Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಷ್ಕಳಂಕ ತ್ವಚೆ ಪಡೆಯಲು ಈ ಜ್ಯೂಸ್ ಕುಡಿಯಿರಿ

ಮೊಡವೆ ಕಲೆ ನಿವಾರಿಸಿ ಚರ್ಮವನ್ನು ತಿಳಿಗೊಳಿಸುವ ಜ್ಯೂಸ್ ಗಳು:
* ಕ್ಯಾರೆಟ್ ಜ್ಯೂಸ್: ಕ್ಯಾರೆಟ್ ನಲ್ಲಿ ಮೊಡವೆ ನಿವಾರಿಸಲು ಸಹಾಯ ಮಾಡುವ ವಿಟಮಿನ್ ಮತ್ತು ಪ್ರೊಟೀನ್ ಇವೆ. ಇದರಲ್ಲಿನ ಕ್ಯಾರೆಟೊನೈಡ್ಸ್ ಮತ್ತು ಬೆಟಾ ಕ್ಯಾರೊಟೀನ್ ಅಂಶ ತ್ವಚೆಯನ್ನು ಶುದ್ಧಗೊಳಿಸಿ ಹೊಳೆವ ತ್ವಚೆ ನೀಡುತ್ತದೆ. ದಿನವೂ ಒಂದು ಲೋಟ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಅಸಿಡಿಟಿ ಕಡಿಮೆ ಮಾಡುವುದರೊಂದಿಗೆ ಮೊಡವೆಗೆ ಕಾರಣವಾಗಿರುವ, ದೇಹದಲ್ಲಿರುವ ವಿಷಕಾರಿ ಅಂಶ ತೊಲಗಿಸಲು ನೆರವಾಗುತ್ತದೆ.
* ನಿಂಬೆ ಶರಬತ್ತು: ತ್ವಚೆಯ ರಂಧ್ರದಲ್ಲಿ ಅತಿಯಾದ ಎಣ್ಣೆಯಂಶ ಸೇರಿಕೊಂಡು ಮೊಡವೆ ಉಂಟಾಗುವುದನ್ನು ತಡೆಯಲು ನಿಂಬೆರಸ ತುಂಬಾ ಅವಶ್ಯಕ. ತ್ವಚೆಯ ರಂಧ್ರದಲ್ಲಿ ಎಣ್ಣೆ ಸೇರಿಕೊಳ್ಳುವುದನ್ನು ನಿಂಬೆ ನಿಯಂತ್ರಿಸುತ್ತದೆ. ಇದರಲ್ಲಿನ ಸಿಟ್ರಿಕ್ ಆಸಿಡ್ ಚರ್ಮದ ನಿರ್ಜೀವ ಕಣಗಳನ್ನು ಹೋಗಲಾಡಿಸಿ ಹೊಸ ಜೀವಕಣ ಸೃಷ್ಟಿಸಲು ಸಹಾಯ ಮಾಡುತ್ತದೆ. ತ್ವಚೆ ತಾಜಾ ಮತ್ತು ಹೊಳೆವಂತೆ ಮಾಡುತ್ತದೆ. ದಿನವೂ ಒಂದು ಗ್ಲಾಸ್ ನಿಂಬೆ ಶರಬತ್ತು ಕುಡಿಯುವುದರಿಂದ ಚರ್ಮ ಹೊಳೆಯುವುದಲ್ಲದೆ ದೇಹವೂ ಚೈತನ್ಯದಿಂದಿರುತ್ತದೆ.
* ಸೇಬಿನ ಜ್ಯೂಸ್: ಜೇನು ಅಥವಾ ಹಾಲಿನೊಂದಿಗೆ ಸೇಬಿನ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯದೊಂದಿಗೆ ತ್ವಚೆಗೂ ಚೈತನ್ಯ ನೀಡುತ್ತದೆ. ಈ ಮೂಲಕ ಚರ್ಮದ ಗುಣಮಟ್ಟ ಹೆಚ್ಚಾಗಿ ಮೊಡವೆಯೂ ನಿವಾರಣೆಯಾಗುತ್ತದೆ. ಇದರಲ್ಲಿರುವ ವಿಟಮಿನ್, ಪ್ರೊಟೀನ್, ಮಿನರಲ್ ಚರ್ಮದ ರಂಧ್ರ ಮುಚ್ಚಿಹೋಗುವುದನ್ನು ತಡೆದು ದೇಹದ ಒಳಗಿನಿಂದಲೇ ಆರೈಕೆ ಮಾಡುತ್ತದೆ.
* ಚೆರ್ರಿ ಜ್ಯೂಸ್: ಚೆರ್ರಿ ಜ್ಯೂಸ್ ಸೇವನೆಯಿಂದ ತ್ವಚೆಯಲ್ಲಿನ ಮೊಡವೆ ಮತ್ತು ಕಲೆಗಳು ಕ್ರಮೇಣ ನಿವಾರಣೆಯಾಗುತ್ತದೆ. ರಕ್ತದಲ್ಲಿ ಸೇರಿಕೊಂಡು ಮೊಡವೆಗೆ ಕಾರಣವಾಗುವ ತ್ಯಾಜ್ಯವನ್ನು ಚೆರ್ರಿ ಜ್ಯೂಸ್ ನಿವಾರಿಸುತ್ತದೆ. ಇದರಲ್ಲಿರುವ ಮಿನರಲ್ ತ್ವಚೆಯನ್ನೂ ಶುಚಿಗೊಳಿಸಿ ತ್ವಚೆ ಮಿರಮಿರನೆ ಮಿರುಗುವಂತೆ ಮಾಡುತ್ತದೆ.



Click it and Unblock the Notifications
