Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಈ ಬೇಸಿಗೆಯಲ್ಲಿ ಕಾಂತಿಯುತ ತ್ವಚೆಗೆ ಇಲ್ಲಿವೆ ಬೆಸ್ಟ್ ಟಿಪ್ಸ್
ಇದು ಹೂವು ಅರಳುವ, ಎಲೆಗಳು ಬಣ್ಣ ಬದಲಾಯಿಸುವ ಸಮಯ. ಅಂದ್ರೆ ಬೇಸಿಗೆ ಅಥವಾ ವಸಂತ ಕಾಲ. ಈ ಸಮಯದಲ್ಲಿಸೂರ್ಯನ ಶಾಖ ಯಾವ ಮಟ್ಟಿಗೆ ಇರುತ್ತೆ ಅನ್ನೋದನ್ನ ಪ್ರತಿಯೊಬ್ಬರೂ ಈಗ ಅನುಭವಿಸುತ್ತಿದ್ದಾರೆ. ಇಂತಹ ಶಾಖ ನಿಮ್ಮ ತ್ವಚೆಯ ಮೇಲೆ ಇನ್ನೆಂತಹ ಪರಿಣಾಮಬೀರಬಹುದು ಎಂಬುದನ್ನು ಒಮ್ಮೆ ಯೋಚಿಸಿ.
ಅತಿಯಾದ ಬಿಸಿಲು, ತೇವಾಂಶದ ಕೊರತೆಯಿಂದ ತ್ವಚೆ ಮೊಡವೆ, ಬಿರುಕು ಬಿಡುವಿಕೆ, ಡಲ್ ಸ್ಕಿನ್ನಂತಹ ಸಾಕಷ್ಟು ಸಮಸ್ಯೆಗಳಿಗೆ ಒಳಗಾಗುತ್ತವೆ. ಇದರಿಂದ ನೀವು ಪಾರಾಗಬೇಕಿದ್ದಲ್ಲಿ ನಿಮ್ಮ ತ್ವಚೆಯ ಆರೈಕೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳೋದು ಅನಿವಾರ್ಯ. ಹಾಗಾದ್ರೆ ಈ ಬೇಸಿಗೆ ಕಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಹೇಗಿರಬೇಕು? ಯಾವೆಲ್ಲಾ ಉತ್ಪನ್ನಗಳನ್ನು ಬಳಸಬೇಕು ಅಂತ ಯೋಚಿಸುವವರಿಗೆ ಇಲ್ಲಿದೆ ಉತ್ತರ.

ಇಲ್ಲಿ ನಾವು ವಸಂತ ಮತ್ತು ಬೇಸಿಗೆ ಕಾಲಕ್ಕೆ 5 ತ್ವಚೆಯ ಸಲಹೆಗಳನ್ನು ನೀಡಿದ್ದೇವೆ:
1. ವಿಟಮಿನ್ ಸಿ ಇರುವ ಸನ್ಸ್ಕ್ರೀನ್ ಆರಿಸಿ:
ವಿಟಮಿನ್ ಸಿ ಚರ್ಮದ ಆರೈಕೆಗೆ ಅತ್ಯಗತ್ಯ ಅಂಶವಾಗಿದ್ದು, ಇದು ಸೂರ್ಯನ ಹಾನಿಯಿಂದ ತ್ವಚೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಉತ್ಕರ್ಷಣ ನಿರೋಧಕಗಳ ವಿರುದ್ಧ ಹೋರಾಡಿ, ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಈ ಮೂಲಕ ವಯಸ್ಸಾಗುವಿಕೆಯ ವಿರೋಧಿ ಘಟಕಾಂಶವಾಗಿ ಕಾರ್ಯನಿರ್ವಹಿಸುತ್ತದೆ. ಇಂತಹ ವಿಟಮಿನ್ ಸಿಯನ್ನು ಸನ್ಸ್ಕ್ರೀನ್ನೊಂದಿಗೆ ಸಂಯೋಜಿಸುವುದರಿಂದ, ನಿಮ್ಮ ತ್ವಚೆಯು ಪರಿಸರದ ಹಾನಿಯಿಂದ ರಕ್ಷಣೆ ಪಡೆಯುವುದಲ್ಲದೇ, ಹಾನಿಕಾರಕ ಯುವಿ ಕಿರಣಗಳಿಂದಲೂ ರಕ್ಷಣೆ ನೀಡುತ್ತದೆ.
