Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಡವೆ... ಬೇಡ ಇದರ ಗೊಡವೆ

ಆದ್ದರಿಂದ ಸೂಕ್ತ ಚಿಕಿತ್ಸೆಯಿಂದ ಮೊಡವೆ ನಿವಾರಿಸಿದರೆ ಮಾತ್ರ ತ್ಚಚೆ ಸೌಂದರ್ಯವನ್ನು ಉಳಿಸಿಕೊಳ್ಳಬಹುದು.
ಎದೆ ಅಥವಾ ಬೆನ್ನಿನ ಮೇಲಿನ ಮೊಡವೆಗೆ ಕಾರಣಗಳು
1.ಎದೆ ಅಥವಾ ಬೆನ್ನಿನಲ್ಲಿ ಮೊಡವೆಗಳು ಮುಖದ ಮೊಡವೆಗಳ ಹಾಗೆ ದೇಹದಲ್ಲಿನ ಹಾರ್ಮೋನ್ ಗಳ ಏರುಪೇರುನಿಂದಾಗಿ ಉಂಟಾಗುತ್ತದೆ. ಈ ರೀತಿಯ ಮೊಡವೆಗಳು ಹದಿಹರೆಯದವರಲ್ಲಿ ಅಷ್ಟೆ ಅಲ್ಲದೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು.
2.ದೇಹದಲ್ಲಿನ ಉಷ್ಣತೆ ಅಂಶ ಹೆಚ್ಚಾದರೆ ಅಥವಾ ಖಾರ ಮತ್ತು ಎಣ್ಣೆ ಅಂಶವಿರುವ ತಿನಿಸುಗಳ ಸೇವನೆಯಿಂದ ಕೂಡ ಈ ರೀತಿಯ ಮೊಡವೆಗಳು ಉಂಟಾಗುತ್ತವೆ.
3. ಕೆಲವು ದಿನಗಳ ಕಾಲ ತಲೆ ಸ್ನಾನ ಮಾಡದಿದ್ದರೆ ಈ ರೀತಿಯ ಮೊಡವೆಗಳು ಉಂಟಾಗುತ್ತವೆ.
ಈ ರೀತಿಯ ಮೊಡವೆಗಳು ದೇಹದಲ್ಲಿ ಕಪ್ಪು ಕಲೆಗಳನ್ನು ಉಂಟು ಮಾಡುವುದರಿಂದ ಇದರ ನಿವಾರಣೆಯ ಬಗ್ಗೆ ಗಮನ ಹರಿಸುವುದು ಸೂಕ್ತ.
ಬ್ಯಾಕ್ಟೀರಿಯ ಸೋಂಕುಗಳಿಂದ ಉಂಟಾಗುವ ಮೊಡವೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗದಿದ್ದರೂ ಅದು ಹೆಚ್ಚಾಗದಂತೆ
ಈ ಕೆಳಗಿನ ಸಲಹೆಗಳಿಂದ ತಡೆಯಬಹುದು.
1 ನಿಮ್ಮ ಬೆನ್ನಲ್ಲಿ ಅಥವಾ ಎದೆಯಲ್ಲಿ ಈ ರೀತಿಯ ಮೊಡವೆಗಳು ಉಂಟಾಗಿದ್ದರೆ ಮೈಗಂಟಿದ ಬಟ್ಟೆಗಳನ್ನು ಧರಿಸಬೇಡಿ. ಮೈಗಂಟಿದ ಬಟ್ಟೆಗಳಿಂದ ಬೆವರು ಹೆಚ್ಚು ಉತ್ಪತ್ತಿಯಾಗಿ ಮೊಡವೆಗಳು ಹೆಚ್ಚಾಗುತ್ತವೆ.
2 ಸಿಂತೆಟಿಕ್ ಬಟ್ಟೆಗಳಿಗೆ ಬದಲು ಹತ್ತಿಯ ಬಟ್ಟೆಗಳನ್ನು ಧರಿಸಿ. ಟೀ ಶರ್ಟ್ ಉಪಯೋಗಿಸುವುದಕ್ಕಿಂತ ಶರ್ಟ್ ಬಳಸಿ.
3 ಸ್ನಾನಕ್ಕೆ ಮೊಡವೆ ನಿವಾರಕ ಸೋಪುಗಳನ್ನು ಬಳಸಿ. ಒಂದು ವೇಳೆ ಅತೀ ಹೆಚ್ಚಿನ ಮೊಡವೆಗಳಿದ್ದರೆ ಮೆಡಿಕಲ್ ಜೆಲ್ ಗಳನ್ನು ಉಪಯೋಗಿಸಿ.
4 ಸ್ನಾನದ ನೀರಿನಲ್ಲಿ ಕಹಿ ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡುವುದರಿಂದಲೂ ಮೊಡವೆಗಳು ಕಡಿಮೆಯಾಗುತ್ತವೆ.
5 ಗುಲಾಬಿ ಮತ್ತು ನಿಂಬೆ ರಸವನ್ನು ಬಳಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಗುಲಾಬಿ ತುರಿಕೆಯನ್ನು ಕಡಿಮೆ ಮಾಡುತ್ತದೆ ನಿಂಬೆಯಲ್ಲಿರುವ ವಿಟಮಿನ್ ಸಿ ಕೀಟಾಣುಗಳ ವಿರುದ್ಧ ಹೋರಡುತ್ತದೆ.
6 ತೇಯ್ದ ಗಂಧ, ಮುಲ್ತಾನಿಮಿಟಿಯನ್ನು ಬಳಸುವುದರಿಂದಲೂ ಮೊಡವೆಗಳನ್ನು ನಿವಾರಿಸಬಹುದಾಗಿದೆ.
ಈ ಸಲಹೆಗಳು ನಿಮ್ಮ ಮೊಡವೆಯ ಸಮಸ್ಯೆ ಪರಿಹರಿಸಬಹುದು. ಆದರೆ ನೆನಪಿಡಿ ಮೊಡವೆಗಳು ಬಂದು ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮೇಲೆ ಹೇಳಿದ ಸಲಹೆಗಳನ್ನು ಪಾಲಿಸಿದರೆ ಮೊಡವೆ ರಹಿತ ಆರೋಗ್ಯ ಚರ್ಮ ನಿಮ್ಮದಾಗುವುದು.



Click it and Unblock the Notifications
