Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಲ್ಕೊಹಾಲ್ ಕುಡಿಯೋಕಲ್ಲ, ನಿಮ್ಮ ಸೌಂದರ್ಯಕ್ಕೆ ಬಳಸಿ

ಆಲ್ಕೊಹಾಲನ್ನು ಫೇಸ್ ಪ್ಯಾಕ್, ಮಾಸ್ಕ್, ಟೋನರ್, ಕ್ಲೆನ್ಸರ್ ಗೂ ಬಳಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅದು ಹೇಗೆಂದು ಮುಂದೆ ತಿಳಿಯಿರಿ.
ತ್ವಚೆ ಸಂರಕ್ಷಣೆಗೆ ಬಳಸಬಹುದಾದ 4 ರೀತಿಯ ಆಲ್ಕೊಹಾಲ್:
* ವೈನ್: ವೈನ್ ಫೇಶಿಯಲ್ ಇದೀಗ ಹೆಚ್ಚು ಪ್ರಚಲಿತದಲ್ಲಿದೆ. ಈ ಫೇಶಿಯಲ್ ಚರ್ಮದಲ್ಲಿನ ನಿರ್ಜೀವ ಕಣಗಳನ್ನು ಹೋಗಲಾಡಿಸಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ಇದು ತ್ವಚೆಯಲ್ಲಿ ಚೈತನ್ಯ ತುಂಬಿರುವಂತೆ ನೋಡಿಕೊಳ್ಳುತ್ತದೆ.
ಫೇಶಿಯಲ್: ಕೆಂಪು ವೈನ್ ಗೆ ಜೇನು ಬೆರೆಸಿ ಹಚ್ಚಿಕೊಂಡು 1 ಗಂಟೆ ಮಸಾಜ್ ಮಾಡಿಕೊಂಡು ಒಣಗಿದನ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಇದರಿಂದ ಬಣ್ಣ ಕಳೆಗುಂದುವುದು, ಕಲೆ ಮತ್ತು ಟ್ಯಾನ್ ಸಮಸ್ಯೆಯನ್ನು ಅತಿ ಬೇಗನೆ ನಿವಾರಿಸಬಹುದು.
* ಒಡ್ಕಾ: ಬಣ್ಣವಿಲ್ಲದ, ವಾಸನೆಯಿಲ್ಲದ ಒಡ್ಕಾ ಮುಖಕ್ಕೆ ಉತ್ತಮ ಹೊಳಪು ನೀಡುತ್ತೆ. ತ್ವಚೆಯನ್ನು ಶುದ್ದಗೊಳಿಸಿ ಜೀವಕಣವನ್ನು ಉಸಿರಾಡುವಂತೆ ಮಾಡುವಲ್ಲಿ ಇದು ಸಹಕಾರಿ.
ಫೇಶಿಯಲ್: 1 ಕಪ್ ಕಲ್ಲಂಗಡಿ ಜ್ಯೂಸ್ ಜೊತೆ ವೊಡ್ಕಾ ಮತ್ತು ಸ್ವಲ್ಪ ನೀರು ಬೆರೆಸಿ ಹಚ್ಚಿಕೊಳ್ಳಬಹುದು. ಇದನ್ನು 10 ದಿನದವರೆಗೂ ಇಟ್ಟುಕೊಳ್ಳಬಹುದು.
* ರಂ: ರಂನಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶವಿದೆ. ಮೊಡವೆ ಸಮಸ್ಯೆ ಮತ್ತು ಒಣಚರ್ಮದಿಂದ ಬಳಲುತ್ತಿದ್ದವರು ಇದನ್ನು ಬಳಸಬಹುದು. ಇದನ್ನು ಪುರುಷರು ಶೇವ್ ಮಾಡಿದ ಬಳಿಕ ಹಚ್ಚಿಕೊಳ್ಳಬಹುದು.
ಫೇಶಿಯಲ್: ಹಾಲಿನ ಕೆನೆಯೊಂದಿಗೆ ರಂ ಬೆರೆಸಿ ಮೊಡವೆಗೆ ಹಚ್ಚಿಕೊಳ್ಳಬಹುದು. ರಂನಲ್ಲಿ ಉರಿನಿವಾರಕ ಅಂಶವಿರುವುದರಿಂದ ಹೆಚ್ಚು ಉಪಯೋಗಕ್ಕೆ ಬರುತ್ತೆ.
* ವಿಸ್ಕಿ: ವಿಸ್ಕಿಯನ್ನು ಫೇಸ್ ಮಾಸ್ಕ್ ನಂತೆ ಹಾಕಿಕೊಂಡರೆ ತ್ವಚೆಯನ್ನು ಸುಕ್ಕುಗಳಿಂದ, ಕಲೆಗಳಿಂದ ಮತ್ತು ಬ್ಲ್ಯಾಕ್ ಹೆಡ್ ಗಳಿಂದ ರಕ್ಷಿಸಿಕೊಳ್ಳಬಹುದು.
ಫೇಸ್ ಮಾಸ್ಕ್: ಮೊಟ್ಟೆ, ನಿಂಬೆ ರಸ ಮತ್ತು ವಿಸ್ಕಿ ಬೆರೆಸಿ ಮಾಸ್ಕ್ ನಂತೆ ಹಚ್ಚಿಕೊಂಡು ಒಣಗಿದ ನಂತರ ಬಿಸಿ ನೀರಿನಿಂದ ತೊಳೆದುಕೊಂಡರೆ ಮುಖಕ್ಕೆ ಹೊಳಪು ಬರುತ್ತದೆ. ಹಳತಾದ ಆಲ್ಕೊಹಾಲನ್ನು ಬಳಸಿದರೆ ಚರ್ಮಕ್ಕೆ ಇನ್ನೂ ಒಳ್ಳೆಯದು.



Click it and Unblock the Notifications
