Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಾವ ಕಾಲಕ್ಕೆ ಯಾವ ಫೇಶಿಯಲ್ ಸೂಕ್ತ?

ಯಾವ ಕಾಲಕ್ಕೆ ಯಾವ ಫೇಶಿಯಲ್ ಸೂಕ್ತ?
* ಚಳಿಗಾಲಕ್ಕೆ ಹಣ್ಣಿನ ಫೇಶಿಯಲ್: ಚಳಿಗಾಲದಲ್ಲಿ ಚರ್ಮ ಒಣಗುವಿಕೆ ಮತ್ತು ಗಡುಸಾಗುವಿಕೆ ಸಮಸ್ಯೆ ಸಾಮಾನ್ಯ. ಆದ್ದರಿಂದ ಈ ಸಮಸ್ಯೆಗೆ ಹಣ್ಣಿನ ಫೇಶಿಯಲ್ ಹೆಚ್ಚು ಸೂಕ್ತ. ಹಣ್ಣಿನಲ್ಲಿರುವ ತೇವಾಂಶ ತ್ವಚೆಗೆ ಜೀವ ತುಂಬುತ್ತದೆ.
ಫೇಶಿಯಲ್: ಕಿವುಚಿದ ಬೆಣ್ಣೆಹಣ್ಣು, ಜೇನು, ಕೆನೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷದ ನಂತರ ತೊಳೆದುಕೊಂಡರೆ ಚಳಿಗಾಲದಲ್ಲಿ ನಿಮ್ಮ ತ್ವಚೆ ತಾಜಾ ಆಗಿರುತ್ತದೆ. ಫೇಶಿಯಲ್ ತೊಳೆದ ನಂತರ ಜಾನ್ಸನ್ ಬೇಬಿ ಲೋಶನ್ ಹಚ್ಚಿಕೊಂಡರೆ ತ್ವಚೆಯ ಮೃದುತ್ವ ಹೆಚ್ಚಾಗುತ್ತದೆ.
* ಬೇಸಿಗೆಗೆ ಪ್ಯಾರಾಫಿನ್ ಫೇಶಿಯಲ್: ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದಾಗಿ ಚರ್ಮ ಕಪ್ಪಗಾಗುವುದು ಸಹಜ. ಇದಕ್ಕೆ ಸೂಕ್ತ ಪರಿಹಾರವೆಂದರೆ ಪ್ಯಾರಾಫಿನ್ ಫೇಶಿಯಲ್. ಇದು ತ್ವಚೆಯನ್ನು ಬೆಳ್ಳಗೆ ಮಾಡುತ್ತದೆ.
ಫೇಶಿಯಲ್: ಪ್ಯಾರಾಫಿನ್ ಕ್ರೀಂ ಅನ್ನು ಮುಖದ ಮೇಲೆ ಮಸಾಜ್ ಮಾಡಿ ಹಾಳೆಯನ್ನು ಹೊದಿಸಿ ಅದರ ಮೇಲೆ ಪ್ಯಾರಾಫಿನ್ ವ್ಯಾಕ್ಸ್ ಹಾಕಲಾಗುತ್ತದೆ. ಹೀಗೆ ಮಾಡುವುದರಿಂದ ಕ್ರೀ ಚರ್ಮದ ಒಳಗೆ ಬೇಗನೆ ಹೋಗಿ ತ್ವಚೆಯನ್ನು ಒಳಗಿನಿಂದಲೇ ಕಾಂತಿಯುತಗೊಳಿಸುತ್ತದೆ. ಇದನ್ನು ಹೆಚ್ಚಾಗಿ ಬ್ಯೂಟಿ ಪಾರ್ಲರ್ ಗಳಲ್ಲಿ ಮಾಡಲಾಗುತ್ತದೆ.
* ಮಳೆಗಾಲದಲ್ಲಿ ಪರ್ಲ್ ಫೇಶಿಯಲ್: ಮಳೆಗಾಲದಲ್ಲಿ ಚರ್ಮ ನಿರ್ಜೀವವಾದಂತೆ ಕಾಣಿಸುತ್ತದೆ ಮತ್ತು ಮೊಡವೆಗಳು ಏಳುತ್ತವೆ. ಈ ಕಾಲದಲ್ಲಿ ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್ ಡಿ ಲಭ್ಯವಿಲ್ಲದಿರುವುದರಿಂದ ಚರ್ಮ ನಿಸ್ತೇಜಗೊಳ್ಳುತ್ತದೆ. ಮಳೆಗಾಲಕ್ಕೆ ಸೂಕ್ತ ಫೇಶಿಯಲ್ ಎಂದರೆ ಪರ್ಲ್ ಫೇಶಿಯಲ್. ಮುತ್ತಿನಂಥ ಸ್ಪಷ್ಟತೆ ಮತ್ತು ಹೊಳಪನ್ನು ನೀಡುವಲ್ಲಿ ಈ ಫೇಶಿಯಲ್ ಹೆಚ್ಚು ಸಹಾಯಕ.
ಫೇಶಿಯಲ್: ಆಲಿವೆ ಎಣ್ಣೆಯೊಂದಿಗೆ ಪರ್ಲ್ ಪೌಡರ್ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 10-12 ನಿಮಿಷ ಬಿಟ್ಟು ತೇವದ ಬಟ್ಟೆಯಿಂದ ಒರೆಸಿಕೊಂಡರೆ ಮುಖ ಸ್ಪಷ್ಟ ಮತ್ತು ತಾಜಾ ಆಗುತ್ತದೆ.



Click it and Unblock the Notifications
