Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪ್ರಾಚೀನ ಕಾಲದ ಬ್ಯೂಟಿ ಸೀಕ್ರೆಟ್ ಇಲ್ಲಿದೆ

ಮುಖದ ಹೊಳಪು ಹೆಚ್ಚಿಸಿಕೊಳ್ಳಲು ಕೆಮಿಕಲ್ ಮೊರೆ ಹೋಗುವ ಬದಲು ನೈಸರ್ಗಿಕ ದಾರಿ ಹಿಡಿದರೆ ಒಳ್ಳೆಯದು. ನೈಸರ್ಗಿಕ ವಿಧಾನ ಒಂದೇ ರಾತ್ರಿಯಲ್ಲಿ ಫಲಿತಾಂಶ ನೀಡದಿದ್ದರೂ ಉತ್ತಮ ಫಲಿತಾಂಶವಂತೂ ಗ್ಯಾರಂಟಿ. ಈ ವಿಧಾನವನ್ನು ನಿರಂತರವಾಗಿ ಅನುಸರಿಸಿದರೆ ಕೆಲವೇ ವಾರಗಳಲ್ಲಿ ಬದಲಾವಣೆಯನ್ನು ನೀವೇ ಕಂಡುಕೊಳ್ಳುತ್ತೀರ.
ಪ್ರಾಚೀನ ಕಾಲದಲ್ಲಿ ತ್ವಚೆ ಬಣ್ಣ ಕಾಪಾಡಲು ಬಳಸುತ್ತಿದ್ದ ನೈಸರ್ಗಿಕ ಸಾಧನ:
* ಅರಿಶಿಣದ ಕೊಂಬಿನೊಂದಿಗೆ ಕೆನೆ: ತ್ವಚೆಯ ಬಣ್ಣ ಬೆಳ್ಳಗಾಗಿಸುವುದರಲ್ಲಿ ಅರಿಶಿಣ ಹೆಚ್ಚು ಪರಿಣಾಮಕಾರಿ. ಅಂಗಡಿಗಳಲ್ಲಿ ದೊರೆಯುವ ಅರಿಶಿಣ ಪುಡಿಯ ಬದಲು ಅರಿಶಿಣದ ಕೊಂಬನ್ನು ಉಪಯೋಗಿಸಿ. ಮಿಕ್ಸಿಯಲ್ಲಿ ಕೆನೆಯೊಂದಿಗೆ ಅರಿಶಿಣದ ಕೊಂಬನ್ನು ರುಬ್ಬಿಕೊಂಡು ಅದಕ್ಕೆ ಸಮನಾಗಿ ಕಡಲೆ ಹಿಟ್ಟು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಬಿಡಬೇಕು. ಈ ವಿಧಾನವನ್ನು ಅನುಸರಿಸಿದರೆ ಕ್ರಮೇಣ ತ್ವಚೆ ಬೆಳ್ಳಗಾಗುವುದರಲ್ಲಿ ಸಂಶಯವಿಲ್ಲ.
* ಬಾದಾಮಿ, ಜೇನು ಮಿಶ್ರಿತ ಸ್ಕ್ರಬ್: ತ್ವಚೆಯನ್ನು ಬೆಳ್ಳಗಾಗಿಸುವ ಅನೇಕ ಅಂಶವನ್ನು ಬಾದಾಮಿ ಹೊಂದಿದೆ. ನೀರಿನಲ್ಲಿ 10 ಬಾದಾಮಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಗ್ಗೆ ಅದರ ಸಿಪ್ಪೆ ಬಿಡಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಬಾದಾಮಿ ಪೇಸ್ಟನ್ನು ಒಂದು ಚಮಚ ಜೇನಿನೊಂದಿಗೆ ಬೆರೆಸಿ ಹಚ್ಚಿಕೊಂಡರೆ ಅತಿ ಬೇಗನೆ ಹೊಳೆಯುವ ಮತ್ತು ಬೆಳ್ಳನೆಯ ತ್ವಚೆ ನಿಮ್ಮದಾಗುತ್ತೆ.
* ಶ್ರೀಗಂಧದ ಲೇಪನ: ಪ್ರಾಚೀನ ಭಾರತೀಯ ಮಹಿಳೆಯರ ಸೌಂದರ್ಯದ ಗುಟ್ಟು ಶ್ರೀಗಂಧದಲ್ಲಿ ಅಡಗಿದೆ. ಶ್ರೀಗಂಧ ತ್ವಚೆಯನ್ನು ಬೆಳ್ಳಗೆ ಮಾಡುವುದಷ್ಟೇ ಅಲ್ಲ, ಮೃದುತ್ವ ನೀಡಿ ಅಲರ್ಜಿ, ಗುಳ್ಳೆಗಳಿಂದ ತ್ವಚೆಯನ್ನು ಕಾಪಾಡುತ್ತದೆ. ಶ್ರೀಗಂಧದ ಪುಡಿಗೆ ಒಂದು ಚಮಚ ನಿಂಬೆರಸ ಮತ್ತು ಟೊಮೆಟೊ ರಸ ಬೆರೆಸಿ ಹಚ್ಚಿಕೊಂಡರೆ ತ್ವಚೆ ನೈಸರ್ಗಿಕವಾಗಿ ಬೆಳ್ಳಗಾಗುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಉಪಯೋಗಿಸುತ್ತಿದ್ದ ಸೌಂದರ್ಯ ವರ್ಧಕಗಳಲ್ಲಿ ಶ್ರೀಗಂಧದ್ದು ಮೊದಲ ಸ್ಥಾನ.
* ಕೇಸರಿ ಫೇಸ್ ಪ್ಯಾಕ್: ಕೇಸರಿ ಸ್ವಲ್ಪ ದುಬಾರಿ ಎನಿಸಿದರೂ ಅದನ್ನು ಸ್ವಲ್ಪವೇ ಬಳಸಿಕೊಳ್ಳುವುದರಿಂದ ತೊಂದರೆಯಿಲ್ಲ. ಕೇಸರಿಯನ್ನು ಮೊಸರು ಅಥವಾ ಹಾಲಿನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ಬಿಸಿ ನೀರಿನಲ್ಲಿ ಅದ್ದಿದ ಹತ್ತಿಯಿಂದ ಒರೆಸಿಕೊಳ್ಳಬೇಕು. ಹೀಗೆ ಮಾಡಿದರೆ ಸುಂದರ ಕಳಂಕರಹಿತ ತ್ವಚೆ ನಿಮ್ಮದಾಗುತ್ತದೆ.
ಈ ನೈಸರ್ಗಿಕ ವಿಧಾನಗಳನ್ನು ಕೆಲವು ವಾರ ತಪ್ಪದೇ ಅನುಸರಿಸಿದರೆ ಫಲಿತಾಂಶ ನಿಮಗೇ ಗೋಚರವಾಗುತ್ತದೆ.



Click it and Unblock the Notifications
