Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ನಿರಂತರ ಸೌಂದರ್ಯದ ರಹಸ್ಯ ಇದರಲ್ಲಿದೆ ನೋಡಿ

ಮನೆಯಲ್ಲೇ ಒಂದಿಷ್ಟು ಬಿಡುವು ಸಿಕ್ಕಾಗ ಅರಿಶಿಣವನ್ನು ಸಮರ್ಥವಾಗಿ ತ್ವಚೆಗೆ ಬಳಸಿಕೊಂಡರೆ ಕಷ್ಟ ಪಡದೆಯೇ ನೈಸರ್ಗಿಕವಾಗಿ ತ್ವಚೆಯನ್ನು ದೀರ್ಘಕಾಲ ಬಾಳುವಂತೆ ನೋಡಿಕೊಳ್ಳಬಹುದು. ಅಷ್ಟೇ ಅಲ್ಲ, ಅನೇಕ ಚರ್ಮ ರೋಗಗಳನ್ನು ಅರಿಶಿಣದ ಬಳಕೆಯಿಂದ ದೂರವಿಡಬಹುದು.
1. ಶೀತ ಶಮನ: ಶೀತವಾದಾಗ ಹಾಲಿನೊಂದಿಗೆ ಸ್ವಲ್ಪ ಅರಿಶಿಣ ಬೆರೆಸಿ ಕುಡಿದರೆ ಶೀತ ಕಡಿಮೆಯಾಗುತ್ತದೆ.
2. ನಿಷ್ಕಳಂಕ ತ್ವಚೆ ಪಡೆಯಲು: ನಿಮ್ಮ ತ್ವಚೆಯಲ್ಲಿ ಏನೋ ಕೊರತೆ ಕಾಣುತ್ತಿದ್ದರೆ, ಹಳೆಯ ಕಲೆಗಳು ಹಾಗೆಯೇ ಉಳಿದಂತೆ ಕಂಡರೆ ಚಿಂತಿಸುವ ಅಗತ್ಯವಿಲ್ಲ. ಸೌತೆ ಕಾಯಿ ಮತ್ತು ನಿಂಬೆರಸದೊಂದಿಗೆ ಅರಿಶಿಣ ಬೆರೆಸಿ ಹಚ್ಚಿಕೊಂಡು 15 ನಿಮಿಷದ ನಂತರ ತೊಳೆದುಕೊಂಡರೆ ಕ್ರಮೇಣ ಫಲವನ್ನು ನೀವೇ ಕಾಣುತ್ತೀರ. ಆದರೆ ಫಲಿತಾಂಶ ಗೋಚರಿಸಬೇಕೆಂದರೆ ದಿನವೂ ಈ ವಿಧಾನವನ್ನು ಅನುಸರಿಸಬೇಕು.
3. ದೇಹಕ್ಕೆ ಒಳ್ಳೆ ಸ್ಕ್ರಬ್: ಅರಿಶಿಣ ದೇಹಕ್ಕೂ ಒಳ್ಳೆ ಸ್ಕ್ರಬ್. ಕಡಲೆ ಹಿಟ್ಟಿನೊಂದಿಗೆ ಅರಿಶಿಣ ಬೆರೆಸಿ ಹಚ್ಚಿಕೊಂಡರೆ ತ್ವಚೆ ಕ್ರಮೇಣ ಹೊಳಪು ಪಡೆದುಕೊಳ್ಳುತ್ತೆ. ಅಷ್ಟೇ ಅಲ್ಲ, ಚರ್ಮ ವ್ಯಾಧಿಗಳನ್ನೂ ದೂರವಿರಿಸುತ್ತೆ.
4. ಸುಕ್ಕು ತಡೆಯಲು: ಹಾಲಿನ ಕೆನೆಯೊಂದಿಗೆ ಸ್ವಲ್ಪ ಅರಿಶಿಣ ಬೆರೆಸಿ ಹಚ್ಚಿಕೊಂಡು 10 ನಿಮಿಷದ ನಂತರ ತೊಳೆದುಕೊಳ್ಳಬೇಕು. ಈ ವಿಧಾನವನ್ನು ಪ್ರತಿನಿತ್ಯ ಅನುಸರಿಸುತ್ತಾ ಬಂದರೆ ಸುಕ್ಕು ಬೇಗನೆ ಮೂಡುವುದನ್ನು ತಡೆಯಬಹುದು. ಆದರೆ ಈ ಲೇಪನವನ್ನು ಹಚ್ಚಿಕೊಂಡಾಗ ಯಾರೊಂದಿಗೂ ಮಾತನಾಡದೆ ಇದ್ದರೆ ಒಳಿತು. ಇದರಿಂದ ಮುಖದಲ್ಲಿ ಗೆರೆಗಳು ಮೂಡುವ ಸಾಧ್ಯತೆಯಿದೆ.



Click it and Unblock the Notifications
