Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ತ್ವಚೆ ಪೋಷಣೆ ಮಾಡುತ್ತೆ ಈ ವಿನೆಗರ್ ರೆಸಿಪಿ

ವಿನೆಗರ್ ಬಳಸಿ ಅಂದವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.
1. ತ್ವಚೆಯ ಪೋಷಣೆ: ವಿನೆಗರ್ ತ್ವಚೆಯಲ್ಲಿನ pH ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ಮಾಡುತ್ತದೆ. ಆಪಲ್ ಸೈಡರ್ ವಿನಿಗರ್, ನೀರು ಮತ್ತು ಅಡುಗೆ ಸೋಡಾ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ ತ್ವಚೆಯ ಪೋಷಣೆ ಮಾಡಬಹುದು. ಇದರಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆಸಿಡ್ ತ್ವಚೆ ಅಂದ ಹೆಚ್ಚಿಸಿ ಮೊಡವೆ ಬರದಂತೆ ತಡೆಯುತ್ತದೆ.
2. ವಿನೆಗರ್ ಫೇಸ್ ಮಾಸ್ಕ್: ವಿನೆಗರ್ ಫೇಸ್ ಮಾಸ್ಕ್ ಮಾಡಿದರೆ ತ್ವಚೆ ಆರೋಗ್ಯ ಹೆಚ್ಚುತ್ತೆ. ಅದಕ್ಕಾಗಿ ಕತ್ತರಿಸಿದ ಆಪಲ್, ಜೇನು, ಮೊಟ್ಟೆಯ ಬಿಳಿ, ವಿನೆಗರ್ ಮತ್ತು ವಿಟಮಿನ್ ಇ ಎಣ್ಣೆ ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಕು. ನಂತರ 15 ನಿಮಿಷದ ಬಳಿಕ ತೊಳೆಯಬೇಕು. ಹೀಗೆ ಮಾಡಿ ಚಳಿಗೆ ತ್ವಚೆ ಒಣಗುವುದನ್ನು ತಡೆಗಟ್ಟಬಹುದು.
3. ವಿನೆಗರ್ ಕ್ಲೆನ್ಸರ್: ಕ್ಲೆನ್ಸ್ ಮಾಡಲು ಆಪಲ್ ಸೈಡರ್ ವಿನೆಗರ್ ಅಥವಾ ಬಿಳಿ ವಿನೆಗರ್ ಬಳಸಬಹುದು. ಕಿತ್ತಳೆ ಚಿಪ್ಪೆಯನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ಹಿಂಡಿ, ಆ ರಸವನ್ನು ವಿನೆಗರ್ ಜೊತೆ ಮಿಶ್ರ ಮಾಡಿ ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು.
4. ವಿನೆಗರ್ ಟೋನರ್: ಹಣ್ಣಾದ ಪಪ್ಪಾಯಿಯನ್ನು ಜ್ಯೂಸ್ ರೀತಿ ಮಾಡಿ ಅದರಲ್ಲಿ ಬೇಕಾದ ಪ್ರಮಾಣದಲ್ಲಿ ಆಪಲ್ ಸೈಡರ್ ವಿನೆಗರ್ ಹಾಕಿ ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಹತ್ತಿಯನ್ನು ಇದರಲ್ಲಿ ಅದ್ದಿ ಮುಖಕ್ಕೆ ಉಜ್ಜಿ ಮುಖದಲ್ಲಿನ ಕೊಳೆ ಮತ್ತು ಮೇಕಪ್ ತೆಗೆಯಬಹುದು.
5. ದುರ್ಗಂಧ ನಿವಾರಣೆ: ಯಾವುದೇ ಸುವಾಸನೆ ಇರುವ ಎಣ್ಣೆಗೆ ವಿನೆಗರ್ ಬೆರೆಸಿ ಅದನ್ನು ಮೈಗೆ ಉಜ್ಜಿದರೆ ದೇಹ ದುರ್ವಾಸನೆ ಬೀರುವುದಿಲ್ಲ. ಸ್ನಾನ ಮಾಡುವ ನೀರಿಗೆ ಒಂದು ಹನಿಯಷ್ಟು ವಿನೆಗರ್ ಹಾಕಿದರೆ ಅದು ದೇಹದಲ್ಲಿ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.



Click it and Unblock the Notifications
