Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಲೆನ್ಸಿಂಗ್ ಮಸಾಜ್ ಮಾಡಿಕೊಳ್ಳೋದು ಹೇಗೆ?

ಆದ್ದರಿಂದ ಕ್ಲೆನ್ಸಿಂಗ್ ಮಸಾಜ್ ಗೆಂದೇ ಇರುವ ಪ್ರತ್ಯೇಕ ವಿಧಾನವನ್ನು ಅನುಸರಿಸಿದರೆ ಒಳ್ಳೆಯ ಫಲಿತಾಂಶವನ್ನು ಹೊಂದಬಹುದು.
ಕ್ಲೆನ್ಸಿಂಗ್ ಮಸಾಜ್ ಮಾಡಿಕೊಳ್ಳುವ ವಿಧಾನ:
1. ಕ್ಲೆನ್ಸಿಂಗ್ ಮಾಡಿಕೊಳ್ಳುವ ಮುನ್ನ ಒಳ್ಳೆಯ ಫೇಸ್ ವಾಶ್ ನಿಂದ ಮುಖವನ್ನು ತೊಳೆದುಕೊಂಡು ಟವಲ್ ನಿಂದ ಒರೆಸಿಕೊಳ್ಳಬೇಕು.
2. ಕ್ಲೆನ್ಸಿಂಗ್ ಆಯಿಲ್ ಹಾಕಿಕೊಳ್ಳುವ ಮುನ್ನ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದು 15 ನಿಮಿಷ ಹಬೆ ತೆಗೆದುಕೊಳ್ಳಬೇಕು. ಇದರಿಂದ ಚರ್ಮದ ರಂಧ್ರ ತೆರೆದುಕೊಳ್ಳುತ್ತದೆ.
3. ಬಾದಾಮಿ, ಲ್ಯಾವೆಂಡರ್, ಆಲಿವ್ ಎಣ್ಣೆ ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಆಲಿವ್ ಎಣ್ಣೆಯನ್ನು ಗ್ಲಿಸರಿನ್ ಮತ್ತು ರೋಸ್ ವಾಟರ್ ನೊಂದಿಗೆ ಬೆರೆಸಿ ಮಸಾಜ್ ಮಾಡಿಕೊಳ್ಳಬಹುದು.
4. ಬೆರಳಿನ ಸಹಾಯದಿಂದ ಮುಖಕ್ಕೆ ಮತ್ತು ಕುತ್ತಿಗೆಗೆ ಈ ಕ್ಲೆನ್ಸಿಂಗ್ ಆಯಿಲ್ ನಿಂದ ಮಸಾಜ್ ಮಾಡಿಕೊಳ್ಳಬೇಕು.
5. ಕುತ್ತಿಗೆಯಿಂದ ಪ್ರಾರಂಭಿಸಿ ಮೇಲ್ಮುಖವಾಗಿ ಮಸಾಜ್ ಮಾಡಿಕೊಳ್ಳಬೇಕು. ವೃತ್ತಾಕಾರವಾಗಿಯೂ ಮಾಡಿಕೊಳ್ಳಬೇಕು.
6. ಅದು ಒಣಗುತ್ತಿದ್ದಂತೆ ಸ್ವಲ್ಪ ನೀರು ಬೆರೆಸಿ ತೇವ ಮಾಡಿಕೊಂಡು ಮತ್ತೆ ಮಸಾಜ್ ಮಾಡಿಕೊಳ್ಳಬೇಕು. ಮೂಗು ಮತ್ತು ಕಣ್ಣಿನ ಕೆಳಗೆ ಸೂಕ್ಷ್ಮವಾಗಿ ಮಸಾಜ್ ಮಾಡಬೇಕು.
7. ಹಣೆಯನ್ನು ಮಸಾಜ್ ಮಾಡುವಾಗ ಸ್ವಲ್ಪ ಒತ್ತಡ ಹಾಕಿ ಮಸಾಜ್ ಮಾಡಿಕೊಳ್ಳಬೇಕು.
8. ಬೆರಳಿನ ಸಹಾಯದೊಂದಿಗೆ ತುಟಿ ಕೆಳಗೆ ಮತ್ತೆ ಮೇಲೆ ಅಡ್ಡಡ್ಡವಾಗಿ ಮಸಾಜ್ ಮಾಡಿಕೊಳ್ಳಬೇಕು. ಬೇಕಿದ್ದರೆ ಈ ಜಾಗಕ್ಕೆ ಹೆಚ್ಚು ಎಣ್ಣೆಯನ್ನು ಹಾಕಿಕೊಳ್ಳಬಹುದು.
9. 10-15 ನಿಮಿಷ ಹಾಗೆಯೇ ಬಿಟ್ಟು, ನಂತರ 3-4 ನಿಮಿಷ ಮತ್ತೆ ಮಸಾಜ್ ಮಾಡಿಕೊಳ್ಳಬೇಕು. ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ನಿಮಗೆ ಬೇಕೆಂದರೆ ಎಣ್ಣೆ ಅಂಶವನ್ನು ಹಾಗೆಯೇ ಬಿಡಬಹುದು. ಇಲ್ಲವೆಂದರೆ ಫೇಸ್ ವಾಶ್ ನಿಂದ ಸಂಪೂರ್ಣವಾಗಿ ತೊಳೆಯಬಹುದು.
ಈ ರೀತಿಯ ವಿಧಾನದಿಂದ ನಿಮ್ಮ ಕ್ಲೆನ್ಸಿಂಗ್ ಮಸಾಜ್ ಉಪಯೋಗವನ್ನು ಪರಿಪೂರ್ಣವಾಗಿ ಪಡೆಯಬಹುದು.



Click it and Unblock the Notifications
