Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಈ ಐದರಲ್ಲಿ ನಿಮಗೆ ಯಾವ ಫೇಶಿಯಲ್ ಸೂಕ್ತ?

ನಿಮ್ಮ ತ್ವಚೆಗೆ ಐದು ಬೆಸ್ಟ್ ಫೇಶಿಯಲ್:
1. ಗೋಲ್ಡ್ ಫೇಶಿಯಲ್: ಚಿನ್ನದ ಅಂಶ ತ್ವಚೆಗೆ ಉಪಯುಕ್ತ. ಇದು ಇಜಿಪ್ಟಿಯನ್ ಮೂಲದ್ದು. ಗೋಲ್ಡ್ ಡಸ್ಟ್, ಗೋಲ್ಡ್ ಕ್ರೀಂ ವಿವಿಧ ರೀತಿಯ ಫೇಶಿಯಲ್ ಇದರಲ್ಲಿದೆ. ಗೋಲ್ಡ್ ಫೇಶಿಯಲನ್ನು ತ್ವಚೆಯ ಸುಕ್ಕಿನ ವಿರುದ್ಧ, ಸೂರ್ಯನ ಕಿರಣಗಳಿಂದಾದ ಪರಿಣಾಮ ಕಡಿಮೆಗೊಳಿಸಲು ಮತ್ತು ತ್ವಚೆ ಬೆಳ್ಳಗಾಗಲೂ ಮಾಡಲಾಗುತ್ತದೆ. ಇದರ ಬೆಲೆ 1000 ದಿಂದ 3000 ರು ವೆರೆಗಿದೆ.
2. ಪರ್ಲ್ ಫೇಶಿಯಲ್: ಆಭರಣದ ಅಂಶವನ್ನು ಬಳಸಿಕೊಂಡು ಮಾಡುವ ಇನ್ನೊಂದು ಫೇಶಿಯಲ್ ಅಂದರೆ ಪರ್ಲ್ ಫೇಶಿಯಲ್. ಪುರಾತನ ಚೀನೀಯರಿಂದ ಇದು ಕಂಡುಹಿಡಿದಿದ್ದು. ತ್ವಚೆಗೆ ತುಂಬಾ ಕಾಂತಿ ತರುವ ಈ ಪರ್ಲ್ ಫೇಶಿಯಲ್ ನಿಮ್ಮ ಮುಖಕ್ಕೆ ಅಂದ ನೀಡುತ್ತದೆ. ಇದರ ಬೆಲೆ 1000 ರು ಅಥವಾ ಅದಕ್ಕಿಂತ ಹೆಚ್ಚಿರಬಹುದು.
3. ಫ್ರೂಟ್ ಫೇಶಿಯಲ್: ನೀವು ಎಣ್ಣೆ ಚರ್ಮದವರಾಗಿದ್ದರೆ ಇದು ಸೂಕ್ತ ಫೇಶಿಯಲ್. ಪಪ್ಪಾಯ, ಸ್ಟ್ರಾಬೆರಿ, ಪೈನಾಪಲ್ ಮುಂತಾದ ಹಣ್ಣುಗಳ ಮಿಶ್ರಣದಿಂದ ಮಾಡುವ ಈ ಫೇಶಿಯಲ್ ನಿಮ್ಮ ಚರ್ಮವನ್ನು ಶುದ್ಧಗೊಳಿಸಿ ಕಂಗೊಳಿಸುವಂತೆ ಮಾಡುತ್ತದೆ. ನಿಮ್ಮ ಮುಖದಲ್ಲಿ ಕಾಡುವ ಕಲೆಗಳನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿ ಪೂರ್ತಿ ನೈಸರ್ಗಿಕ ಅಂಶಗಳನ್ನು ಉಪಯೋಗಿಸುವುದು ವಿಶೇಷ. ಇದರ ಬೆಲೆ 800 ರು ಇಂದ 1000 ರು ಇರುತ್ತದೆ.
4. ಡೈಮಂಡ್ ಫೇಶಿಯಲ್: ಫೇಶಿಯಲ್ ನಲ್ಲಿ ಹೊಸದಾಗಿರುವ ಡೈಮಂಡ್ ಫೇಶಿಯಲ್ ನಿಮ್ಮ ತ್ವಚೆ ಕಂಗೊಳಿಸುವಂತೆ ಮಾಡುತ್ತದೆ. ಚರ್ಮದಲ್ಲಿ ನಿರ್ಜೀವ ಕಣವನ್ನು ತೊಲಗಿಸಿ ಹೊಸ ಕಳೆ ತರುವ ಈ ಡೈಮಂಡ್ ಫೇಶಿಯಲ್ ಸುಕ್ಕನ್ನೂ ತೊಡೆದುಹಾಕುತ್ತದೆ. ಇದರ ಬೆಲೆ ಸ್ವಲ್ಪ ಹೆಚ್ಚು. 2000 ದಿಂದ 4000 ರುವೆರೆಗೂ ಇರುತ್ತದೆ.
5. ವೈನ್ ಫೇಶಿಯಲ್: ನೀವು ಆರೋಗ್ಯಕರ, ಕಲೆರಹಿತ, ಮುಕ್ತ ತ್ವಚೆ ಪಡೆಯಬೇಕೆಂದರೆ ಈ ವೈನ್ ಫೇಶಿಯಲ್ ತುಂಬಾ ಸಹಕಾರಿ. ಟ್ಯಾನ್ ಹೋಗಿಸಿ, ತ್ವಚೆಗೆ ಚೈತನ್ಯ, ಹೊಳಪು ನೀಡುವ ಈ ಫೇಶಿಯಲ್ ನೀವು ಮಾಡಿಸಿಕೊಳ್ಳಬಹುದು. ಈ ವೈನ್ ಫೇಶಿಯಲ್ ಬೆಲೆ 800ರಿಂದ 1500 ರುವರೆಗೂ ಇರುತ್ತದೆ.



Click it and Unblock the Notifications
