Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಳಿಗಾಲದಲ್ಲಿ ಶುಷ್ಕ ತ್ವಚೆಗೆ ಗುಡ್ ಬೈ ಹೇಳಿ

ಮೃದು ತ್ವಚೆ ಪಡೆಯುವ ಕೆಲವು ವಿಧಾನ:
ಮಾಯಿಶ್ಚರೈಸರ್: ದಿನಕ್ಕೆ ಎರಡು ಬಾರಿ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು. ತ್ವಚೆ ನಿರ್ಜೀವವಾಗಿ ಕಾಣಲು ಒಣಗಿದ ತ್ವಚೆಯೂ ಕಾರಣ. ಅದಕ್ಕಾಗಿ ಮಾಯಿಶ್ಚರೈಸರ್ ನಿಂದ ಚರ್ಮ ನಿರ್ಜಲೀಕರಣಗೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಸ್ನಾನವಾದ ತಕ್ಷಣವೇ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
ಕ್ಲೆನ್ಸಿಂಗ್: ಮೃದು ತ್ವಚೆ ಹೊಂದಲು ಇದೊಂದು ಸುಲಭ ವಿಧಾನ. ಕ್ಲೆನ್ಸಿಂಗ್ ಮಾಡಿಕೊಳ್ಳುವುದರಿಂದ ಚರ್ಮದಲ್ಲಿನ ನಿರ್ಜೀವ ಕಣಗಳನ್ನು ಹೊಗಿಸುತ್ತದೆ. ದಿನವೂ ಕ್ಲೆನ್ಸಿಂಗ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಜೊತೆಗೆ ಬಾಡಿ ಲೋಶನ್ ನನ್ನೂ ದಿನವೂ ಹಚ್ಚಿಕೊಳ್ಳಬೇಕು.
ಎಣ್ಣೆ ಮಸಾಜ್ : ತ್ವಚೆಗೆ ಮಾಯಿಶ್ಚರೈಸರ್ ನೀಡಲು ಎಣ್ಣೆಯನ್ನೂ ಹಚ್ಚಿಕೊಳ್ಳಬಹುದು. ಬಾದಾಮಿ ಅಥವಾ ಆಲಿವ್ ಎಣ್ಣೆಯನ್ನು ಸ್ನಾನದ ನಂತರ ಕೈ, ಕಾಲು, ಕುತ್ತಿಗೆಗೆ ಹಚ್ಚಿಕೊಳ್ಳಬೇಕು. ಸ್ನಾನಕ್ಕೆ ಮುನ್ನ ಮುಖಕ್ಕೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಮೊಣ ಕೈ, ಅಂಗೈ ಮತ್ತು ಮೊಣಕಾಲಿಗೆ ಹೆಚ್ಚು ಎಣ್ಣೆಯನ್ನು ಹಚ್ಚಿಕೊಳ್ಳಿ.
ಹೆಚ್ಚು ನೀರು ಸೇವಿಸಿ: ಮೃದು ತ್ವಚೆ ನಿಮ್ಮದಾಗಬೇಕೆಂದರೆ ಹೆಚ್ಚು ನೀರನ್ನು ಕುಡಿಯಬೇಕು. ದಿನವೂ 7-8 ಲೋಟ ನೀರನ್ನು ಸೇವಿಸುವುದರಿಂದ ಚರ್ಮದಲ್ಲಿ ನೀರಿನ ಅಂಶ ಹೆಚ್ಚಾಗಿ ಒಣಗುವಿಕೆಯನ್ನು ತಡೆಯುತ್ತದೆ. ತಣ್ಣಗಿನ ಅಥವಾ ಬೆಚ್ಚಗಿನ ನೀರಿನಲ್ಲಿ ಮುಖ ಕೈಕಾಲನ್ನು ದಿನಕ್ಕೆ ಎರಡು ಬಾರಿ ತೊಳೆದುಕೊಳ್ಳಬೇಕು. ತುಂಬಾ ಬಿಸಿ ನೀರು ತ್ವಚೆಯನ್ನು ಶುಷ್ಕ ಮತ್ತು ಒಣ ತ್ವಚೆಯನ್ನಾಗಿ ಮಾಡುತ್ತದೆ.



Click it and Unblock the Notifications