2. ಪೆಪ್ಟೈಡ್ಗಳಿರುವ ರೆಟಿನಾಲ್ ಸಹ ಉತ್ತಮ:
ಹೌದು, ವರ್ಷದ ಈ ಸಮಯದಲ್ಲಿ ನಿಮ್ಮ ರಾತ್ರಿಯ ದಿನಚರಿಗೆ ರೆಟಿನಾಲ್ ಸೇರಿಸಿ. ಈ ವಿಟಮಿನ್ ಎ ಉತ್ಪನ್ನಗಳು ತ್ವಚೆಯ ಆರೈಕೆಗೆ ಪ್ರಮುಖವಾಗಿವೆ, ಏಕೆಂದರೆ ಅವು ಮೊಡವೆಗಳಿಂದ ಹಿಡಿದು ವಯಸ್ಸಾಗುವಿಕೆಯ ಲಕ್ಷಣಗಳಾದ ಸೂಕ್ಷ್ಮ ರೇಖೆಗಳವರೆಗೆ ಎಲ್ಲದಕ್ಕೂ ಚಿಕಿತ್ಸೆ ನೀಡುತ್ತವೆ. ಪೆಪ್ಟೈಡ್ಗಳು ಚರ್ಮದ ಕೋಶಗಳನ್ನು ಪುನರ್ಯೌವನಗೊಳಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ. ಇವೆರಡೂ ಒಟ್ಟು ಸೇರಿ, ನಿಮ್ಮ ಮೈಬಣ್ಣವನ್ನು ಇನ್ನಷ್ಟು ಮೃದು ಹಾಗೂ ಕಾಂತಿಯುತಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
3. ಸ್ಯಾಲಿಸಿಲಿಕ್ ಆಸಿಡ್ ಜೊತೆಗೆ ನಿಯಾಸಿನಾಮೈಡ್ ಬಳಸಿ:
ತ್ವಚೆಯ ಟೋನ್ ಸರಿತೂಗಿಸಲು ಹಾಗೂ ಹೈಪರ್ಪಿಗ್ಮೆಂಟೇಶನ್ ಚಿಕಿತ್ಸೆಗಾಗಿ ನಿಯಾಸಿನಾಮೈಡ್ ಒಂದು ಪ್ರಮುಖ ಅಂಶವಾಗಿದೆ. ಇನ್ನೂ ಸ್ಯಾಲಿಸಿಲಿಕ್ ಆಮ್ಲವು ನಿಮ್ಮ ತ್ವಚೆಯನ್ನು ಬಿರುಕುಗಳಿಂದ ದೂರವಿಡಲು ಸಹಾಯ ಮಾಡುತ್ತದೆ. ಆದರೆ, ಇವುಗಳನ್ನು ಒಟ್ಟಿಗೆ ಬಳಸುವುದರಿಂದ ನಿಮ್ಮ ತ್ವಚೆಯ ರಂಧ್ರಗಳ ಗಾತ್ರವನ್ನು ಕಡಿಮೆಮಾಡಿ, ಮೊಡವೆಯಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅಷ್ಟೇ ಅಲ್ಲ, ವಯಸ್ಸಾಗುವಿಕೆಯ ಚಿಹ್ನೆಗಳ ವಿರುದ್ಧ ಕೆಲಸ ಮಾಡಿ, ತ್ವಚೆಯನ್ನು ಆರೋಗ್ಯಕರವಾಗಿಟ್ಟು, ಒಳಗಿನಿಂದಲೇ ಕಾಂತಿಯುತಗೊಳಿಸುವುದು.
