಕ್ರಬ್ ಮಾಡಬೇಕು. ಈ ರೀತಿ ಮಾಡಿ ಹೊಳೆಯುವ ತ್ವಚೆ ಪಡೆಯಬಹುದು.



Click it and Unblock the Notifications
