Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತ್ವಚೆ ಕ್ಲಿಯರ್ ಆಗಲು ಎರಡೇ ದಾರಿ...

ಫ್ರೂಟ್ ಫೇಶಿಯಲ್ ತಯಾರಿಸುವುದು ಹೇಗೆ?
ಬಾಳೆಹಣ್ಣಿನ ಫೇಶಿಯಲ್:
* 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು
* 1 ಚಮಚ ಜೇನು
* 2-3 ಚಮಚ ನಿಂಬೆರಸ ಅಥವಾ ಕೆನೆ
ಬಾಳೆಹಣ್ಣನ್ನು ಜೇನು ಮತ್ತು ಕೆನೆ ( ಎಣ್ಣೆ ತ್ವಚೆ ಇದ್ದವರು ನಿಂಬೆರಸ ಬಳಸಬಹುದು) ಯೊಂದಿಗೆ ಚೆನ್ನಾಗಿ ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಮಸಾಜ್ ಮಾಡಿಕೊಳ್ಳಬೇಕು. ನಂತರ 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಬೇಕು.
ಈ ಫೇಶಿಯಲ್ ನಿಂದ ತ್ವಚೆಗೆ ಅವಶ್ಯಕವಿರುವ ವಿಟಮಿನ್ ಎ, ಬಿ, ಸಿ ಮತ್ತು ಇ ದೊರೆಯುವುದರಿಂದ ತ್ವಚೆ ನುಣುಪಾಗಿ ಕಲೆ ಮುಕ್ತವಾಗಿ ಹೊಳೆಯಲು ಆರಂಭವಾಗುತ್ತದೆ.
ಸ್ಟ್ರಾಬೆರಿ ಫೇಶಿಯಲ್:
* 1 ಸ್ಟ್ರಾಬೆರಿ
* 2 ಚಮಚ ಮೊಸರು
* 1 ಚಮಚ ಜೋಳದ ಸ್ಟಾರ್ಚ್ (ಜೋಳದ ಪುಡಿ)
ಸ್ಟ್ರಾಬೆರಿಯನ್ನು ಪೇಸ್ಟ್ ನಂತೆ ಮಾಡಿ ಮೊಸರು ಮತ್ತು ಜೋಳದ ಹಿಟ್ಟಿನಿಂದ ತೆಗೆದ ಸ್ಟಾರ್ಚ್ ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಡಬೇಕು. ನಂತರ ಮುಖ ತೊಳೆದುಕೊಂಡು ತಣ್ಣಗಿನ ನೀರು ಅಥವಾ ಐಸ್ ಕ್ಯೂಬ್ ನಿಂದ ಹಿತವಾಗಿ ಮಸಾಜ್ ಮಾಡಿಕೊಳ್ಳಬೇಕು. ಇದು ಸ್ಟ್ರಾಬೆರಿ ಅಂಶವನ್ನು ತ್ವಚೆ ಬಿಗಿಯಾಗಿ ಹಿಡಿದುಕೊಳ್ಳಲು ಸಹಾಯ ಮಾಡುತ್ತದೆ.
ಸ್ಟ್ರಾಬೆರಿಯಲ್ಲಿರುವ ಸಾಲಿಸೈಕ್ಲಿಕ್ ಅಂಶ ತ್ವಚೆಯನ್ನು ಬ್ಲೀಚ್ ಮಾಡಿದರೆ, ಸ್ಟಾರ್ಚ್ ಅತಿಯಾದ ಎಣ್ಣೆ ಅಂಶವನ್ನು ಹೀರಿಕೊಳ್ಳುತ್ತದೆ. ಮೊಸರು ಸುಕ್ಕನ್ನು ತಡೆಯಲು ಸಹಾಯ ಮಾಡುತ್ತದೆ.



Click it and Unblock the Notifications
