Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಥ್ರೆಡ್ಡಿಂಗ್ ಉರಿಯನ್ನು ಕಡಿಮೆಗೊಳಿಸುವುದು ಹೇಗೆ?

ಅಲ್ಲದೆ ಮುಖದಲ್ಲಿರುವ ಬೇಡದ ಕೂದಲನ್ನು ಥ್ರೆಡ್ಡಿಂಗ್ ಅಥವಾ ವ್ಯಾಕ್ಸ್ ಮಾಡಿಸಿ ತೆಗೆಯಲಾಗುವುದು. ಈ ರೀತಿ ಮಾಡಿಸಿದಾಗ ಮುಖದಲ್ಲಿ ಉರಿ ಮತ್ತು ತುರಿಕೆ ಕಾಣಿಸಿಕೊಂಡರೆ ಈ ಕೆಳಗಿನ ವಿಧಾನದಿಂದ ಕಡಿಮೆ ಮಾಡಿಕೊಳ್ಳಬಹುದು.
1. ಥ್ರೆಡ್ಡಿಂಗ್ ಮಾಡುವಾಗ ಕೈಯಿಂದ ಹಣೆಯ ಚರ್ಮವನ್ನು ಬಿಗಿಯಾಗಿ ಹಿಡಿದು ಕೊಳ್ಳಬೇಕು.ಇಲ್ಲದಿದ್ದರೆ ಗಾಯವಾಗುವುದು. ಸಡಿಲವಾಗಿ ಹಿಡಿದು ಕೊಂಡರೆ ಥ್ರೆಡ್ಡಿಂಗ್ ತುಂಬಾ ನೋವಾಗುತ್ತದೆ.
2. ಥ್ರೆಡ್ಡಿಂಗ್ ಮಾಡಿ ಬಂದ ಮೇಲೆ ಚಿಕ್ಕ ಐಸ್ ಕ್ಯೂಬ್ ತೆಗೆದು ಮುಖಕ್ಕೆ ಉಜ್ಜಬೇಕು. ಹೀಗೆ ಮಾಡಿದರೆ ತ್ವಚೆಯಲ್ಲಿ ಉರಿ ಕಡಿಮೆಯಾಗುತ್ತದೆ.
3. ಥ್ರೆಡ್ಡಿಂಗ್ ಮಾಡಿಸಿದಾಗ ಮುಖದಲ್ಲಿ ಮೊಡವೆ ಇದ್ದರೆ ಅದಕ್ಕೆ ತಾಗಿ ಗಾಯವಾಗುವುದು ಆಗ ಫೇಶಿಯಲ್ ಟೋನರ್ ಬಳಸಿ 2-3 ನಿಮಿಷ ಉಜ್ಜುವುದರಿಂದ ಮುಖದ ಉರಿ ಕಡಿಮೆಯಾಗಿ ಮುಖದ ಹೊಳಪು ಹೆಚ್ಚುವುದು. ಆದ್ದರಿಂದ ಥ್ರೆಡ್ಡಿಂಗ್ ಮಾಡಿದ ಬಳಕ ಟೋನರ್ ಬಳಸುವುದು ಒಳ್ಳೆಯದು.
4. ಥ್ರೆಡ್ಡಿಂಗ್ ನಂತರ ಮಾಯಿಶ್ಚರೈಸರ್ ಮುಖಕ್ಕೆ ಹಚ್ಚಬೇಕು, ಇಲ್ಲದಿದ್ದರೆ ಲೋಳೆಸರವನ್ನು ಮುಖಕ್ಕೆ ಹಚ್ಚುವುದು ಕೂಡ ತ್ವಚೆ ರಕ್ಷಣೆಗೆ ತುಂಬಾ ಉತ್ತಮವಾದ ವಿಧಾನವಾಗಿದೆ.
5. ಥ್ರೆಡ್ಡಿಂಗ್ ಮಾಡಿದ 45-60 ನಿಮಿಷ ಮುಖಕ್ಕೆ ಯಾವುದೆ ಮೇಕಪ್ ಮಾಡಬಾರದು, ಈ ರೀತಿ ಮಾಡಿ ಥ್ರೆಡ್ಡಿಂಗ್ ನಿಂದಾಗುವ ತ್ವಚೆ ಉರಿಯನ್ನು ಕಡಿಮೆ ಮಾಡಬಹುದು.



Click it and Unblock the Notifications
