Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ತ್ವಚೆಯ ರಕ್ಷಣೆಗೆ ಬೇಕು ಈ ಫೇಸ್ ವಾಶ್

ತ್ವಚೆಯನ್ನು ಈ ಸಮಸ್ಯೆಯಿಂದ ಕಾಪಾಡಲು ಅನೇಕ ಬ್ರಾಂಡ್ ಫೇಸ್ ವಾಶ್ ಬಂದಿದೆ, ಇವುಗಳ ಮತ್ತೊಂದು ಪ್ರಯೋಜನವೆಂದರೆ ಇದನ್ನು ಜೊತೆಗೆ ಕೊಂಡೊಯ್ಯಬಹುದಾಗಿದೆ.
ಅನೇಕ ಬ್ರಾಂಡ್ ಫೇಸ್ ವಾಶ್ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು ಅದರಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಫೇಸ್ ವಾಶ್ ಈ ಕೆಳಗಿನವುಗಳಾಗಿದ್ದು ಇದನ್ನು ಆಯ್ಕೆ ಮಾಡುವಾಗ ತಮ್ಮ ತ್ವಚೆಗೆ ಯಾವುದು ಹೊಂದುತ್ತದೆಯೊ ಅದನ್ನು ಆಯ್ಕೆ ಮಾಡಿ ಕೊಳ್ಳಬಹುದಾಗಿದೆ.
1. ಲ್ಯಾಕ್ಮಿ ಫ್ರೂಟ್ ಬ್ಲಾಸ್ಟ್ : ಇದು ಟಾಟಾ ಉತ್ಪನ್ನವಾಗಿದ್ದು ಇದರಲ್ಲೂ ಅನೇಕ ವಿಧದ ಫೇಸ್ ವಾಶ್ ದೊರೆಯುತ್ತದೆ. ಅದರಲ್ಲಿ ಬೆರಿ ಲಶ್, ಮೆಲನ್, ಸಿಟ್ರಸ್ ರೈನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಇದು ಮುಖದಲ್ಲಿರುವ ಬ್ಲಾಕ್ ಹೆಡ್ ಹೋಗಲಾಡಿಸಿ ಮುಖದಲ್ಲಿ ತೇವಾಂಶದ ಜೊತೆಗೆ ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಈ ಪೇಸ್ ವಾಶ್ ಬಾಟಲ್ ಕೆಂಪು, ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿದ್ದು ನೋಡಲು ಆಕರ್ಷಕವಾಗಿದ್ದು ಇದನ್ನು ಬಳಸಿದರೆ ಮುಖಕ್ಕೆ ಕೂಡ ತಾಜಾತನವನ್ನು ನೀಡುತ್ತದೆ.
2. ಹಿಮಾಲಿಯಾ ಹರ್ಬಲ್ ಫೇಸ್ ವಾಶ್: ಇದನ್ನು ಹರ್ಬಲ್ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದು ಇದರಲ್ಲಿ ಕೆಮಿಕಲ್ ಅಂಶವಿರುವುದಿಲ್ಲ. ಇದನ್ನು ನೈಸರ್ಗಿಕವಾಗಿ ಸಿಗುವ ವಸ್ತುಗಳು ಅಂದರೆ ಕಹಿ ಬೇವು, ನಿಂಬೆ, ಸೌತೆ, ಕೇಸರಿ ಬಳಸಿ ತಯಾರಿಸಲಾಗುತ್ತದೆ. ಇದನ್ನು ಬಳಸಿದರೆ ತ್ವಚೆಯು ಮೃದುವಾಗಿ ಮತ್ತು ಸುಂದರವಾಗಿ ಕಾಣುತ್ತದೆ.
3. ನ್ಯೂಟ್ರೊಜಿನಾ ಫೇಸ್ ವಾಶ್: ಇದು ಪಿಂಕ್ ಗ್ರೇಫ್ ಫ್ರೂಟ್ ಕ್ಲೆನ್ಸರ್ ಆಗಿದ್ದು ಇದನ್ನು ಆಕರ್ಷಕ ಬಾಟಲ್ ಗೆ ತುಂಬಲಾಗಿರುತ್ತದೆ, ಇದು ಬೆಲೆಯಲ್ಲಿ ಸ್ವಲ್ಪ ಅಧಿಕವಾಗಿದ್ದು ಇದನ್ನು ಎಣ್ಣೆ ತ್ವಚೆ ಮತ್ತು ಒನ ತ್ವಚೆ ಇರುವರೆಗೆ ಬೇರೆ-ಬೇರೆ ರೀತಿಯ ಫೇಸ್ ಪ್ಯಾಕ್ ಇದರಲ್ಲಿ ದೊರೆಯುತ್ತದೆ.
4. ಕ್ಲೀನ್ ಅಂಡ್ ಕ್ಲಿಯರ್ ಫೇಸ್ ವಾಶ್: ಈ ಫೇಸ್ ವಾಶ್ ಬಳಸಿದರೆ ಮುಖದಲ್ಲಿನ ಕಲೆಗಳನ್ನು ಹೋಗಲಾಡಿಸಿ ಮುಖವನ್ನು ಅಂದವಾಗಿ ಇಡುತ್ತದೆ ಎಂದು ಹೇಳುವ ಈ ಕಂಪನಿಯ ಫೇಸ್ ಬೇರೆಲ್ಲಾ ಬ್ರಾಂಡ್ ಟ್ಯೂಬ್ ನಲ್ಲಿ ನೀಡುವಾಗ ಇದು ಬಾಟಲಿನಲ್ಲಿ ದೊರೆಯುತ್ತದೆ.
5. ಕ್ಲಿಯರಸಿಲ್ ಫೇಸ್ ವಾಶ್: ಇದು ಮುಖದಲ್ಲಿನ ಮೊಡವೆ ಮತ್ತು ಕಲೆಯನ್ನು ಹೋಗಲಾಡಿಸುವುದರೊಂದಿಗೆ ಎಲ್ಲಾ ರೀತಿಯ ತ್ವಚೆಯವರು ಬಳಸಬಹುದಾಗಿದೆ.
ಈ ಎಲ್ಲಾ ಫೇಸ್ ವಾಶ್ ಬ್ರಾಂಡ್ ರು. 200 ಒಳಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಫೇಸ್ ವಾಸ್ ಬಳಸಿ ತ್ವಚೆಯ ಸೌಂದರ್ಯವನ್ನು ಕಾಪಾಡಬಹುದಾಗಿದೆ.



Click it and Unblock the Notifications
