Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬಯಸಿ ಪಡೆಯಬಹುದಾದ ಸೌಂದರ್ಯ ಹೆಸರುಬೇಳೆಯಲ್ಲಿದೆ

ದೇಹಕ್ಕೆ ಮತ್ತು ತ್ವಚೆಗೆ ಹೆಸರು ಬೇಳೆಯಿಂದ ಯಾವ ರೀತಿ ಉಪಯೋಗ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ:
ಸೂಚನೆ: ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಅದು ಇನ್ನೂ ತರಿತರಿಯಾಗಿದ್ದರೆ ಅದರೊಂದಿಗೆ ಕಾರ್ನ್ ಫ್ಲೋರ್ ಬೆರೆಸಿ ಪುಡಿ ಮಾಡಬೇಕು.
1. ತುಂಬಾ ಸೂಕ್ಷ್ಮ ತ್ವಚೆ ಹೊಂದಿರುವವರು ಹೆಸರು ಬೇಳೆಯ ಸ್ಕ್ರಬ್ ತಯಾರಿಸಿಕೊಳ್ಳಬಹುದು. ಹೆಸರು ಬೇಳೆಯ ಹಿಟ್ಟನ್ನು ಸ್ವಲ್ಪ ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಮತ್ತು ದೇಹಕ್ಕೆ ಲೇಪಿಸಿಕೊಳ್ಳಬೇಕು. ಅದು ಒಣಗಿದ ನಂತರ ಬಿಸಿ ನೀರಿನಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಪೂರ್ತಿ ಒರೆಸಿಕೊಳ್ಳಬೇಕು. ಸ್ನಾನಕ್ಕೆ ಮುಂಚೆ ಈ ರೀತಿ ಮಾಡಿಕೊಂಡರೆ ಉತ್ತಮ. ಇದರಿಂದ ದೇಹದ ಹೊಳಪು ಹೆಚ್ಚುತ್ತದೆ.
2. ಮನೆಯಲ್ಲೇ ತಯಾರಿಸಿದ ತುಪ್ಪದೊಂದಿಗೆ ಹೆಸರು ಬೇಳೆ ಹಿಟ್ಟನ್ನು ಬೆರೆಸಿ ಮೇಲ್ಮುಖವಾಗಿ ದೇಹಕ್ಕೆ ಮಸಾಜ್ ಮಾಡಬೇಕು. ತುಪ್ಪ ಚರ್ಮಕ್ಕೆ ಹೊಳಪು ನೀಡಿದರೆ ಹೆಸರಿನ ಹಿಟ್ಟು ಚರ್ಮದ ನಿರ್ಜೀವ ಕಣಗಳನ್ನು ಕಿತ್ತೊಗೆಯುತ್ತದೆ.
3. ಹೆಸರು ಬೇಳೆಯ ವಾಸನೆ ಸಹಿಸಲು ನಿಮಗೆ ಅಸಾಧ್ಯವೆನಿಸಿದರೆ ಅದರೊಂದಿಗೆ ರುಬ್ಬಿದ ಗುಲಾಬಿ ದಳ ಅಥವಾ ತುಳಸಿ ದಳವನ್ನು ಬೆರೆಸಿ ಹಚ್ಚಿಕೊಳ್ಳಬಹುದು. ಇದು ದೇಹವನ್ನು ಮೃದುಗೊಳಿಸುವುದರೊಂದಿಗೆ ದೇಹದ ದುರ್ವಾಸನೆಯನ್ನು ತೊಲಗಿಸುವ ನೈಸರ್ಗಿಕ ವಿಧಾನವಾಗಿದೆ.



Click it and Unblock the Notifications