4. ಎಫ್ಫೋಲಿಯೇಟಿಂಗ್ ಆಮ್ಲಗಳೊಂದಿಗೆ ಹೈಲುರಾನಿಕ್ ಆಮ್ಲ:
ಎಫ್ಫೋಲಿಯೇಟಿಂಗ್ ಆಸಿಡ್ ಚರ್ಮದ ಮೇಲಿನ ಪದರವನ್ನು ತೆಗೆದುಹಾಕುವಲ್ಲಿ ಉತ್ತಮ ಕೆಲಸವನ್ನು ಮಾಡಿ, ಹೊಸ ಚರ್ಮ ಬೆಳವಣಿಗೆಗೆ ಸೂಕ್ತ ಅವಕಾಶ ಕಲ್ಪಿಸಿಕೊಡುತ್ತವೆ. ಹೈಲುರಾನಿಕ್ ಆಸಿಡ್ ತ್ವಚೆಯ ತೇವಾಂಶವನ್ನು ಮರಳಿ ಬರುವಲ್ಲಿ ಸಹಕಾರಿ. ಆದ್ದರಿಂದ ಇವೆರಡೂ ಒಟ್ಟಿಗಿರುವ ಉತ್ಪನ್ನವು ನಿಮ್ಮ ತ್ವಚೆ ಹೊಸದಾಗಿ ರೂಪುಗೊಳ್ಳಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ, ದೀರ್ಘಕಾಲದ ಪ್ರಯೋಜನಗಳನ್ನು ಸಹ ನೀಡುತ್ತವೆ.
5. ವಿಟಮಿನ್ ಸಿ ಮತ್ತು ವಿಟಮಿನ್ ಇ:
ನಿಮಗೆಲ್ಲ ತಿಳಿದಿರುವ ಹಾಗೇ ವಿಟಮಿನ್ ಸಿ ತ್ವಚೆಯ ಕಾಂತಿಗೆ ಅವಶ್ಯಕವಾಗಿದೆ. ಹಾಗೇಯೇ ವಿಟಮಿನ್ ಇ ಚರ್ಮವನ್ನು ಮೃದುವಾಗಿರಿಸಲು ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡದಿಂದ ತ್ವಚೆಯನ್ನು ರಕ್ಷಿಸಲು ಮತ್ತು ಚರ್ಮದ ಮೃದುತ್ವವನ್ನು ಕಾಪಾಡಿಕೊಳ್ಳಲು ಇವೆರಡನ್ನು ಒಟ್ಟಿಗೆ ಬಳಸಬಹುದು. ಇದರಿಂದ ಈ ಕಲರ್ಫುಲ್ ವಾತಾವರಣವನ್ನು ಯಾವುದೇ ಕಿರಿಕಿರಿಯಿಲ್ಲದೇ ಅನುಭವಿಸಬಹುದು.
ನೆನಪಿಡಬೇಕಾದ ವಿಷಯಗಳು:
ಮೊದಲಿಗೆ ನಿಮ್ಮ ತ್ವಚೆಯ ಪ್ರಕಾರವನ್ನು ಗಮನಿಸಿಕೊಳ್ಳಿ.
ಯಾವುದೇ ಹೊಸ ಉತ್ಪನ್ನ ಉಪಯೋಗಿಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಿ.
ಮೊದಲಿಗೆ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಬಳಸಿ ನೋಡಿ. ನಂತರ ನಿಧಾನವಾಗಿ ಹೆಚ್ಚಿಸಿ.
ಚರ್ಮವನ್ನು ಅತಿಯಾಗಿ ಎಫ್ಫೋಲಿಯೇಟ್ ಮಾಡಬೇಡಿ ಅಥವಾ ಸ್ಕ್ರಬ್ ಮಾಡಬೇಡಿ, ಬದಲಿಗೆ ಉತ್ತಮ ಫಲಿತಾಂಶಗಳಿಗಾಗಿ ಪ್ರತಿದಿನ ಉತ್ತಮ ಚರ್ಮದ ಆರೈಕೆಯತ್ತ ಗಮನಹರಿಸಿ.



Click it and Unblock the Notifications












