Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸುಮಬಾಲೆಯ ತ್ವಚೆಗೆ ಹೂವಿನ ಫೇಸ್ ಪ್ಯಾಕ್

ಈ ಹೂವಿನ ಫೇಸ್ ಪ್ಯಾಕ್ ತಕ್ಷಣವೇ ಫಲಿತಾಂಶ ತೋರದಿದ್ದರೂ ಕ್ರಮೇಣ ಪರಿಣಾಮ ಗೋಚರಿಸುತ್ತೆ. ಆದರೆ ಹೂವಿನ ಪೇಸ್ ಪ್ಯಾಕ್ ಹಾಕಿಕೊಂಡ ನಂತರ ಸೂರ್ಯನ ಕಿರಣಗಳಿಗೆ ಮುಖವನ್ನು ಒಡ್ಡಬಾರದು ಮತ್ತು ಕೆಮಿಕಲ್ ಮಿಶ್ರಿತ ಸಾಧನಗಳನ್ನು ಬಳಸಬಾರದು, ಹೀಗಿದ್ದರೆ ಹೂವಿನ ಫೇಸ್ ಪ್ಯಾಕ್ ನ ಸಂಪೂರ್ಣ ಉಪಯೋಗವನ್ನು ಪಡೆಯಬಹುದು.
ಚಳಿಗಾಲದಲ್ಲಿ ತಯಾರಿಸಬಹುದಾದ 4 ಬಗೆಯ ಹೂವಿನ ಫೇಸ್ ಪ್ಯಾಕ್
* ಗುಲಾಬಿ ಫೇಸ್ ಪ್ಯಾಕ್: ಗುಲಾಬಿ ದಳಗಳನ್ನು (ಒಣಗಿರಲೂ ಬಹುದು, ತಾಜಾ ಇರಲೂಬಹುದು) ಹಾಲು ಮತ್ತು ಚೆನ್ನಾಗಿ ಪುಡಿ ಮಾಡಿದ ವೀಟ್ ಫ್ಲೇಕ್ ಗಳೊಂದಿಗೆ ಬೆರೆಸಿ ಕ್ಲೆನ್ಸಿಂಗ್ ನಂತರ ಫೇಸ್ ಪ್ಯಾಕ್ ನಂತೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ತ್ವಚೆ ರಂಧ್ರ ತೆರೆದುಕೊಂಡು ತ್ವಚೆ ಶುದ್ಧ ಮತ್ತು ಆರೋಗ್ಯಕರವಾಗುತ್ತದೆ.
* ಚೆಂಡು ಹೂವಿನ ಫೇಸ್ ಮಾಸ್ಕ್: ಮುಖದ ಬಣ್ಣ ಕುಂದಿದ್ದರೆ ಚೆಂಡು ಹೂವಿನ ಫೇಸ್ ಪ್ಯಾಕ್ ಹೆಚ್ಚು ಉಪಯುಕ್ತ. ಚೆಂಡು ಹೂವಿನ ದಳಗಳಲ್ಲಿ ಉರಿನಿವಾರಕ ಅಂಶಗಳಿದ್ದು, ನೈಸರ್ಗಿಕವಾಗಿ ತ್ವಚೆಯ ಜೀವ ಕಣಗಳಿಗೆ ಚೈತನ್ಯ ತುಂಬುತ್ತೆ. ಚೆಂಡು ಹೂವಿನ ದಳದೊಂದಿಗೆ ಹಾಲಿನ ಪುಡಿ ಅಥವಾ ಮೊಸರು ಮತ್ತು ತುರಿದ ಕ್ಯಾರೆಟ್ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಚಳಿಗಾಲದಲ್ಲಿ ಮುಖ ಕಂಗೊಳಿಸುವಂತೆ ಮಾಡಬಹುದು.
* ಮಲ್ಲಿಗೆ ಫೇಸ್ ಪ್ಯಾಕ್: ಸುವಾಸನೆ ಭರಿತ ಮಲ್ಲಿಗೆ ಹೂವು ಒಣ ತ್ವಚೆ ಹೊಂದಿದ್ದವರಿಗೆ ತುಂಬಾ ಒಳ್ಳೆಯದು. ಮಲ್ಲಿಗೆ ಹೂವಿನ ದಳಗಳನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಫ್ರೀಡ್ಜ್ ನಲ್ಲಿಟ್ಟು ಅದಕ್ಕೆ ಸ್ವಲ್ಪ ಹಾಲಿನ ಕೆನೆ ಬೆರೆಸಿ ಪೇಸ್ಟ್ ಮಾಡಿ ಹಚ್ಚಿಕೊಂಡರೆ ಸೂರ್ಯನ ಕಿರಣಗಳಿಂದ ಕಪ್ಪಾಗುವುದು ಹೋಗುವುದಲ್ಲದೆ ತ್ವಚೆ ಒಣಗುವಿಕೆ ತಡೆದು ಕಣ್ಣಿಗೂ ಹಿತವೆನಿಸುತ್ತೆ.
* ದಾಸವಾಳ ಮತ್ತು ಗೆರಾನಿಯಂ ಹೂವಿನ ಫೇಸ್ ಪ್ಯಾಕ್: ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಸಾಮಾನ್ಯ. ಥಂಡಿ ವಾತಾವರಣದಲ್ಲಿ ತ್ವಚೆ ರಂಧ್ರ ಮುಚ್ಚಿಕೊಳ್ಳುವುದರಿಂದ ಮೊಡವೆ ಗುಳ್ಳೆ ಸಹಜ. ಈ ಹೂವುಗಳನ್ನು ಫೇಸ್ ಪ್ಯಾಕ್ ನಂತೆ ಬಳಸುವುದರಿಂದ ಯ್ವಚೆಯಲ್ಲಿನ ಕೊಳೆಯನ್ನು ಸಂಪೂರ್ಣ ಕಿತ್ತುಹಾಕುತ್ತದೆ. ಇದರಿಂದ ಮೊಡವೆಗಳೂ ಬರುವುದು ಕಡಿಮೆಯಾಗುತ್ತದೆ. ಈ ಹೂವಿನ ದಳಗಳನ್ನು ಕೆಂಪಕ್ಕಿ ಪುಡಿ ಮತ್ತು ವಿಟಮಿನ್ ಇ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಂಡರೆ ದುಪ್ಪಟ್ಟು ಫಲಿತಾಂಶ ಹೊಂದಬಹುದು.



Click it and Unblock the Notifications
