Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಮುತ್ತಿನಂತಹ ಅಂದಕ್ಕೆ ಪರ್ಲ್ ಫೇಶಿಯಲ್ ಮಾಡಿ

ಮುತ್ತಿನ ಫೇಶಿಯಲ್ ಮಾಡಿಕೊಳ್ಳುವುದು ಹೇಗೆ?
ಪರ್ಲ್ ಫೇಶಿಯಲ್ ಮಾಡಿಕೊಳ್ಳಬೇಕೆಂದರೆ ಮುಖ್ಯವಾಗಿ ಬೇಕಿರುವುದು ಪರ್ಲ್ ಪೌಡರ್. ಇದು ಎಲ್ಲಾ ಕಾಸ್ಮೆಟಿಕ್ ಸ್ಟೋರ್ ಗಳಲ್ಲಿಯೂ ದೊರೆಯುತ್ತದೆ.
1. ಪರ್ಲ್ ಮತ್ತು ನೀರು: ಸ್ವಲ್ಪ ಪರ್ಲ್ ಪೌಡರ್ ಅನ್ನು ನೀರಿನೊಂದಿಗೆ ಬೆರೆಸಿ ಮೊದಲು ಕಿವಿಯ ಹಿಂಭಾಗಕ್ಕೆ ಹಚ್ಚಿ ಪರೀಕ್ಷಿಸಬೇಕು. ಚರ್ಮದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೆ ಅದನ್ನು ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿಕೊಂಡು ನಂತರ ಬಿಸಿ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.
2. ಪರ್ಲ್ ಮತ್ತು ಜೇನು: ಜೇನು ಮತ್ತು ಮೊಟ್ಟೆಯ ಮಿಶ್ರಣ ನೈಸರ್ಗಿಕವಾಗಿ ತ್ವಚೆಯನ್ನು ಸುಂದರಗೊಳಿಸುತ್ತದೆ. ಒಂದು ಚಮಚ ಪರ್ಲ್ ಪುಡಿಗೆ ಒಂದು ನಿಂಬೆಹಣ್ಣಿನ ರಸವನ್ನು ಬೆರೆಸಿ ಮೊಟ್ಟೆ ಬಿಳಿ ಭಾಗವನ್ನು ಚೆನ್ನಾಗಿ ಕದಡಿ ಒಂದು ಚಮಚ ಜೇನನ್ನು ಇದಕ್ಕೆ ಬೆರೆಸಬೇಕು. ಈ ಎಲ್ಲವನ್ನೂ ಪೇಸ್ಟ್ ನಂತೆ ಹಚ್ಚಿಕೊಂಡು 10-15 ನಿಮಿಷದ ನಂತರ ತೊಳೆದುಕೊಂಡರೆ ತ್ವಚೆ ಹೊಳೆಯುವಂತಾಗುತ್ತದೆ.
3. ಪರ್ಲ್ ಮತ್ತು ಆಲಿವ್ : ಮುಖ ನಿರ್ಜೀವ ಮತ್ತು ಒಣಗಿದಂತಿದ್ದರೆ, ಆಲಿವ್ ಎಣ್ಣೆಗೆ ಒಂದು ಚಮಚ ಪರ್ಲ್ ಪೌಡರ್ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು.
4. ಪರ್ಲ್ ಮತ್ತು ಹಾಲು: ಮುಖದಲ್ಲಿ ಮೊಡವೆಗಳಾಗಿದ್ದು, ಅದರ ಕಲೆ ಹಾಗೇ ಉಳಿದುಕೊಂಡಿದ್ದರೆ ಒಂದು ಚಮಚ ಪರ್ಲ್ ಪೌಡರ್ ಗೆ ತಾಜಾ ಹಾಲು ಅಥವಾ ಕೆನೆ ಬೆರೆಸಿ ಲೇಪಿಸಿಕೊಂಡು 10 ನಿಮಿಷದ ನಂತರ ತೊಳೆದುಕೊಂಡು ನಂತರ ಯಾವುದಾದರೂ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು.
5. ಪರ್ಲ್ ಮತ್ತು ಲೋಳೆಸರ: ಒಂದು ಮೊಟ್ಟೆಯ ಬಿಳಿ ಭಾಗಕ್ಕೆ ಲೋಳೆಸರದ ರಸವನ್ನು ಅಷ್ಟೇ ಪ್ರಮಾಣದಲ್ಲಿ ಸೇರಿಸಿ 2 ಚಮಚ ಆಲಿವ್ ಎಣ್ಣೆ, ಒಂದು ಚಮಚ ಸೇಬಿನ ರಸ ಮತ್ತು ಒಂದು ಚಮಚ ಪರ್ಲ್ ಪೌಡರ್ ಅನ್ನು ಸೇರಿಸಿ ಪೇಸ್ಟ್ ನಂತೆ ಮಾಡಿಕೊಂಡು ಮೇಲ್ಮುಖವಾಗಿ ಮಸಾಜ್ ಮಾಡಿಕೊಂಡು 15 ನಿಮಿಷ ಬಿಟ್ಟು ಮುಖ ತೊಳೆದುಕೊಂಡು ಒರೆಸದೆ ಹಾಗೇ ಒಣಗಲು ಬಿಡಬೇಕು.
ಮುತ್ತಿನಂತೆ ಮಿರುಮಿರುಗುವ ತ್ವಚೆ ನಿಮ್ಮದಾಗಬೇಕೆಂದರೆ ಈ ಪರ್ಲ್ ಫೇಶಿಯಲ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
