Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಟೊಮೊಟೊ ತಿನ್ನಿ, ತ್ವಚೆ ತಾಜಾ ಆಗಿರುತ್ತೆ

ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ಈ ಅಂಶ ತಿಳಿದುಬಂದಿದೆ. ಪ್ರತಿನಿತ್ಯ 5 ಚಮಚದಷ್ಟು ಟೊಮೊಟೊ ರಸ ನಮ್ಮ ಆಹಾರದಲ್ಲಿದ್ದರೆ ಸಾಕು, ಅದು ಚರ್ಮವನ್ನು ಸೂರ್ಯನ ಯುವಿ ಕಿರಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
ಯುವಿ ಕಿರಣಗಳಿಂದ ಚರ್ಮ ಕಪ್ಪುಗಟ್ಟುವುದು ಮಾತ್ರವಲ್ಲ, ಇದರಿಂದ ಬೇಗನೆ ಸುಕ್ಕು ಮೂಡುವುದು ಮತ್ತು ಚರ್ಮ ಕ್ಯಾನ್ಸರ್ ನಂತರ ಗಂಭೀರ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಟೊಮೊಟೊ ಪ್ರಮಾಣ ನಮ್ಮ ಆಹಾರದಲ್ಲಿ ಹೆಚ್ಚಿದ್ದರೆ ಅಂತಹ ತೊಂದರೆಗಳನ್ನು ನಿವಾರಿಸಬಹುದು ಎಂದು ಈ ಸಂಶೋಧನೆ ವರದಿ ಮಾಡಿದೆ.
ಟೊಮೊಟೊವನ್ನು ಬೇಯಿಸಿದಾಗ ಅದರಿಂದ ಹೆಚ್ಚಾಗಿ ದೊರೆಯುವ ಲೈಸೊಪೀನ್ ಎಂಬ ಅಂಶ ಚರ್ಮದ ರಕ್ಷಣೆಗೆ ಮುಂದಾಗುತ್ತದೆ ಎಂದು ಸಂಶೋಧನಾಕಾರರು ಕಂಡು ಹಿಡಿದಿದ್ದಾರೆ.
ಸಂಶೋಧನೆಯ ಅಂಗವಾಗಿ 3 ತಿಂಗಳ ಅವಧಿ 10 ಮಂದಿಗೆ ಪ್ರತಿನಿತ್ಯ 55ಗ್ರಾಂ ಟೊಮೊಟೊ ಪೇಸ್ಟ್ ಸೇವಿಸಲು ಹೇಳಲಾಯಿತು. ಇದರಿಂದ ಟೊಮೊಟೊ ಪೇಸ್ಟ್ ತಿಂದವರು ಚರ್ಮದ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಶೇ.33ರಷ್ಟು ಹೆಚ್ಚು ಗಳಿಸಿದ್ದಾಗಿ ವರದಿಯಾಗಿದೆ. ಹಾಗೆಯೇ ಚರ್ಮಕ್ಕೆ ಪೋಷಣೆ ನೀಡುವ ಪ್ರೊಕೊಲಾಗೆನ್ ಎಂಬ ಅಂಶ ಇವರಲ್ಲಿ ಏರಿಕೆಯಾಗಿದ್ದು ಕಂಡು ಬಂದಿದೆ.
ಆಹಾರದಲ್ಲಿ ಟೊಮೊಟೊ ಸೇವನೆ ಹೆಚ್ಚಿದ್ದಷ್ಟು ಚರ್ಮದಲ್ಲಿನ ಪ್ರೊಕೊಲಾಗೆನ್ ಅಂಶ ಹೆಚ್ಚಾಗಿ ಚರ್ಮವನ್ನು ಪೋಷಿಸುತ್ತದೆ, ಇದರಿಂದ ನಮ್ಮ ಚರ್ಮವನ್ನು ತಾಜಾ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಎಂದು ತಿಳಿದುಬಂದಿದೆ.



Click it and Unblock the Notifications
