Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮುಖಕ್ಕೆ ಜೀವ ತುಂಬುತ್ತೆ ಮಣ್ಣಿನ ಲೇಪನ

ಮಣ್ಣಿನ ಫೇಶಿಯಲ್ ನಲ್ಲಿ ಗ್ರೀನ್ ಮಾಸ್ಕ್, ಬಿಳಿ ಮಣ್ಣು ಮತ್ತು ಸಮುದ್ರದ ಮಣ್ಣು ಮುಂತಾದ ಬಗೆಯಿದೆ. ಈ ಮಣ್ಣಿನ ಲೇಪನ ಮೊಡವೆ, ಕಲೆ, ಕೆಂಪು ಗುಳ್ಳೆ, ಉರಿ ಹೀಗೆ ಅನೇಕ ಸಮಸ್ಯೆಗಳನ್ನು ತ್ವಚೆಯ ಒಳ ಹೋಗಿ ಸಂಪೂರ್ಣವಾಗಿ ನಿವಾರಿಸುತ್ತೆ. ಈ ಎಲ್ಲಾ ವಿಧದ ಮಣ್ಣುಗಳು ಅಂಗಡಿಯಲ್ಲಿ ಲಭ್ಯವಿದೆ.
ನೈಸರ್ಗಿಕ ಮಣ್ಣಿನ ಫೇಸ್ ಮಾಸ್ಕ್:
* ಗ್ರೀನ್ ಮಾಸ್ಕ್: ಸೂಕ್ಷ್ಮ ತ್ವಚೆ ಹೊಂದಿದ್ದವರಿಗೆ ಈ ಗ್ರೀನ್ ಮಾಸ್ಕ್ ತುಂಬಾ ಉಪಯುಕ್ತ. ಚರ್ಮಕ್ಕೆ ಯೋಗ್ಯವಾದ ಎಣ್ಣೆಯೊಂದಿಗೆ ಗ್ರೀನ್ ಮಣ್ಣು ಬೆರೆಸಿ ಹಚ್ಚಿಕೊಂಡೆರೆ ತ್ವಚೆ ಒಣಗುವುದನ್ನು ಪರಿಣಾಮಕಾರಿಯಾಗಿ ತಡೆದು ತ್ವಚೆ ತಾಜಾ ಆಗಿರುವಂತೆ ನೋಡಿಕೊಳ್ಳುತ್ತದೆ. ಎಣ್ಣೆ ಚರ್ಮವಿದ್ದವರು ನೀರಿನೊಂದಿಗೆ ಸೇರಿಸಿ ಹಚ್ಚಿಕೊಳ್ಳಬಹುದು. ಸಾಮಾನ್ಯ ತ್ವಚೆಯವರು ಮೊಸರಿನೊಂದಿಗೆ ಹಚ್ಚಿಕೊಳ್ಳಬಹುದು. ತ್ವಚೆ ತಿಳಿಯಾಗಬೇಕೆಂದರೆ ಜೇನಿನೊಂದಿಗೆ ಹಚ್ಚಿಕೊಳ್ಳಬಹುದು.
* ಬಿಳಿ ಮಣ್ಣು: ಮುಖದ ಮೇಲೆ ಮೊಡವೆ ಕಾಣಿಸಿಕೊಂಡರೆ ಈ ಬಿಳಿಮಣ್ಣಿನ ಲೇಪನ ಮಾಡಿ ಎಂದು ಸೌಂದರ್ಯ ತಜ್ಞರು ಸಲಹೆ ನೀಡುತ್ತಾರೆ. ಬಿಳಿ ಮಣ್ಣನ್ನು ಗುಳ್ಳೆಯ ಮೇಲೆ ಹಚ್ಚಿಕೊಂಡರೆ ಅತಿ ಬೇಗನೆ ನಿವಾರಣೆಯಾಗುತ್ತೆ. ಆಪಲ್ ಸೈಡರ್ ವಿನೆಗರ್ ನೊಂದಿಗೆ ಮುಲ್ತಾನಿ ಮಿಟ್ಟಿ ಸೇರಿಸಿ ಹಚ್ಚಿಕೊಂಡರೆ ಬ್ಯಾಕ್ಟೀರಿಯಾ ತೊಲಗಿಸಿ ಗುಳ್ಳೆ ಬರದಂತೆ ನೋಡಿಕೊಳ್ಳುತ್ತದೆ.
* ಕಡಲ ಮಣ್ಣು: ತ್ವಚೆಯನ್ನು ಒಳಗಿನಿಂದಲೇ ಶುದ್ಧಗೊಳಿಸಬೇಕೆಂದಿದ್ದರೆ ಸೀವೀಡ್ ಐಯಾನಿಕ್ ಮಣ್ಣಿನ ಫೇಶಿಯಲ್ ಹೆಚ್ಚು ಸೂಕ್ತ. ಮೊಡವೆ ಉಂಟುಮಾಡುವ ಧೂಳನ್ನು ಬುಡಸಮೇತ ಕಿತ್ತೊಗೆಯಲು ಈ ಫೆಶಿಯಲ್ ಹೆಚ್ಚು ಪರಿಣಾಮಕಾರಿ. ಚಳಿಗಾಲಕ್ಕಂತೂ ಇದು ಹೇಳಿ ಮಾಡಿಸಿದ್ದು.
* ಕೌಲಿನ್ ಮಣ್ಣಿನ ಮಾಸ್ಕ್ : ಕೌಲಿನ್ ಮಣ್ಣಿನ ಮಾಸ್ಕ್ ಪ್ರಸಿದ್ಧ ಮಣ್ಣಿನ ಫೇಶಿಯಲ್. ಇದು ಚೀನೀಯರು ಬಳಸುವಂತಹ ಸೌಂದರ್ಯ ಸಾಮಗ್ರಿಗಳಲ್ಲಿ ಒಂದು. ಚೈನಾದ ಕಯೊಲಿನ್ ಬೆಟ್ಟದಲ್ಲಿ ದೊರೆಯುತ್ತದೆ ಎನ್ನಲಾಗುವ ಈ ಮಾಸ್ಕ್ ಚೀನೀಯರ ತ್ವಚೆಯ ಹಿಂದಿನ ರಹಸ್ಯವಾಗಿದೆ.
ಮಣ್ಣಿನ ಫೇಶಿಯಲ್ ನಿಂದ ಹೆಚ್ಚು ಉಪಯೋಗವನ್ನು ನೀವು ಪಡೆಯಬೇಕೆಂದಿದ್ದರೆ ಮೊದಲು ಆವಿ ತೆಗೆದುಕೊಂಡು ಈ ಮಣ್ಣನ್ನು ಲೇಪಿಸಿಕೊಳ್ಳಬೇಕು



Click it and Unblock the Notifications
