Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೊಳೆಯುವ ತ್ವಚೆಗೆ ನಿಂಬೆಹಣ್ಣೆಂಬ ಮಾಂತ್ರಿಕ

ಅದರಲ್ಲೂ ನೈಸರ್ಗಿಕ ವಿಧಾನಗಳನ್ನು ಬಳಸಿ ಮಾಡಿದರೆ ತ್ವಚೆಗೆ ಯಾವುದೆ ಹಾನಿ ಉಂಟಾಗುವುದಿಲ್ಲ. ಈ ರೀತಿಯ ನೈಸರ್ಗಿಕ ಫೇಶಿಯಲ್ ಅಥವಾ ಕ್ಲೆನ್ಸಿಂಗ್ ನಲ್ಲಿ ನಿಂಬೆ ಹಣ್ಣು ಬಳಸಲಾಗುತ್ತದೆ. ನಿಂಬೆ ಹಣ್ಣು ತ್ವಚೆ ರಕ್ಷಣೆಯಲ್ಲಿ ಬಳಸಿ , ತ್ವಚೆಯ ಹೊಳಪನ್ನು ಹೇಗೆ ಹೆಚ್ಚಿಸಿಕೊಳ್ಳಬಹುದೆಂದು ತಿಳಿಯಲು ಮುಂದೆ ಓದಿ.
1. ನಿಂಬೆ ಹಣ್ಣು ಮತ್ತು ಸಕ್ಕರೆ: ನಿಂಬೆರಸ ಮತ್ತು ಸಕ್ಕರೆಯನ್ನು ಮಿಶ್ರ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಕತ್ತು ನಿಮಿಷದ ಬಳಿಕ ತೊಳೆಯಬೇಕು. ಇದರಿಂದ ತ್ವಚೆಯಲ್ಲಿದ್ದ ಕಲ್ಮಶವನ್ನುಹೋಗಲಾಡಿಸಬಹುದು. ಈ ರೀತಿ ಮಾಡುವುದಾದರೆ ವಾರದಲ್ಲಿ 2-3 ಬಾರಿ ಮಾಡಿದರೆ ಇದರ ಪ್ರಯೋಜನವನ್ನು ಕಾಣಬಹುದು.
2. ನಿಂಬೆ ಹಣ್ಣು ಮತ್ತು ಸಕ್ಕರೆ : ಮುಖದ ಸುಕ್ಕನ್ನು ಮತ್ತು ಮೊಡವೆಗಳನ್ನು ತಡೆಗಟ್ಟಲು, ಎಣ್ಣೆ ತ್ವಚೆಯನ್ನು ಹೋಗಲಾಡಿಸಲು ನಿಂಬೆರಸದಲ್ಲಿ ಉಪ್ಪು ಕರಗಿಸಿ ಮುಖಕ್ಕೆ ಹಚ್ಚಿದರೆ ಅದು ಉತ್ತಮ ರೀತಿಯಲ್ಲಿ ಮುಖವನ್ನು ಕ್ಲೆನ್ಸಿಂಗ್ ಮಾಡುತ್ತದೆ.
3. ನಿಂಬೆ ಹಣ್ಣು ಮತ್ತು ಜೇನು: ನಿಂಬೆರಸ ಮತ್ತು ಜೇನು ಮಿಶ್ರ ಮಾಡಿ ಪ್ರತಿ ದಿನವೂ ಹಚ್ಚುವುದರಿಂದ ಮುಖದಲ್ಲಿ ಮೊಡವೆಯು ಕ್ರಮೇಣ ಕಡಿಮೆಯಾಗುತ್ತದೆ. ಅಲ್ಲದೆ ಈ ರಿತಿ ಮಾಡುವುದರಿಂದ ಮುಖದ ಹೊಳಪನ್ನು ಸಹ ಹೆಚ್ಚಿಸುತ್ತದೆ.
4. ನಿಂಬೆ ಹಣ್ಣು ಮತ್ತು ಮೊಸರು: ನಿಂಬೆರಸ ಮತ್ತು ಮೊಸರನ್ನು ಮುಖದ ಕ್ಲೆನ್ಸಿಂಗ್ ನಲ್ಲಿ ಬಳಸುತ್ತಾರೆ. ಒಂದು ಚಿಕ್ಕ ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ನಿಂಬೆರಸ ಹಾಕಿ ಬೇಕಾದರೆ 2 ಹನಿ ಜೇನು ಬೇಕಾದರೂ ಸೇರಿಸಬಹುದು , ಈ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ ಎರಡು ನಿಮಿಷ ಮಸಾಜ್ ಮಾಡಿ, 10 ನಿಮಿಷದ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ವಾರಕ್ಕೆ ಒಮ್ಮೆ ಮಾಡಿ ತ್ವಚೆಯನ್ನು ಮಾಯಿಶ್ಚರೈಸರ್ ಮಾಡಬಹುದು.



Click it and Unblock the Notifications
