Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗ್ರೀನ್ ಟೀಯಲ್ಲಿ ಅಡಗಿದೆಯೆ ತ್ವಚೆಯ ರಹಸ್ಯ?

ಗ್ರೀನ್ ಟೀ ಕುಡಿಯುವುದಿಂದ ದೇಹ ತೂಕ ಕಡಿಮೆ ಆಗುವುದರೊಂದಿಗೆ ದೇಹದ ಕಾಂತಿ ಹೆಚ್ಚುಸುತ್ತದೆ, ಹಾಗೂ ನಿಮ್ಮ ತ್ವಚೆಯ ಸಮಸ್ಯೆಗಳಿಗೂ ಇದರಿಂದ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ.
ಮೊಡವೆ: 1 ಸ್ವಲ್ಪ ಗ್ರೀನ್ ಟೀ ಸೊಪ್ಪನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಅದರ ಪೇಸ್ಟ್ ಅನ್ನು ಮೊಡವೆಯ ಕಲೆಗಳ ಮೇಲೆ ಹಚ್ಚುತ್ತಾ ಬಂದರೆ ಮುಖದ ಕಲೆಗಳು ಮಾಯವಾಗಿ ಮುಖವು ಕಾಂತಿ ಹೆಚ್ಚಾಗುವುದು.
2 ದಿನಾಲೂ ಗ್ರೀನ್ ಟೀಯ ಸೇವನೆಯು ಸಹ ಮೊಡವೆಯನ್ನು ಹೋಗಲಾಡಿಸುತ್ತದೆ.
ಎಣ್ಣೆ ತ್ವಚೆ: ಗ್ರೀನ್ ಟೀ ಪ್ರಯೋಜನ ಏನಪ್ಪಾ ಎಣ್ಣೆ ತ್ವಚೆಯನ್ನು ಕೂಡ ಹೊಳೆಯುವಂತೆ ಮಾಡುತ್ತದೆ. ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟು
1 ಗ್ರೀನ್ ಟೀ ದ್ರವವನ್ನು ಫ್ರೀಜರ್ ನಲ್ಲಿ ಇಟ್ಟು ಐಸ್ ಮಾಡಿ ನಂತರ ಆ ಐಸ್ ನಿಂದ ಮುಖದ ಮೇಲೆ ನಯವಾಗಿ ಉಜ್ಜಿ.
2 ಅದನ್ನು ಮುಖದಲ್ಲಿ ಒಣಗುವರಿಗೂ ಹಾಗೆ ಬಿಡಿ ನಂತರ ತೊಳೆಯಿರಿ. ಇದರಿಂದ ಮುಖದಲ್ಲಿ ಆದ ಬದಲಾವಣೆಯನ್ನು ನೀವೇ ಕಾಣಬಹುದು.
ಮೈಯ ಸುಗಂಧಕ್ಕೆ: ಕೆಲವರ ದೇಹವು ಹೆಚ್ಚಾಗಿ ಬೆವರಿ ಕೆಟ್ಟ ವಾಸನೆ ಬರುತ್ತದೆ. ಇದನ್ನು ತಡೆಯಲು ಅನೇಕ ಸುಗಂಧ ದ್ರವ್ಯಗಳಿದ್ದರೂ ಅದರ ಬದಲು ಗ್ರೀನ್ ಟೀ ಬಳಕೆ ನಿಮಗೆ ನೈಸರ್ಗಿಕ ಸುಗಂಧವನ್ನು ನೀಡುವುದು. ಅದಕ್ಕಾಗಿ ಗುಲಾಬಿಯ ದಳದ ಜೊತೆ ಗ್ರೀನ್ ಟೀ ಬೆರೆಸಿ ಈ ಮಿಶ್ರಣವನ್ನು ಒಂದು ರಾತ್ರಿ ಇಟ್ಟು ಅದನ್ನು ನಿಮ್ಮ ಸ್ನಾನದ ನೀರಿನಲ್ಲಿ ಹಾಕಿ ಸ್ನಾನ ಮಾಡಿದರೆ ನಿಮ್ಮ ದೇಹದ ದುರ್ವಾಸನೆ ದೂರವಾಗುವುದು.
ಬ್ಲಾಕ್ ಹೆಡ್ಸ್: ಮುಖದಲ್ಲಿ ಉಂಟಾಗುವ ಬ್ಲಾಕ್ ಹೆಡ್ಸ್ ಅನ್ನು ಗ್ರೀನ್ ಟೀಯಿಂದ ತೆಗೆಯಬಹುದಾಗಿದೆ. ಸ್ವಲ್ಪ ಗ್ರೀನ್ ಟೀಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರ ಮಾಡಿ ಬ್ಲಾಕ್ ಹೆಡ್ಸ್ ರಿಮೋವರ್ ಬಳಸಿ ನಿಮ್ಮ ಮುಖವನ್ನು ಶುಚಿಗೊಳಸಿ. ದಿನಾಲೂ ಗ್ರೀನ್ ಟೀ ಸೇವನೆ ನಿಧಾನವಾಗಿ ಬ್ಲಾಕ್ ಹೆಡ್ಸ್ ಹೋಗಲಾಡಿಸಲು ಸಹಾಯ ಮಾಡುತ್ತದೆ.
ಇನ್ನೇಕೆ ತಡ ಪ್ರಾರಂಭಿಸಿ ಗ್ರೀನ್ ಟೀ ಸಹವಾಸ, ಪಡೆಯಿರಿ ಮೇಣದಂತೆ ಹೊಳೆಯುವ ತ್ವಚೆ.



Click it and Unblock the Notifications
