Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೊಡವೆ ಬರೆಯದಿರಲಿ ನಿಮ್ಮ ಹಣೆಬರಹ

ಆದರೆ ಹಣೆಯ ಮೇಲೆಯೇ ಹೆಚ್ಚಾಗಿ ಮೊಡವೆ, ಬ್ಲಾಕ್ ಹೆಡ್, ವೈಡ್ ಹೆಡ್ ಮತ್ತು ನೆರಿಗೆ ಕಾಣಿಸಿಕೊಳ್ಳುವುದು. ಆದರೆ ನೀವು ಕಲೆರಹಿತ ಹಣೆ ಪಡೆಯಬೇಕೆಂದರೆ ಅದಕ್ಕೆ ಕಾರಣವಾಗಿರುವ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಸಾಕು.
ಹಣೆ ಸ್ಪಷ್ಟವಾಗಿಟ್ಟುಕೊಳ್ಳಲು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ:
* ಟಿ ಝೋನ್ : ನಿಮ್ಮ ಮುಖದಲ್ಲಿ ಏಕೆ ಹಣೆಯಲ್ಲಿ ಮಾತ್ರ ಹೆಚ್ಚು ಎಣ್ಣೆಯಂಶ ಕಾಣಿಸಿಕೊಳ್ಳುತ್ತದೆ? ಮುಖದ ಟಿ ಝೋನ್ ನಲ್ಲಿ ಹೆಚ್ಚು ಎಣ್ಣೆ ಶೇಖರವಾಗುತ್ತದೆ ಎನ್ನಲಾಗಿದೆ. ಅಂದರೆ ನಿಮ್ಮ ಮುಖವನ್ನು ಟಿ ಝೋನ್ ನಲ್ಲಿಟ್ಟು ನೋಡಿದರೆ ಹಣೆ ಮತ್ತು ಮೂಗು ಬೇಗನೆ ಎಣ್ಣೆಯಂಶ ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಈ ಜಾಗದಲ್ಲಿಯೇ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಕಾಣಿಸಿಕೊಳ್ಳುತ್ತದೆ.
* ಸ್ಕ್ರಬ್ಬಿಂಗ್ ಮತ್ತು ಟೋನಿಂಗ್: ಹಣೆಯಲ್ಲಿ ಶೇಖರವಾಗುವ ಅತ್ಯಧಿಕ ಎಣ್ಣೆ ಅಂಶ ತೊಲಗಿಸಲು ನಿಮ್ಮ ಚರ್ಮಕ್ಕೆ ಸ್ಕ್ರಬ್ಬಿಂಗ್ ಮತ್ತು ಟೋನಿಂಗ್ ಅವಶ್ಯಕತೆಯಿದೆ. ಸ್ಕ್ರಬ್ಬಿಂಗ್ ಮಾಡಿದ ನಂತರ ಟೋನಿಂಗ್ ಮಾಡುವುದನ್ನು ಮರೆಯಬೇಡಿ, ಇದರಿಂದ ಮತ್ತೆ ಕೊಳೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಕೆಮಿಕಲ್ ಮಿಶ್ರಿತ ಸಾಧನಗಳಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುವುದಕ್ಕಿಂತ ನೈಸರ್ಗಿಕ ಮಾರ್ಗ ಅನುಸರಿಸಿದರೆ ಉತ್ತಮ.
* ಕೂದಲಿನ ಸಮಸ್ಯೆ ಸರಿಪಡಿಸಿ: ಹಣೆಗೆ ಕೂದಲಿನ ಭಾಗ ತುಂಬಾ ಸನಿಹವಿರುವುದರಿಂದ ಹಣೆಗೆ ಸಮಸ್ಯೆಯಾಗಬಹುದು. ಕೂದಲಲ್ಲಿನ ಕೊಳೆ ಮತ್ತು ಧೂಳು ಹಣೆಗೆ ತಾಗಿ ಚರ್ಮ ಮಸುಕಾಗಿ ಗುಳ್ಳೆಗಳೇಳುತ್ತದೆ. ಆದ್ದರಿಂದ ಕೂದಲನ್ನು ಶುದ್ಧವಾಗಿಟ್ಟುಕೊಳ್ಳುವುದು ಮತ್ತು ಕೂದಲು ಹಣೆಗೆ ಹೆಚ್ಚು ತಾಗದಂತೆ ಕೂದಲಿನ ವಿನ್ಯಾಸ ಬದಲಿಸಿಕೊಳ್ಳುವುದು ಉತ್ತಮ ಮಾರ್ಗ.
* ತಲೆಹೊಟ್ಟು: ಬಹುತೇಕ ಜನರ ಹಣೆ ಮತ್ತು ಕೆನ್ನೆ ಮೇಲೆ ಮೊಡವೆಗಳೇಳಲು ತಲೆಹೊಟ್ಟು ಮುಖ್ಯ ಕಾರಣ. ಆದ್ದರಿಂದ ಕೂದಲನ್ನು ಶುದ್ಧವಾಗಿಟ್ಟುಕೊಳ್ಳದೆ ಬೇರೆ ಆಯ್ಕೆಯೇ ಇಲ್ಲ. ತಲೆಯನ್ನು ಹೊಟ್ಟಿನಿಂದ ಹೊರತುಪಡಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
* ಬೆವರು: ಹಣೆಯಲ್ಲಿ ಬೇಗನೆ ಬೆವರು ಕಾಣಿಸಿಕೊಳ್ಳುತ್ತದೆ. ಇದೂ ಕೂಡ ಗುಳ್ಳೆ ಮತ್ತು ಕಲೆಗಳಾಗಲು ಕಾರಣ. ಬೆವರನ್ನು ಮುಖದ ಮೇಲಿರಲು ಬಿಡದೆ ಮೃದುವಾದ ಹ್ಯಾಂಡ್ ಕರ್ಚೀಫ್ ನಿಂದ ಒರೆಸಿಕೊಳ್ಳುತ್ತಿದ್ದರೆ ಬೆವರಿನಲ್ಲಿ ಧೂಳು ಚರ್ಮದ ಒಳಹೊಕ್ಕುವುದು ತಪ್ಪುತ್ತದೆ. ಈ ಮೂಲಕ ಗುಳ್ಳೆ ಏಳುವುದನ್ನೂ ತಡೆಯಬಹುದಾಗಿದೆ.
ಈ ಸಿಂಪಲ್ ವಿಧಾನಗಳನ್ನು ನೀವು ಪಾಲಿಸಿದರೆ ಸಾಕು, ನಿಮ್ಮ ಹಣೆ ಕ್ರಮೇಣ ಶುದ್ಧವಾಗಿ ಕಾಣಲು ಆರಂಭವಾಗುತ್ತದೆ.



Click it and Unblock the Notifications
