Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಿತ್ತಲ ಗಿಡದಲ್ಲಿದೆ ಸಕಲ ಸೌಂದರ್ಯದ ಮದ್ದು

ಸುಲಭವಾಗಿ ದೊರೆಯುವ 5 ಗಿಡಮೂಲಿಕೆಗಳಿಂದ ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
ಹೊಳೆಯುವ ತ್ವಚೆಗೆ 5 ರೀತಿಯ ಗಿಡಮೂಲಿಕೆ:
* ಬೇವು: ಎಣ್ಣೆ ಚರ್ಮ ಹೊಂದಿದ್ದವರಿಗೆ ಬೇವಿನ ಪೇಸ್ಟ್ ತುಂಬಾ ಪರಿಣಾಮಕಾರಿ. ಬೇವು ಹೆಚ್ಚು ಔಷಧೀಯ ಗುಣ ಹೊಂದಿರುವುದರಿಂದ ಈ ಪೇಸ್ಟ್ ಮೊಡವೆ, ಕಲೆ, ಕೆಂಪು ಗುಳ್ಳೆ ನಿವಾರಿಸಿ ಸ್ಫಟಿಕ ತ್ವಚೆ ನೀಡುತ್ತದೆ. ಮೊಸರಿನೊಂದಿಗೆ ಬೇವಿನ ಪುಡಿ ಅಥವಾ ಬೇವಿನ ಪೇಸ್ಟ್ ಬೆರೆಸಿ ಮುಖಕ್ಕೆ 20 ನಿಮಿಷ ಹಚ್ಚಿ ಬಿಟ್ಟು ರೋಸ್ ವಾಟರ್ ನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿಕೊಂಡರೆ ತ್ವಚೆಯನ್ನು ಪೋಷಣೆ ಮಾಡಿಕೊಂಡಂತೆ.
* ಪುದೀನಾ: ಪುದೀನಾ ಪೇಸ್ಟ್ ಫೇಸ್ ಮಾಸ್ಕ್ ಎಲ್ಲ ಕಾಲಕ್ಕೂ ಒಳ್ಳೆಯದು. ಪುದೀನಾದಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶವಿರುವುದರಿಂದ ಮೊಡವೆ ಹೋಗಲಾಡಿಸಿ ಚರ್ಮದ ಒಳಗೆ ಅಡಗಿ ಕೂತ ಕೊಳೆಯನ್ನೂ ಆಚೆ ನೂಕುತ್ತದೆ. ಪುದೀನಾ ಒಳ್ಳೆಯ ಕ್ಲೆನ್ಸರ್ ಮತ್ತು ಟೋನರ್ ಆಗಿದೆ. ಪುದೀನಾ ರಸದೊಂದಿಗೆ ಮುಲ್ತಾನಿ ಮಿಟ್ಟಿ ಬೆರೆಸಿ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
* ತುಳಸಿ: ಪವಿತ್ರ ತುಳಸಿ ಎಲೆ ತ್ವಚೆಯನ್ನು ಕ್ಲೆನ್ಸ್ ಮಾಡಿ, ತಾಜಾ ಇರಿಸಿ ತ್ವಚೆಯನ್ನು ಬಿಗಿಗೊಳಿಸುತ್ತದೆ. ನಿಂಬೆರಸ ಮತ್ತು ಅರಿಶಿಣವನ್ನು ತುಳಸಿ ಎಲೆಯೊಂದಿಗೆ ಸೇರಿಸಿ ರುಬ್ಬಿ ಮುಖಕ್ಕೆ ಹಚ್ಚಿಕೊಂಡರೆ ಹೊಳೆಯುವ ತ್ವಚೆ ನಿಮ್ಮದಾಗುತ್ತೆ.
* ಲೋಳೆ ಸರ: ಮೊಡವೆಗೆ ಮತ್ತು ಗುಳ್ಳೆ ನಿವಾರಣೆಗೆ ಲೋಳೆಸರದ ಲೇಪನ ಉತ್ತಮ ಮದ್ದು. ರೋಸ್ ವಾಟರ್ ಮತ್ತು ಓಟ್ಸ್ ಸೇರಿಸಿ ಆಗಾಗ್ಗೆ ಹಚ್ಚಿಕೊಳ್ಳುವುದರಿಂದ ತ್ವಚೆ ಯಾವಾಗಲೂ ತಾಜಾ ಕಾಣುವಂತೆ ಮಾಡುತ್ತದೆ.
* ಕೊತ್ತಂಬರಿ: ಸೋಯ್ ಮಿಲ್ಕ್, ಸೌತೆ ರಸ ಮತ್ತು ಓಟ್ ಮೀಲ್ ಜೊತೆ ಕೊತ್ತಂಬರಿ ಸೇರಿಸಿ ಹಚ್ಚಿಕೊಳ್ಳಬಹುದು. ಓಟ್ ಮೀಲ್ ನಲ್ಲಿನ ಬೆಟಾ ಗ್ಲೂಕನ್, ಫೈಬರ್ ತ್ವಚೆಯನ್ನು ಸಮಸ್ಯೆಗಳನ್ನು ಸರಿಪಡಿಸುತ್ತದೆ. ಈ ಮಿಶ್ರಣದ ಲೇಪನ ಸುಕ್ಕನ್ನು ಸರಿಪಡಿಸಿ ಯುವಿ ಕಿರಣಗಳಿಂದ ತ್ವಚೆ ಹಾಳಾಗಿರುವುದನ್ನು ನಿವಾರಿಸುತ್ತದೆ. ಸಲೂನ್ ಸಾಧನಗಳಿಗಿಂತ ಇದು ಹೆಚ್ಚು ಕೆಲಸ ಮಾಡುತ್ತದೆ.



Click it and Unblock the Notifications
