Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವೈನ್ ನಿಂದ ತ್ವಚೆ ಫೈನ್ ; ಸುಕೋಮಲೆಯರಿಗೆ ಮಾತ್ರ

ನಿಮ್ಮ ತ್ವಚೆಯನ್ನು ಇನ್ನಷ್ಟು ಕಾಂತಿಯುತಗೊಳಿಸಲು ಹಾಗೂ ಮತ್ತಷ್ಟು ಸುಂದರವಾಗಿ ಕಾಣಲು ವೈನ್ ಮಿಶ್ರಿತ ಫೇಶಿಯಲ್ ಅಥವಾ ವೈನ್ ಮಾಸ್ಕ್ ಹಾಕಿಕೊಂಡರೆ ಸಾಕು, ತ್ವಚೆ ಕಂಗೊಳಿಸುವುದರಲ್ಲಿ ಎರಡು ಮಾತಿಲ್ಲ.
ವೈನ್ ಫೇಶಿಯಲ್ ನ ಉಪಯೋಗ ಹಾಗೂ ಚರ್ಮದ ರಕ್ಷಣೆ:
* ವೈನ್ ಫೇಶಿಯಲ್ ನಿಂದ ತ್ವಚೆಯಲ್ಲಿ ಅಡಗಿರುವ ನಿರ್ಜೀವ ಕಣಗಳನ್ನು ತೊಲಗಿಸಿ ರಕ್ತ ಸಂಚಲನ ಹೆಚ್ಚಿಸಬಹುದು.
* ವೈನ್ ನಿಂದ ಆಗಾಗ್ಗೆ ಮಸಾಜ್ ಮಾಡಿದರೆ ಅತಿ ಬೇಗನೆ ಸುಕ್ಕು ಮೂಡಿ ವಯಸ್ಸಾದಂತೆ (ಅಕಾಲ ಮುಪ್ಪು) ಕಾಣುವುದನ್ನು ಕಡಿಮೆ ಮಾಡಬಹುದು.
* ವೈನ್ ತ್ವಚೆಗೆ ಕಾಂತಿ ಕೊಡುವುದಲ್ಲದೆ ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ.
* ವೈನ್ ಅನೇಕ ಚಿಕಿತ್ಸಕ ಗುಣಗಳನ್ನು ಹೊಂದಿದ್ದು, ಕೇವಲ ಚರ್ಮದ ರಕ್ಷಣೆಯಲ್ಲದೆ, ತಲೆನೋವಿನಿಂದ ಬಳಲುತ್ತಿರುವವರಿಗೆ ಕೂಡ ಉಪಕಾರಿ.
* ಸನ್ ಬರ್ನ್ ಮತ್ತು ಟ್ಯಾನ್ ಸಮಸ್ಯೆಯಿಂದ ಕಂಗಾಲಾಗಿರುವವರಿಗೆ ಇದು ಹೇಳಿ ಮಾಡಿಸಿದ ದ್ರಾಕ್ಷಾರಸ!
ಗಮನಿಸಿ : ವೈನ್ ನಿಂದ ಮಸಾಜ್ ಮಾಡಿಕೊಳ್ಳುವ ಮೊದಲು ಕೆಲವೊಂದು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲು ಹಬೆಯನ್ನು ತೆಗೆದುಕೊಂಡು ಕ್ಲಿನ್ಸ್ ಮಾಡಿಕೊಂಡ ನಂತರ ವೈನ್ ಫೇಶಿಯಲ್ ನ ಪ್ಯಾಕ್ ಹಚ್ಚಿಕೊಳ್ಳಬೇಕು. ಯಾವುದಾದರೂ ಹಣ್ಣಿನ ತಿರುಳಿನೊಂದಿಗೆ ವೈನ್ ಬೆರೆಸಿ ಮಸಾಜ್ ಮಾಡಿದರೆ ತ್ವಚೆ ಕ್ರಮೇಣ ಕಾಂತಿಯುತವಾಗುತ್ತದೆ. ತುಂಬಾ ಸೂಕ್ಷ್ಮ ತ್ವಚೆ ಹೊಂದಿರುವವರು ಸ್ವಲ್ಪ ರೋಸ್ ವಾಟರ್ ನೊಂದಿಗೆ ಬೆರೆಸಿ ಮಸಾಜ್ ಮಾಡಿಕೊಂಡರೆ ಉತ್ತಮ.
ವೈನ್ ಮಾಸ್ಕ್ ಮತ್ತು ಅಲೋವೆರಾ : ಅಲೋವೆರಾವನ್ನು ರೆಡ್ ವೈನ್ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿಕೊಂಡರೆ ಹೆಚ್ಚು ಪ್ರಭಾವಶಾಲಿಯಾಗಿ ಪರಿಣಾಮ ತೋರಿಸುತ್ತದೆ. ಅಲೋವೆರಾ ತ್ವಚೆಯನ್ನು ತಣ್ಣಗಾಗಿಸಿದರೆ ವೈನ್ ಕ್ಲೆನ್ಸ್ ಮಾಡುತ್ತದೆ.
ವೈನ್ ಮತ್ತು ಜೇನು: 2-3 ಚಮಚ ಜೇನಿನೊಂದಿಗೆ ವೈನ್ ಬೆರೆಸಿ ಲೇಪಿಸಿದರೆ ಹೆಚ್ಚು ಕಾಂತಿಯುಕ್ತವಾಗುವುದಲ್ಲದೆ ಅತಿ ಬೇಗ ಸುಕ್ಕು ಬರುವುದನ್ನು ತಡೆಯುತ್ತದೆ.
ಈ ಫೇಶಿಯಲ್ ಗಳನ್ನು 10 ನಿಮಿಷಗಳ ನಂತರ ತೆಗೆದು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ವೈನ್ ನಲ್ಲಿ ಇಷ್ಟೊಂದು ಒಳ್ಳೆಯ ಅಂಶಗಳು ಅಡಗಿರುವಾಗ ನಿಮ್ಮ ಸುಕೋಮಲ ಚರ್ಮಕಾಂತಿಯ ಬಗ್ಗೆ ಅಸಡ್ಡೆ ತೋರುವುದು ತಪ್ಪು ತಪ್ಪು.



Click it and Unblock the Notifications
